ಬದುಕು ಅಂಕಗಳಿಂದ ನಿರ್ಧಾರವಾಗುವುದಿಲ್ಲ ಮೌಲ್ಯಯುತವಾದ ನಡುವಳಿಕೆಗಳು ಉತ್ತಮ ಬದುಕನ್ನು ನಿರ್ಧರಿಸುತ್ತದೆ:ಉಪ ನಿರ್ದೇಶಕ ಆದಿಶೇಷರಾವ್

Date:

ಬಾಗೇಪಲ್ಲಿ:- ವಿದ್ಯಾರ್ಥಿಗಳು ಪಡೆದುಕೊಳ್ಳುವ ಅಂಕ ಗಳಿಂದ ಉದ್ಯೋಗವನ್ನು ಪಡೆದುಕೊಳ್ಳಬಹುದು. ಆದರೆ
ಬದುಕು ಅಂಕಗಳಿಂದ ನಿರ್ಧಾರವಾಗುವುದಿಲ್ಲ. ಪ್ರಮಾಣಿಕತೆ, ಶಿಸ್ತು, ಸಂಸ್ಕಾರ ಹಾಗು ಮೌಲ್ಯಯುತವಾದ
ನಡುವಳಿಕೆಗಳು ಉತ್ತಮ ಬದುಕನ್ನು ನಿರ್ಧರಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ(ಪದವಿಪೂರ್ವ) ಉಪ ನಿರ್ದೇಶಕ
ಆದಿಶೇಷರಾವ್ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು 15 ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಅವರು
ಮಾತನಾಡಿದರು. ತಂದೆ-ತಾಯಿಗಳ ಕಷ್ಠ ಏನೇ ಇದ್ದರೂ ಅವರು ತಮ್ಮ ಮಕ್ಕಳ ಅಭಿವೃದ್ಧಿಗಾಗಿ ಎಲ್ಲಾ ತ್ಯಾಗವನ್ನು
ಮಾಡುತ್ತಾರೆ. ನಮ್ಮ ಸಂಸ್ಕೃತಿ,ಆಚಾರ-ವಿಚಾರಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ವಿದ್ಯೆ ಹಾಗು ಹೃದಯವಂತಿಕೆಯನ್ನು ಕಲಿಸುತ್ತಿರುವುದು ಕಾಲೇಜಿನ ಯಶಸ್ಸಿನ ಗುಟ್ಟು. ಪೋಷಕರ ಬೆವರಿನ ಕಷ್ಠವನ್ನು ವಿದ್ಯಾರ್ಥಿಗಳು ಮರೆಯಬಾರದು. ಸಮಾಜದಲ್ಲಿ ತಂದೆ- ತಾಯಿಗಳಿಂತ ಹೆಚ್ಚಿಗೆ ಪ್ರೀತಿಸುವವರು ಮತ್ಯಾರೂ ಇಲ್ಲ ಎಂಬ ಸತ್ಯವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ತಂದೆ- ತಾಯಿಗಳ ಆಶಯಗಳನ್ನು ಮಕ್ಕಳು ಈಡೇರಿಸಬೇಕು ಎಂದರು.

ಚಿಕ್ಕಬಳ್ಳಾಪುರ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಂಘದ ಅಧ್ಯಕ್ಷ ಕೆ.ಸತ್ಯೇಂದ್ರ ಮಾತನಾಡಿ, ವಿವೇಕಾನಂದರ ಹೆಸರಿನಲ್ಲಿರುವ ಈ ಕಾಲೇಜು ಪ್ರತಿ ವರ್ಷವೂ ಶೇ 100 ರಷ್ಟು ಫಲಿತಾಂಶವನ್ನು ಪಡೆದುಕೊಳ್ಳುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಶಿಸ್ತು- ಸಂಸ್ಕಾರವನ್ನು ಕಲಿಸುತ್ತಿದೆ. ದೇಶ ಪ್ರೇಮವನ್ನು ಮೂಡಿಸುವಂತಹ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು ಕಾರ್ಯನಿತರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಗಳಿಸುವ ಅಂಕಗಳಿಂದ ಉದ್ಯೋಗಾವಕಾಶ ಸಾಧ್ಯವಾದರೆ ಅವರಲ್ಲಿನ ಕಲೆ.ಸಾಹಿತ್ಯ, ಸಂಸ್ಕೃತಿಯಂತಹ ವಿಶೇಷ ಪ್ರತಿಭೆ ಸಮಾಜದಲ್ಲಿ ಉತ್ತಮವಾದ ಗೌರವವನ್ನು ತಂದುಕೊಡಲು ಕಾರಣವಾಗುತ್ತದೆ. ವಿದ್ಯಾರ್ಥಿ ದಿಸೆಯಿಂದಲೇ ವಿಶೇಷ ಸಾಧನೆ ಮೂಲಕ ವೇದಿಕೆಗಳನ್ನು ಪ್ರಶಸ್ತಿಗಳನ್ನು ಪಡೆದುಕೊಳ್ಳುವಂತಹ ಪರಪಾಠವನ್ನು ಬೆಳೆಸಿಕೊಳ್ಳಬೇಕು ಎಂದರು.

ಇದನ್ನು ಓದಿದ್ದೀರಾ…? ಅರಿಕುಂಟೆ ಗ್ರಾಪಂ ಅಧಿಕಾರಿಗಳಿಗೆ 25 ಸಾವಿರ ದಂಡ

ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಪಿ.ಜಿ.ನಂಜಿರೆಡ್ಡಿ, ಪ್ರಾಂಶುಪಾಲ
ಸಿ.ವಿ.ರಾಜಾರೆಡ್ಡಿ, ರಾಜಶೇಖರ್ ಉಪಸ್ಥಿತರಿದ್ದರು. ಕಳೆದ ಸಾಲಿನಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ
ಅಭಿನಂದನೆಗಳನ್ನು ಸಲ್ಲಿಸಲಾಯಿತು. ಕಾಲೇಜು ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನಸೆಳೆದವು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...