ಬಾಯಿ ಚಪಲಕ್ಕೆ ಸುಳ್ಳು ಹೇಳುವವರ ಬಗ್ಗೆ ಮತದಾರರು ಎಚ್ಚರ ವಹಿಸಬೇಕು

Date:

ಚಿಂತಾಮಣಿ:ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳದೆ ಕೇವಲ ಬಾಯಿ ಚಪಲಕ್ಕೆ ಕೆಲವರು ಸುಳ್ಳು ಹೇಳುವುದೇ ಒಂದು ರೂಡಿ ಯಾಗಿದೆ. ನಮ್ಮ ಬದುಕಿನಲ್ಲಿ ಯಾರು ಬದಲಾವಣೆ ತರ್ತಾರೆ ನಮ್ಮಗೆ ಬೇಕಾದಂತ ಸೌಲಭ್ಯ ಯಾರು ಒದಗಿಸಿಕೊಡ್ತಾರೆ ಯಾರು ನಮ್ಮ ಮಕ್ಕಳ ಭವಿಷ್ಯತ್ ಬಗ್ಗೆ ಚಿಂತನೆ ಮಾಡಿ ಅದಕ್ಕೆ ಬೇಕಾದಂತ ಏನೇನು ಮುಂಜಾಗೃತ ಅಭಿವೃದ್ಧಿ ಕೆಲಸಗಳನ್ನ ತೆಗೆದುಕೊಳ್ತಾರೆ ಅದನ್ನು ಮತದಾರರು ತಾವೆಲ್ಲ ಅರ್ಥ ಮಾಡಿಕೊಳ್ಳುಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌ ಕಿವಿಮಾತು ಹೇಳಿದರು.

ತಾಲ್ಲೂಕಿನ ಗೋಪಸಂದ್ರ ಗ್ರಾಮದ ರಸ್ತೆ ಅಭಿವೃದ್ಧಿ,ಕರಿಯಪಲ್ಲಿ ಗ್ರಾಮದಿಂದ ವಿವಿಧ ಕಡೆ ಹಾದುಹೋಗುವ ರಸ್ತೆ ಅಭಿವೃದ್ಧಿ,ಕಾಗತಿ ಮತ್ತು ದಿಗೂರು ಗ್ರಾಮಗಳ ಅಚ್ಚುಕಟ್ಟಿನಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯದ 10ಲಕ್ಷ ರೂಗಳ ವೆಚ್ಚದ ನಿರ್ಮಾಣ ಕಾಮಗಾರಿಗಳ ಭೂಮಿ ಪೂಜೆ,ತಾಲ್ಲೂಕಿನ ಹಿರಣ್ಯಪಲ್ಲಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ 7ಲಕ್ಷ ರೂಗಳ ನೂತನ ಗ್ರಂಥಾಲಯದ ಕಟ್ಟಡದ ಉದ್ಘಾಟನೆ ಬುಕ್ಕನಹಳ್ಳಿ ಎಸ್.ಸಿ ಕಾಲೋನಿಯಲ್ಲಿ 43 ಲಕ್ಷ ರೂ.ಗಳ ವೆಚ್ಚದ ರಸ್ತೆ ಮತ್ತು ಚರಂಡಿ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ನಗರಕ್ಕೆ ಹೊಂದಿಕೊಂಡಂತೆ ಇರುವ ಗೋಪಸಂದ್ರ ಮತ್ತು ಮಾರುತಿ ಬಡಾವಣೆ ಮತ್ತು ಕರಿಯಪಲ್ಲಿ ಗ್ರಾಮಗಳಿಗೆ ನಾನು 2008ರಿಂದ 2013ರ ಅವಧಿಯಲ್ಲಿ ಶಾಸಕನಾಗಿ ದ್ದಂತ ಸಂದರ್ಭದಲ್ಲಿ ಒಳಚರಂಡಿ ಕಾಮಗಾರಿ ಮಾಡಿಸಿದ್ದು ಇದೀಗ ಹಾಳಾಗಿದ್ದು ಅದನ್ನು ಸರಿಪಡಿಸುವ ಕೆಲಸ ಮಾಡುವುದಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.

ಬಹಳ ಹಿಂದೆ ಆಗಿರತಕ್ಕಂತ ರಸ್ತೆ ಈಗಾಗಲೇ ಬಹಳ ಹಾಳಾಗಿದೆ ಮತ್ತು ಒಳಚರಂಡಿ ಸಮಸ್ಯೆಯನ್ನು ಕೂಡ ಜನರು ಹೇಳಿದ್ದಾರೆ ಈಗಾಗಲೇ ನಾನು ನಗರಸಭೆಯ ಸಂಬಂಧಪಟ್ಟಂತ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ವಿವರಿಸಿದ್ದು ಸೋಮವಾರ ಅದಕ್ಕೆ ಸಂಬಂಧಪಟ್ಟ ಇಲಾಖೆಯವರು ಅವರು ಬಂದು ನೋಡ್ತಾರೆ ಅದನ್ನ ಯಾವ ರೀತಿ ಪರಿಹಾರ ಮಾಡಬಹುದು ಅನ್ನೋದನ್ನ ಅವರು ತಿಳಿಸಿದ ನಂತರ ಪರಿಹಾರ ದೊರಕಿಸಿಕೊಡುವುದಾಗಿ ಸಚಿವರು ಹೇಳಿದರು.

ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಈಗಾಗಲೇ ಚಾಲನೆ ನೀಡಿದ್ದು ನಗರದ ಪಾಲಿಟೆಕ್ನಿಕ್‌ಗೆ 76 ವರ್ಷ ಆಗಿದೆ ಸದರಿ ಪಾಲಿಟೆಕ್ನಿಕ್‌ಗೆ 76 ಕೋಟಿಯಲ್ಲಿ ಅಭಿವೃದ್ಧಿಯಾಗುತ್ತಿದೆ.ಮಹಿಳಾ ಕಾಲೇಜ್‌ಗೆ 23 ಕೋಟಿ,ಬಾಲಕರ ಕಾಲೇಜ್‌ ಗೆ 27 ಕೋಟಿ,14 ಗುಂಟೆ ಜಮೀನು ಸಹ ಕೊಡಿಸಿ ಅಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಿರುವುದಾಗಿ ಹೇಳಿದ ಸಚಿವರು. ಇಂಜಿನಿಯ ರಿಂಗ್ ಕಾಲೇಜು ಕಟ್ಟಡವನ್ನು 160 ಕೋಟಿಯಲ್ಲಿ ನಿರ್ಮಾಣವಾಗುತ್ತಿದೆ ಈಗಾಗಲೇ ಇಂಜನಿಯರ್ ವಿದ್ಯಾರ್ಥಿಗಳು ಮೂರನೇ ಸೆಮಿಸ್ಟರ್ ಪರೀಕ್ಷೆ ಬರೆಯುತ್ತಿದ್ದಾರೆ.ಮಕ್ಕಳು ಎರಡನೇ ವರ್ಷದ ಇಂಜಿನಿಯರಿಂಗ್ ನಡೀತಾ ಇದ್ದು ನನ್ನ ಇಲಾಖೆಯಲ್ಲಿ ಮಾಡಿದ ಸಾಧನೆಯ ಖುಷಿ ಇದೆ ಎಂದ ಸಚಿವರು ಕೈಗಾರಿಕಾ ಪ್ರದೇಶದ ಭೂಸ್ವಾಧೀನ ಪ್ರಕ್ರಿಯೆಗೆ ಈಗಾಗಲೇ 500 ಕೋಟಿ ಕೊಡಿಸಿದ್ದೀವಿ ಎಂದರು.

ಇದನ್ನು ಓದಿದ್ದೀರಾ..? ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವ್ಯಾಪಾರದಿಂದ ಸಾರ್ವಜನಿಕರಿಗೆ ಹಾಗೂ ಟ್ರಾಫಿಕ್‌ಗೆ ತೀವ್ರ ತೊಂದರೆಯಾಗುತ್ತಿದೆ

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಈರುಳ್ಳಿ ಶಿವಣ್ಣ, ಕೋಚಿಮುಲ್ ಮಾಜಿ ನಿರ್ದೇಶಕ ಊಲವಾಡಿ ಅಶ್ವಥನಾರಾಯಣಬಾಬು, ಊಲವಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷ ರತ್ನಮ್ಮ,ಉಪಾಧ್ಯಕ್ಷರಾದ ಕವಿತಾ,ಮುಖಂಡರಾದ ಮಂಜುನಾಥರೆಡ್ಡಿ,ಅಶ್ವಥರೆಡ್ಡಿ,ಗೋಪಸಂದ್ರ ಶ್ರೀರಾಮರೆಡ್ಡಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಣಿಕಂಠ, ಮಾಡಿಕೆರೆ ಈರಪ್ಪರೆಡ್ಡಿ,ಇಂಜನಿಯರ್ ಶ್ರೀಧರ್,ಶ್ರೀನಿವಾಸರೆಡ್ಡಿ,ಕರಿಯಪಲ್ಲಿ ಮಾಲಿಕ್ ಪಾಷಾ,ಪುಂಗನೂರ್ ನಾರಾಯಣಸ್ವಾಮಿ,ಸೈಯದ್ ಏಜಾಜ್,ಅಮ್ಜದ್ ಪಾಷಾ,ಹಾಜಿ ಅನ್ಸರ್ ಖಾನ್,ಲಕ್ಷ್ಮಿ ನಾರಾಯಣ ರೆಡ್ಡಿ,ಕೆ ಎನ್ ಅನಿಲ್ ಕುಮಾರ, ನಂದಿಗಾನಹಳ್ಳಿ ವಿ ಎಸ್ ಎಸ್ ಅಧ್ಯಕ್ಷರಾದ ನರಸಿಂಹಮೂರ್ತಿ,ರಾಜಣ್ಣ,ವೆಂಕಟರಾಮರೆಡ್ಡಿ ಶ್ರೀನಾಥ್,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...