ಬೈಕ್ ಮತ್ತು ಶಾಲಾ ವಾಹನ ಡಿಕ್ಕಿ: ಒಂದೇ ಕುಟುಂಬದ ನಾಲ್ವರು ಸಾವು

Date:

ಚಿಂತಾಮಣಿ : ಕೆಂಚಾರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಬುರುಡಗುಂಟೆ ಸಮೀಪದಲ್ಲಿ ಗುರುವಾರ ಸಂಜೆ ಬೈ ಮತ್ತು ಶಾಲಾ ವಾಹನ ನಡುವೆ ಡಿಕ್ಕಿಯಾಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಿಲಕಲನೇರ್ಪು ಗ್ರಾಮದ ಬಾಲಾಜಿ(32) ಅವರ ಮಾವ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಗ್ರಾಮದ ವೆಂಕಟೇಶಪ್ಪ(45), ಮಗ ಆರ್ಯ(04), ಸಂಬಂಧಿಕ ಕೊತ್ತವುಡ್ಯ ಗ್ರಾಮದ ಹರೀಶ್(11) ಮೃತಪಟ್ಟವರು. ಮಗಳು ಶಿವಾನಿ ಗಾಯಗೊಂಡಿದ್ದು ಬುರುಡಗುಂಟೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಚಿಂತಾಮನಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಂತಾಮಣಿಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕೋಲಾರಕ್ಕೆ ರವಾನಿಸಲಾಗಿದೆ.

ಚಿಕಲನೇರ್ಪು ಗ್ರಾಮದ ಬಾಲಾಗಿ ಮತ್ತು ಮಕ್ಕಳು ಸೇರಿ 5 ಜನರು ಫಲ್ಸರ್ ಬೈಕ್ ನಲ್ಲಿ ಚಿಲಕಲನೇರ್ಪು ನಿಂದ ಬುರುಡಗುಂಟೆ-ಕೋರ್ಲಪರ್ತಿ ಮಾರ್ಗವಾಗಿ ತಲಕಾಯಲ ಬೆಟ್ಟದಲ್ಲಿ ನಡೆಯಲಿದ್ದ ಮದುವೆಗೆ ಹೋಗುತ್ತಿದ್ದರು. ಬೈಕ್ ಬುರುಡಗುಂಟೆ ಸಮೀಪ ಹೋಗುತ್ತಿದ್ದಾಗ ಎದರುಗಡೆಯಿಂದ ಬರುತ್ತಿದ್ದ ನಗರದ ವಿಕ್ರಮ್ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಇದನ್ನು ಓದಿದ್ದೀರಾ..? ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಲು ಸಹಕರಿಸಿ:ತಹಸಿಲ್ದಾರ್ ಸುದರ್ಶನ್ ಯಾದವ್

ಅತಿ ವೇಗವಾಗಿ ಹೋಗುತ್ತಿದ್ದೆರಡು ವಾಹನಗಳು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ನಾಲ್ವರು ಮೃತಪಟ್ಟಿದ್ದಾರೆ. ಶಾಲಾ ವಾಹನದ ಬಂಪರ್ ಗೆ ಡಿಕ್ಕಿಯಾಗಿ ಬೈಕ್ ಎರಡು ತುಂಡಾಗಿದೆ. ವಾಹನದ ಬಂಪರ್ ಜಖಂಗೊಂಡಿದೆ. ಮೃತದೇಹಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಂಗಾಂಗಗಳು ತುಂಡು ತುಂಡಾಗಿ ರಕ್ತಸಿಕ್ತವಾಗಿದ್ದವು. ವಿಷಯ ಗೊತ್ತಾದ ಕೂಡಲೇ ಕೆಂಚಾರ್ಲಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಸ್ಥಳೀಯರ ನೆರವಿನೊಂದಿಗೆ ಮೃತ ದೇಹಗಳನ್ನು ನಗರದ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...