ಮಂಡ್ಯ | ಕೆ ಆರ್‌ ಪೇಟೆಯ ಶತಮಾನದ ಸರ್ಕಾರಿ ಶಾಲೆಗೂ ತಪ್ಪದ ಒತ್ತುವರಿ ಕಾಟ!

Date:

ಮಂಡ್ಯ ಜಿಲ್ಲೆ, ಕೆ ಆರ್‌ ಪೇಟೆ ಶತಮಾನದ ಶಾಲೆಗೂ ಒತ್ತುವರಿ ಕಾಟದಿಂದ ತಪ್ಪಿಸಿಕೊಳ್ಳಲು ಸಾಧ್ಯ ಆಗಿಲ್ಲ. ಅನೇಕ ಕಾಣದ ಕೈಗಳು, ಬಲಾಢ್ಯ ಸಮುದಾಯದ ಜನರು ಹಾಗೂ ರಾಜಕೀಯ ಬೆಂಬಲವಿರುವ ಜನರು ಈ ಶಾಲೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಈ ಶಾಲೆಯ ಹಿಂಭಾಗ ಶೌಚಾಲಯಕ್ಕೆ ಹೊಂದಿಕೊಂಡಂತೆ 10 ಅಡಿ ಶಾಲೆಯ ಜಾಗವನ್ನು ಖಾಸಗಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಶಾಲೆಯ ಎಸ್‌ಡಿಎಂಸಿ ಸದಸ್ಯರು ಎಷ್ಟೇ ಪ್ರಯತ್ನ ಮಾಡಿದರು ಒತ್ತುವರಿ ಜಾಗವನ್ನು ಮತ್ತೆ ಬಿಡಿಸಿಕೊಳ್ಳಲು ಸಾಧ್ಯ ಆಗಿಲ್ಲ.

IMG 20241115 WA0043

ಮಂಡ್ಯ ಜಿಲ್ಲೆ ಕೆಆರ್‌ಪೇಟೆ ಶತಮಾನದ ಶಾಲೆಯಲ್ಲಿ 2010ನೇ ಸಾಲಿನಲ್ಲಿ ಕೇವಲ 132 ಮಕ್ಕಳು ಮಾತ್ರ ಇದ್ದರು. ಒಂದೊಂದು ತರಗತಿಯಲ್ಲಿ ಹತ್ತು ಹದಿನೈದು ಮಕ್ಕಳು ಮಾತ್ರ ಓದುತ್ತಿದ್ದರು. ಶೀಳನೆರೆ ಕಾಲೇಜಿನ ಪ್ರಭಾರ ಪ್ರಂಶುಪಾಲರಾದ ಕತ್ತರಘಟ್ಟ ವಾಸು, ಮಂಜುನಾಥ್, ಸೋಮಶೇಖರ್ ಹಾಗೂ ಆ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾಗಿದ್ದ ಅಪರ ಜಿಲ್ಲಾಧಿಕಾರಿ ನಾಗರಾಜು ಮುಂತಾದವರು ಸಮಾಜಮುಖಿ ಜನರನ್ನು ಹಾಗೂ ಹಳೆಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಮಕ್ಕಳಮನೆ ಶುರು ಮಾಡಿ ಶಾಲೆಯನ್ನು ಅಭಿವೃದ್ಧಿಪಡಿಸಿದರು.

ಕರ್ನಾಟಕದಲ್ಲಿ ಮೊದಲ ಬಾರಿಗೆ ಮಕ್ಕಳ ಮನೆ ಶುರು ಮಾಡಿದ್ದು ಕೆಆರ್‌ಪೇಟೆಯಲ್ಲಿ, ಅದು ಇಲ್ಲಿನ ಶತಮಾನದ ಶಾಲೆಯಲ್ಲಿ. ಅಂದು ಮಕ್ಕಳಮನೆ ಶುರು ಮಾಡಲಾಗಿ ಇಂದು ಪ್ರಾಥಮಿಕ ಶಾಲೆಯಲ್ಲಿ 900ಕ್ಕೂ ಹೆಚ್ಚು ಮಕ್ಕಳ ಎಣಿಕೆ ಏರಿಕೆಯಾಗಿದೆ. ಒಟ್ಟಾರೆ ಅವತ್ತಿನ ಪ್ರಯತ್ನದಿಂದ ಒಂದನೇ ತರಗತಿಯಿಂದ ಪಿಯುಸಿಯವರೆಗೆ ಓದುತ್ತಿರುವ ಮಕ್ಕಳ ಎಣಿಕೆ 2300 ಕ್ಕಿಂತ ಹೆಚ್ಚು. 1910 ರಲ್ಲಿ ಶುರುವಾದ ಕೆಆರ್‌ಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ ಒಟ್ಟು 6 ಎಕರೆ 38 ಗುಂಟೆಯಲ್ಲಿ ಇದೆ. ಈ ಶಾಲೆಯ ಆವರಣದೊಳಗೆ ಬಿಇಓ ಕಚೇರಿ, ಶಿಕ್ಷಕರ ಭವನ, ಸರ್ಕಾರಿ ನೌಕರರ ಪುತ್ತಿನ ಸಹಕಾರ ಸಂಘಗಳು ಕೂಡ ಇವೆ. ರಾಜ್ಯಕ್ಕೆ ಎರಡನೆಯ ಅತಿ ಹೆಚ್ಚು ವಿದ್ಯಾರ್ಥಿಗಳು ಓದುತ್ತಿರುವ ಶಾಲೆ ಇದು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಎಸ್‌ಡಿಎಂಸಿ ಸದಸ್ಯರಾದ ಗಂಗಾಧರ ಸ್ವಾಮಿ ಮಾತನಾಡಿ, ಕಳೆದ 2023ರ ಬೇಸಿಗೆ ರಜೆಯ ಸಂದರ್ಭದಲ್ಲಿ ಯಾರು ಇಲ್ಲದಿದ್ದಾಗ ಗಣಪತಿ ಸೇವಾ ಟ್ರಸ್ಟಿನವರು 10 ಅಡಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿ ಗುಡಿಯನ್ನು ಕಟ್ಟಿದ್ದಾರೆ. ಬಿಎಸ್ಎನ್ಎಲ್ ಕಚೇರಿಯ ಪಕ್ಕದಲ್ಲೇ ಶಾಲೆಯ ಕಾಂಪೌಂಡನ್ನು ಹೊಡೆದು ಅತಿಕ್ರಮಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಗಣಪತಿ ಸೇವಾ ಟ್ರಸ್ಟಿನ ಜನರನ್ನು ಖುದ್ದು ಭೇಟಿ ಮಾಡಿ ಮಾತನಾಡಿಸಿದಾಗ, ಪ್ರಸ್ತುತ ಈ ವಾರ್ಡಿನ ಕೌನ್ಸಿಲರ್ ದಿನೇಶ್ ನಾವು ಒತ್ತುವರಿ ಜಾಗವನ್ನು ಬಿಡಲು ಸಾಧ್ಯವಿಲ್ಲ ಎಂದರು. ಸರಕಾರಿ ಶಾಲೆಗೆ ಸಂಬಂಧಿಸಿದ ಜಾಗವನ್ನು ನೀವು ಪುರಸಭೆ ಹಾಗೂ ಇನ್ನಿತರರಿಂದ ಬಿಡಿಸಿಕೊಳ್ಳಲು ಆಗಿಲ್ಲ. ಮೊದಲು ಅಲ್ಲಿ ಒತ್ತುವರಿ ಬಿಡಿಸಿ. ಇದನ್ನು ನಾವು ಬಿಡಲ್ಲ ನಿಮಗೆ ತಾಕತ್ತಿದ್ದರೆ ಬಿಡಿಸಿಕೊಳ್ಳಿ ನೋಡೋಣ ಎಂದು ಮಾತನಾಡಿದರು ಎಂದು ತಿಳಿಸಿದರು.

ಇದನ್ನು ಓದಿದ್ದೀರಾ? ಶ್ರೀರಂಗಪಟ್ಟಣ | ವಿಶ್ವಜ್ಞಾನಿ ಅಂಬೇಡ್ಕರ್ ಸಂಘದಿಂದ ಕಡತನಾಳು ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

ಈ ಶಾಲೆಗೆ ಸೇರಿದ 15 ಮಳಿಗೆಗಳನ್ನು ಪುರಸಭೆಯವರು ಒತ್ತುವರಿ ಮಾಡಿಕೊಂಡು ಬಳಸಿಕೊಳ್ಳುತ್ತಿದ್ದಾರೆ. ಈ ಮಳಿಗೆಗಳು ಶಾಲೆಯ ಆದಾಯದ ಮೂಲ ಆಗುತ್ತಿತ್ತು. ಆದರೆ ಪುರಸಭೆಯವರು ಬಿಟ್ಟುಕೊಡಲು ತಯಾರಿಲ್ಲ. ಇದರ ಸಂಬಂಧ ಸುಮಾರು 15 ವರ್ಷಗಳ ಹಿಂದೆ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಇನ್ನು ತೀರ್ಮಾನ ಆಗಿಲ್ಲ ಎಂದು ತಿಳಿದು ಬಂದಿದೆ.

ಎಸ್‌ಡಿಎಂಸಿ ಸದಸ್ಯರು ಕಾನೂನಾತ್ಮಕ ಕ್ರಮ ಕೈಗೊಳ್ಳಲು ನಿರ್ಧರಿಸಿ, ಕಳೆದ ಆರು ತಿಂಗಳ ಹಿಂದೆ ಪೊಲೀಸ್ ಇಲಾಖೆ ಹಾಗೂ ಪುರಸಭಾ ಅಧಿಕಾರಿಗಳಿಗೆ ದೂರನ್ನು ನೀಡಿದ್ದೆವು. ಆದರೆ ಇದುವರೆಗೂ ಪೊಲೀಸರಾಗಲಿ ಇಲ್ಲವೇ ಪುರಸಭಾ ಅಧಿಕಾರಿಗಳಾಗಲಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ‌. ಶಾಲೆಯ ಆಸ್ತಿಯನ್ನು ಉಳಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಈ ಮಾಹಿತಿಯನ್ನು ಮಧ್ಯಮದ ಮುಂದೆ ಇಡುವ ಅನಿವಾರ್ಯತೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಡಿಎಂಸಿ ಸದಸ್ಯರಾದ ನಾರ್ಗೋನಹಳ್ಳಿ ವೆಂಕಟೇಶ್ ಮಾತನಾಡಿ, ಇಲ್ಲಿನ ಉರ್ದು ಶಾಲೆ ಬಹಳ ಶಿಥಿಲವಾಗಿದೆ. ಶಾಲೆಯನ್ನು ಒತ್ತುವರಿ ಮಾಡಿ ದೇವಸ್ಥಾನವನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿನ ಶಾಸಕರು ಮುತುವರ್ಜಿ ವಹಿಸಿ ಅದನ್ನು ತೆರವುಗೊಳಿಸಬೇಕು. ಈ ಶಾಲೆಯ ಅಭಿವೃದ್ಧಿಗೆ ಅನುದಾನವನ್ನು ಆದ್ಯತೆಯಾಗಿ ನೀಡಬೇಕು. ಇಲ್ಲಿನ ಸರ್ಕಾರಿ ಕಚೇರಿಗಳನ್ನು ಬೇರೆಡಗೆ ವರ್ಗಾಯಿಸಬೇಕು. ಇಲ್ಲಿ ನಮ್ಮ ಮಕ್ಕಳಿಗೆ ಭದ್ರತೆ ಅನ್ನುವುದು ಇಲ್ಲದಂತಾಗಿದೆ‌. ಒಳ್ಳೆಯ ವಾತಾವರಣಕ್ಕೆ, ಮಕ್ಕಳ ಅನುಕೂಲಕ್ಕೆ ಇಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಬೇಕು. ಶಾಲೆಯನ್ನು ಹೊರತುಪಡಿಸಿ ಇಲ್ಲಿರುವ ಇನ್ನಿತರ ಸರಕಾರಿ ಕಚೇರಿಗಳನ್ನು ಬೇರೆಡೆಗೆ ವರ್ಗಾಯಿಸಬೇಕು  ಎಂದು ತಮ್ಮ ಮಾಧ್ಯಮದ ಮೂಲಕ ಸರಕಾರ ಹಾಗೂ ನಮ್ಮ ಶಾಸಕರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

Untitled 24
ನಗರಕೆರೆ ಜಗದೀಶ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...