ಮಕ್ಕಳಿಗೆ ಪೋಷಕರ ಆಶೀರ್ವಾದ ಮುಖ್ಯ: ಡಿಐಜಿಪಿ ಡಿ.ದೇವರಾಜ್

Date:

ಕೋಲಾರ : ಮಕ್ಕಳಿಗೆ ತಂದೆ ತಾಯಿಯ ಪೂರ್ಣ ಆಶೀರ್ವಾದವಿಲ್ಲದಿದ್ದರೆ ಯಾವುದೇ ಸಾಧನೆ ಮಾಡಲು ಸಾಧ್ಯವಿಲ್ಲ ಪೋಷಕರು ಮತ್ತು ಗುರುಗಳ ಬೆಂಬಲವಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂದು ತರಬೇತಿ ವಿಭಾಗದ ಡಿಐಜಿಪಿ ಡಿ.ದೇವರಾಜ್ ತಿಳಿಸಿದರು.

ತಾಲೂಕಿನ ನರಸಾಪುರ ಗ್ರಾಮದ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು ನಮ್ಮ ಮನಸ್ಸಿನಲ್ಲಿ ಏನು ಇರುತ್ತದೆ ಎಂಬುದನ್ನು ಮುಕ್ತವಾಗಿ ಹೇಳಬೇಕಾದರೆ ಮಾತೃಭಾಷೆ ಬಹಳ ಮುಖ್ಯ ಮಾತೃಭಾಷೆಯಲ್ಲಿ ಹೇಳಬೇಕು, ನಾನು ಇದೇ ತಾಲೂಕಿನ ಕೋರಗಂಡಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ್ದು, ನಮ್ಮೂರಿನ ಕನ್ನಡ ಪ್ರಾಥಮಿಕ ಶಾಲೆ ಹಾಗೂ ಉಳಿದಂತೆ ಪಕ್ಕದ ಗ್ರಾಮಗಳಲ್ಲಿರುವ ಕನ್ನಡ ಶಾಲೆಗಳಲ್ಲಿ ವ್ಯಾಸಂಗ ಮಾಡಿರುತೇನೆ, ಸ್ವಲ್ಪ ಕಷ್ಟಪಟ್ಟು ಮನಸ್ಸು ಮಾಡಿ ಓದಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದರು,

ಬಹಳಷ್ಟು ಪೋಷಕರು ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಲು ಬಂದಿರುವುದು ತುಂಬಾ ಸಂತೋಷದ ವಿಷಯ, ಪ್ರತಿಯೊಬ್ಬ ತಂದೆ ತಾಯಿ ಮಕ್ಕಳಿಗೆ ಪ್ರೋತ್ಸಾಹ ಎಂಬ ಆಶೀರ್ವಾದ ಇಡಬೇಕು, ಆಶೀರ್ವಾದ ಎಂದರೆ 3 ತಿಂಗಳು ಮತ್ತು 6 ತಿಂಗಳಿಗೊಮ್ಮೆ ಶುಲ್ಕ ಕಟ್ಟುವುದಲ್ಲ ನಿಮ್ಮ ಮಕ್ಕಳ ಮೇಲೆ ನಿಜವಾದ ಗಮನವಿಟ್ಟು ತಿಂಗಳಿಗೊಮ್ಮೆ ಶಾಲೆಗೆ ಹೋಗುತ್ತಿದ್ದಾರಾ ಅಥವಾ ಯಾರ ಜೊತೆ ಸೇರುತ್ತಿದ್ದಾರಾ ಸೇರುತ್ತಿರುವ ವ್ಯಕ್ತಿತ್ವ ಎಂತಹದು ಎಂಬುದನ್ನು ತಿಳಿದುಕೊಳ್ಳಬೇಕು, ಅವರು ಹೋಗುವ ಶಾಲೆಗೆ ಮತ್ತು ಕಾಲೇಜಿಗೆ ಭೇಟಿ ನೀಡಿ ಅವರ ಹಾಜರಾತಿಯ ಬಗ್ಗೆ ಹಾಗೂ ಅವರ ವ್ಯಾಸಂಗದ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ವಾರದಲ್ಲಿ ಒಂದು ದಿವಸ ರಜೆ ತೆಗೆದುಕೊಂಡಿದ್ದಾರೆ ಎಂಬುದು ನಿಮಗೆ ತಿಳಿದಾಗ ಕೂಡಲೇ ನೀವು ಎಚ್ಚೆತ್ತುಕೊಳ್ಳಬೇಕು, ಯಾವುದೋ ಒಂದು ದಿವಸ ಮಗ ಅಥವಾ ಮಗಳು ಕೈ ತಪ್ಪಿ ಹೋಗಿ ತಮ್ಮ ಅಳಲನ್ನು ತೋಡಿಕೊಂಡ ಪೋಷಕರ ನೋವನ್ನು ನನ್ನ ಕೆಲಸದಲ್ಲಿ ನೋಡಿದ್ದೇನೆ, ನಿಮ್ಮ ಆಶೀರ್ವಾದ ಮತ್ತು ಗಮನ ನಿಮ್ಮ ಮಕ್ಕಳ ಮೇಲೆ ಇದ್ದರೆ ಯಾವುದೇ ಕಾರಣಕ್ಕೂ ಕೈ ತಪ್ಪಿ ಹೋಗುವುದಿಲ್ಲ, ನನ್ನ ಮನವಿ ನಿಮ್ಮ ಸಂಪೂರ್ಣ ಶ್ರದ್ಧೆ ಮತ್ತು ಗಮನ ನಿಮ್ಮ ಮಕ್ಕಳ ಕಡೆ ಇದ್ದರೆ ಒಳ್ಳೆಯ ಪ್ರಜೆಗಳಾಗಿ ಬೆಳೆದು ಜೀವನದಲ್ಲಿ ಏನಾದರೂ ಸಾಧಿಸುತ್ತಾರೆ, ಆಗ ಸಂತೋಷ ಪಡೆಯುವುದು ಅವರ ಪೋಷಕರು ಮತ್ತು ಕುಟುಂಬದವರು, ಜೊತೆಗೆ ಮಕ್ಕಳಿಗೆ ಸ್ವಲ್ಪ ಹೇಳಿಕೊಡಬೇಕಾಗುತ್ತದೆ, ಮಕ್ಕಳನ್ನು ಒಂದೇ ಒಂದು ಅಸ್ತ್ರ ದಿಂದ ಗೆಲ್ಲಬಹುದು ಮತ್ತು ತಿದ್ದಬಹುದು, ಪ್ರೀತಿ ಎಂಬ ಅಸ್ತ್ರ ತಿದ್ದಬಹುದು , ಮಕ್ಕಳಿಗೆ ಶಿಸ್ತನ್ನು ಸ್ವಲ್ಪ ಹೇಳಿ ಕೊಡಬೇಕಾಗುತ್ತದೆ, ಶಿಸ್ತು ಎಂದರೆ ಮಕ್ಕಳನ್ನು ಕೋಲು ತೆಗೆದುಕೊಂಡು ಹೊಡೆಯುವುದಲ್ಲ, ಅವರನ್ನು ಪ್ರೀತಿ ಎಂಬ ಕೋಲಿನಿಂದ ತಿದ್ದಿ ಒಳ್ಳೆಯ ಪ್ರಜೆಗಳಾಗಿ ಮಾಡಬಹುದು ಎಂದರು,

ವ್ಯಾಲಿ ಶಾಲೆಯ ಕಾರ್ಯದರ್ಶಿ ರವಿಕುಮಾರ್ ಮಾತನಾಡಿ ವಿದ್ಯೆ,ವಿದ್ಯಾಭ್ಯಾಸ, ವಿದ್ಯಾರ್ಥಿ, ಅಧ್ಯಾಪಕ, ವಿದ್ಯಾ ಸಂಸ್ಥೆಗಳು, ಸಮಾಜದ ಸಂಸ್ಕೃತಿ ಸಮೃದ್ಧಿ,ಪ್ರಗತಿ, ಉನ್ನತಿಗಳನ್ನು ನಿರ್ಧರಿಸುವ ಶಬ್ದಗಳು, ವ್ಯಕ್ತಿಯ ಹಾಗೂ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣ ಒಂದೇ ಮಾರ್ಗ, ಜನ್ಮವೆತ್ತಿದ ಪ್ರತಿಯೊಬ್ಬ ಮಾನವನ್ನು ಸ್ವಭಾವತಹ ಪರಿಪೂರ್ಣನೆ ಆದರೆ ಅಜ್ಞಾನದಿಂದಾಗಿ ಆ ಪರಿಪೂರ್ಣತೆ ಮುಚ್ಚಿಕೊಂಡಿರುತ್ತದೆ, ಅಜ್ಞಾನದ ಮುಸುಕು ಹರಿಯ ಬೇಕಾದರೆ, ಅದಕ್ಕೆ ಕ್ರಮದ ಬದ್ಧವಾದ ಯುಕ್ತಿಯುಕ್ತವಾದ ಸಂಪೂರ್ಣ ತರಬೇತಿ, ಶಿಕ್ಷಣ ಬೇಕು, ನೂತನ ವಿಚಾರಗಳನ್ನು ಆರಗಿಸಿಕೊಂಡು, ಅವುಗಳನ್ನು ನಮ್ಮ ವ್ಯಕ್ತಿತ್ವದ ಒಂದು ಅಂಗವಾಗಿಸಿಕೊಳ್ಳುವುದೇ ವಿದ್ಯಾಭ್ಯಾಸ ಎಂದರು.

ಇದನ್ನು ಓದಿದ್ದೀರಾ..? ಬದುಕು ಅಂಕಗಳಿಂದ ನಿರ್ಧಾರವಾಗುವುದಿಲ್ಲ ಮೌಲ್ಯಯುತವಾದ ನಡುವಳಿಕೆಗಳು ಉತ್ತಮ ಬದುಕನ್ನು ನಿರ್ಧರಿಸುತ್ತದೆ:ಉಪ ನಿರ್ದೇಶಕ ಆದಿಶೇಷರಾವ್

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಣ್ಯರಿಗೆ ಸನ್ಮಾನಗಳನ್ನು ನೆರವೇರಿಸಿ ಕೊಟ್ಟರು, ಈ ಕಾರ್ಯಕ್ರಮದಲ್ಲಿ ಕ್ರೀಡೋ ನಿರ್ದೇಶಕಿ ಮೃದಾಲಾ ಶ್ರೀಧರ್, ಸಾಮಾಜಿಕ ಉದ್ಯಮಿ ಮತ್ತು ಶಿಕ್ಷಣ ತಜ್ಞ ಡಾ. ವರುಣ್ ಮೂರ್ತಿ, ವ್ಯಾಲಿ ಸ್ಕೂಲ್ ಸಂಸ್ಥಾಪಕ ಜಿ ಗೋಪಾಲ ರೆಡ್ಡಿ, ಮುಖ್ಯ ಶಿಕ್ಷಕಿ ಜಿ. ಸುಮಾ, ಕಾರ್ಯದರ್ಶಿ ರವಿಕುಮಾರ್, ಪ್ರಿನ್ಸಿಪಾಲ್ ಲಾಲ್ ದೀಪ್, ನರಸಾಪುರ ಗ್ರಾಪಂ ಅಧ್ಯಕ್ಷ ಕುಮಾರ್, ಸದಸ್ಯ ಕೆಇಬಿ ಚಂದ್ರು ಮುಖಂಡರುಗಳು ಪೋಷಕರು ಹಾಗೂ ಶಿಕ್ಷಕ ವೃಂದ ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...