ಚಿಂತಾಮಣಿ:ಮನೆ ವಿಚಾರಕ್ಕೆ ನ್ಯಾಯ ಪಂಚಾಯತಿ ಮಾಡುತ್ತಿದ್ದ ವೇಳೆ ಸ್ಥಳಕ್ಕೆ ಹೋದ ದೊಡ್ಡಪ್ಪನನ್ನು ತಮ್ಮನ ಮಗ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೆಂಚರ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಗುರ್ರಂಪಲ್ಲಿ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಗುರ್ರಂಪಲ್ಲಿ ಗ್ರಾಮದ ನಾರಾಯಣಸ್ವಾಮಿ ಕೆ ಎಲ್(66 ವರ್ಷ)ಎಂದು ಗುರುತಿಸಲಾಗಿದೆ.
ಸದರಿ ಗ್ರಾಮದ ತಮ್ಮ ಮದ್ದರೆಡ್ಡಿ ಎಂಬಾತನ ಮನೆ ವಿಚಾರಕ್ಕೆ ಸುಮಾರು ದಿನಗಳಿಂದ ವಿವಾದವಿದ್ದು,ರಾತ್ರಿ ಮನೆ ವಿಚಾರಕ್ಕೆ ಮಾತುಕತೆ ನಡೆಯುತ್ತಿದ್ದ ವೇಳೆ ಸ್ಥಳಕ್ಕೆ ಹೋದ ನಾರಾಯಣಸ್ವಾಮಿ ಕೆ ಎಲ್ ನನ್ನು ತಮ್ಮನ ಮಗನಾದ ಮಧುಸೂಧನ್(38 ವರ್ಷ)ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಮಾತುಕತೆ ನಡೆದು ಕೊಲೆಯಲ್ಲಿ ಘಟನೆ ಅಂತ್ಯವಾಗಿದ್ದು ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇಟ್ಟಿದ್ದು,ಆಸ್ಪತ್ರೆಗೆ ಅಡಿಷನಲ್ ಎಸ್ಪಿ ಜಗನ್ನಾಥ್ ರೈ,ಸರ್ಕಲ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ,ಭೇಟಿ ನೀಡಿ ಘಟನೆಯ ಸಂಪೂರ್ಣ ವಿವರ ಪಡೆದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನು ಓದಿದ್ದೀರಾ..?ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿ ಮಾಡಿ- ಇಲ್ಲವೇ ಕುರ್ಚಿ ಖಾಲಿ ಮಾಡಿ
ಇನ್ನು ತಮ್ಮ ಮದ್ದಿರೆಡ್ಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ತಮ್ಮನ ಮಗ ಮಧುಸೂದನ್ ಪರಾರಿಯಾಗಿರುವ ಬಗ್ಗೆ ಘಟನೆ ವರದಿಯಾಗಿದೆ.





