ಬಾಗೇಪಲ್ಲಿ: ಮೀನು ಹಿಡಿದು ಜೀವನ ಮಾಡುತ್ತಿದ್ದ ಬಡ ಕುಟುಂಬದ ಮಹಿಳೆ ವಿದ್ಯುತ್ ತಂತಿಗಳು ಸೋಕಿ ಕೆರೆಯಲ್ಲೇ ಮೃತಪಟ್ಟಿರುವ ಘಟನೆ ಚೇಳೂರು ತಾ. ದಿಗವನೆಟ್ಟಕುಂಟಪಲ್ಲಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಾಪಲ ಮಾಬುಸಾಬ್ ಕುಟುಂಬದವರು ಸುಮಾರು ವರ್ಷಗಳಿಂದ ಸುತ್ತಮುತ್ತಲಿನ ಕೆರೆ ಕುಂಟೆಗಳಲ್ಲಿ ಮೀನುಗಳು ಹಿಡಿದು ಮಾರಾಟ ಮಾಡಿ ಬಡ ಕುಟುಂಬವನ್ನು ಪೋಷಣೆ ಮಾಡಿಕೊಂಡು ಬದುಕು ನಡೆಸಿದ್ದರು.
ಗ್ರಾಮದ ಊರುಮುಂದಿನ ಕೆರೆಯಲ್ಲಿ ಹಗಲಿನಲ್ಲಿ ಮೀನುಗಳಿಗೆ ಬಲೆಗಳು ಹಾಕಿ ರಾತ್ರಿ 08-30 ರ ಸಮಯದಲ್ಲಿ ಬಲೆಗಳಿಗೆ ಬಿದ್ದ ಮೀನುಗಳನ್ನು ಮನೆಗೆ ತಂದು ಬೆಳಿಗ್ಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.
ಗುರುವಾರ ರಾತ್ರಿ ಸಹಾ ಎಂದಿನಂತೆ ಕೆರೆಯಲ್ಲಿ ಬೋಟ್ ಇಳಿಸಿ ಮೀನುಗಳ ಬಲೆಗೆ ಹೋಗುತ್ತಿರುವಾಗ 11 ಕೆ.ವಿ. ತಂತಿಗಳು ಇರುವ ಪಕ್ಕದಲ್ಲಿ ಬೋಟ್ನಲ್ಲಿ ಕುಳಿತಿದ್ದ ಚಾಪಲ ಮಾಬುಸಾಬ್ಗೆ ಬುಜದ ಹಿಂದೆ ವಿದ್ಯುತ್ ತಂತಿ ಸೋಕಿ ಗಾಯವಾದರೆ ಅದೇ ತಂತಿ ಹಿಂದೆ ಕುಳಿತ್ತಿದ್ದ ಹೆಂಡತಿ ಆಶಾಬೀ (54) ಗೆ ವಿದ್ಯುತ್ ತಂತಿ ಸೋಕಿ ಕೆರೆಯಲ್ಲೇ ಬಿದ್ದು ಮೃತಪಟ್ಟಿರುತ್ತಾಳೆ.
ಕೆರೆಯಿಂದ ಪ್ರಾಣ ಪಾಯದಿಂದ ಗಾಯಗಳಿಂದ ಪಾರಾದ ಈ ವ್ಯಕ್ತಿ ಈ ವಿಚಾರವನ್ನು ಗ್ರಾಮದ ಜನರಿಗೆ ಹೇಳಿದಾಗ ಜನತೆ ಬಾಗೇಪಲ್ಲಿ ಅಗ್ನಿ ಶಾಮಕ ದಳದವರಿಂದ ಕೆರೆಯಲ್ಲಿ ಮೃತಿಸಿದ ಮೃತದೇಹವನ್ನು ಕೆರೆಯಿಂದ ಹೊರ ತೆಗೆದು ಬಾಗೇಪಲ್ಲಿ ಸರಕಾರಿಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಸಿಲಾಯಿತು ಈ ಕೆರೆ ಗ್ರಾ.ಪಂ.ಗೆ ಸೇರಿದ್ದು ಹರಾಜುನಲ್ಲಿ ಮುಜಾಹೀದ್ ಎಂಬುವರು ತೆಗೆದುಕೊಂಡಿದ್ದು ಅವರಿಂದ ಮಾಬುಸಾಬ್ ವರ್ಷಕ್ಕೆ 80 ಸಾವಿರ ನೀಡಿ ಮೀನುಗಳು ಹಿಡಿಯುತ್ತಿದ್ದನು.
ಬಡಕುಟುಂಬದ ಆಕ್ರಂದನ; ಗ್ರಾಮದ ಆಶಾಬೀ ರವರು ಬಡಕುಟುಂಬದವಳಾಗಿದ್ದು ಮಕ್ಕಳು ಮೊಮ್ಮಕ್ಕಳು ಮೃತ ದೇಹದ ಮೇಲೆ ರೋಧಿಸುತ್ತಿದ್ದರು.
ಇದನ್ನು ಓದಿದ್ದೀರಾ…? ಕೋಲಾರ |ಆದಿಮ ನಾಟಕೋತ್ಸವ ಸಂಭ್ರಮ
ಒತ್ತಾಯ; ಗ್ರಾಮದಲ್ಲಿ ಮೀನುಗಳು ಮಾರಾಟ ಮಾಡಿ ಜೀವನ ಮಾಡುವ ಇವರ ಕುಟುಂಬಕ್ಕೆ ಸರಕಾರದಿಂದ ಗ್ರಾ.ಪಂ.ಯಿಂದ ಪರಿಹಾರ ನೀಡಬೇಕೆಂದು ಕರ್ನಾಟಕ ರಾಜ್ಯ ಕೃಷಿ ಕೂಲಿ ಕಾರ್ಮಿಕರ ಪ್ರಾಂತ್ಯ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಜಹೀರ್ಬೇಗ್ ರವರು ಮನವಿ ಮಾಡಿ ಒತ್ತಾಯಿಸಿದ್ದಾರೆ.





