ಕೋಲಾರ: ತಾಲ್ಲೂಕಿನ ನರಸಾಪುರ ಪಿಯು ಕಾಲೇಜು ಪಕ್ಕದಲ್ಲಿ ಮೈದಾನ ಬೇಕು ಎಂದು ಯುವಕರು ಆಗ್ರಹಿಸಿದ್ದು, ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯಿತಿಯಿಂದ ಅನುಮತಿ ಕೊಡಿಸಿದರೆ ಆರು ತಿಂಗಳಲ್ಲಿ ಸ್ಟೇಡಿಯಂ ಮಾದರಿಯಲ್ಲೇ ಮೈದಾನವನ್ನು ಸಿದ್ದಪಡಿಸಿ ಕೊಡುವ ಭರವಸೆಯನ್ನು ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ನೀಡಿದರು.
ನರಸಾಪುರದಲ್ಲಿ ಭಾಗದಲ್ಲಿ ಏರ್ಪಡಿಸಿದ್ದ ನರಸಾಪುರ ಪ್ರೀಮಿಯರ್ ಲೀಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಗ್ರಾಮದ ಯುವಕರು ಈ ಬೇಡಿಕೆ ಇಟ್ಟಿದ್ದು, ಸಿಎಸ್‌ಆರ್ ಅನುದಾನದಲ್ಲಿ ಕ್ರೀಡಾಂಗಣವನ್ನು ಮಾಡಿಸಿಕೊಡುವುದಾಗಿ ಅವರು ಹೇಳಿದರು.
ಕ್ರಿಕೆಟ್ ಹಾಗೂ ಇನ್ನಿತರ ಆಟವಾಡಲು ಮೈದಾನ ಬೇಕೆಂದು ಈ ಭಾಗದ ಗ್ರಾಮದ ಯುವಕರು ಬಹಳ ದಿನಗಳಿಂದ ಬೇಡಿಕೆ ಇಟ್ಟಿದ್ದರು ಅದರಂತೆ ಮಾಡಿಕೊಡುವ ಭರವಸೆ ನೀಡಿದ್ದಾರೆ ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸುವ ಆಸಕ್ತಿ ಇರುತ್ತದೆ ಆದರೆ ಅವರಿಗೆ ಸರಿಯಾದ ರೀತಿಯಲ್ಲಿ ತರಬೇತಿ ಪಡೆಯಲು ಸ್ಥಳವಿರಲ್ಲ ಅದಕ್ಕಾಗಿ ಈ ಭಾಗದಲ್ಲಿ ಮೈದಾನ ಸಿದ್ದಪಡಿಸಲಾಗುತ್ತದೆ ಸದುಪಯೋಗ ಮಾಡಿಕೊಳ್ಳಿ ಎಂದರು.
ಇದನ್ನು ಓದಿದ್ದೀರಾ..? ಆಹಾರಕ್ಕೆ ಬೆರೆಸಲು ವಿಷಕಾರಿ ದತ್ತೂರ ಬೀಜದ ಪುಡಿ ನೀಡಿದ್ದ ಮಾಂತ್ರಿಕ ಅರೆಸ್ಟ್
ಈ ಸಂದರ್ಭದಲ್ಲಿ ಎಂಟಿಬಿ ಶ್ರೀನಿವಾಸ್, ಜೆಡಿಎಸ್ ಮುಖಂಡರಾದ ರಾಮಸಂದ್ರ ತಿರುಮಲೇಶ್, ಕಡಗಟ್ಟೂರು ವಿಜಯಕುಮಾರ್, ಖಾಜಿಕಲ್ಲಹಳ್ಳಿ ಹರೀಶ್ ಗೌಡ, ಡಾ.ಕಿರಣ್, ನರಸಾಪುರ ಗ್ರಾಪಂ ಅಧ್ಯಕ್ಷ ಕುಮಾರ್, ಸದಸ್ಯ ಕೆಇಬಿ ಚಂದ್ರು, ಮಾಜಿ ಸದಸ್ಯ ಮಂಜುನಾಥ್, ಮುನ್ನಾ, ಕಿರಣ್, ಶೇಖರ್, ಹರ್ಷವರ್ಧನ್, ಚಿನ್ನಯ್ಯ, ಸತೀಶ್, ಮುಂತಾದವರು ಇದ್ದರು.





