ಕೋಲಾರ: 2023 ರ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದಿಸುವ ಇಚ್ಚೆಯನ್ನು ಇಟ್ಟುಕೊಂಡಿದ್ದ ಸಿದ್ದರಾಮಯ್ಯ ಅವರು ಕಾರಣಾಂತರಗಳಿಂದ ವರುಣಾ ಕ್ಷೇತ್ರದಿಂದ ಸ್ಪರ್ದಿಸಬೇಕಾಯಿತು ಅಲ್ಲಿ ಗೆದ್ದು ಮುಖ್ಯಮಂತ್ರಿಯಾದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದ ಬಗ್ಗೆ ಹಾಗೂ ಜಿಲ್ಲೆಯ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದರಿಂದ 224 ಕ್ಷೇತ್ರಗಳ ಪೈಕಿ ಕೋಲಾರ ಕ್ಷೇತ್ರಕ್ಕೆ ಹೆಚ್ಚಿನ ಅನುಧಾನ ನೀಡಿರುವುದೇ ಸಾಕ್ಷಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಹೇಳಿದರು.
ನಗರದ ಟಿ ಚನ್ನಯ್ಯ ರಂಗಮಂದಿರದಲ್ಲಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸರ್ಕಾರಿ ಮಹಿಳಾ ಕಾಲೇಜು ಕಟ್ಟಡ ಹಾಗೂ ವಿವಿಧ ಕಾಲೇಜು ಕಟ್ಟಡ ಕಾಮಗಾರಿ ಸೇರಿದಂತೆ 103 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕೋಲಾರ ಶಾಸಕ ಕೊತ್ತೂರು ಜಿ ಮಂಜುನಾಥ್ ಹಾಗೂ ನಾನು ಒಳ್ಳೆ ಸ್ನೇಹಿತರು ಜಿಲ್ಲೆಯಲ್ಲಿ ಶೈಕ್ಷಣಿಕ ಬದಲಾವಣೆ ತರುವ ನಿಟ್ಟಿನಲ್ಲಿ ಮುಂದಾಗಿದ್ದೇವೆ. ಉಳಿದ ಎರಡುವರೆ ವರ್ಷದ ಅವಧಿಯಲ್ಲಿ ಮತ್ತಷ್ಟು ಬದಲಾವಣೆ ತರುವ ಭರವಸೆ ಇದೆ ಎಂದರು.
ಮಹಿಳಾ ಕಾಲೇಜಿನಲ್ಲಿ ಕಟ್ಟಡ ಸಮಸ್ಯೆ ಹಾಗೂ ಮೂಲಭೂತ ಸೌಲಭ್ಯಗಳ ಕೊರತೆ ಇರುವ ಬಗ್ಗೆ ಶಾಸಕರು ಗಮನಕ್ಕೆ ತಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು ನಂತರ ಸರ್ವೆ ಮಾಡಿಸಿ ಮಾಹಿತಿ ಪಡೆದುಕೊಂಡು ವಿನ್ಯಾಸ ಸಿದ್ದಪಡಿಸಿ ನಂತರ ಅನುಧಾನ ಬಿಡುಗಡೆ ಮಾಡಲಾಗುತ್ತಿದೆ. ಮಹಿಳಾ ಕಲೇಜು ಪಕ್ಕದಲ್ಲಿ ಕೆರೆ ಇರುವ ಕಾರಣ ಮುಂದಿನ ದಿನಗಳಲ್ಲಿ ತೊಂದರೆಗಳು ಆಗಬಾರದು ಎಂದು ಜಾಗೃತಿ ವಹಿಸಿ ವಿನ್ಯಾಸ ಸಿದ್ದಪಡಿಸಿ ಅಬಿವೃದ್ದಿ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ ಯಾವುದೇ ಖಾಸಗಿ ಕಾಲೇಜುಗಳಿಗಿಂತ ಭಿನ್ನವಾಗಿರುವಂತೆ ವಿನ್ಯಾಸಗೊಳಿಸಿಲಾಗಿದೆ ವಿನ್ಯಾಸಗೊಳಿಸಿರುವಂತೆ ಅಚ್ಚು ಕಟ್ಟಾಗಿ ಕಟ್ಟಡ ಕಾಮಗಾರಿ ನಡೆಸಲಾಗುವುದು ಅಲ್ಲದೆ ಕಟ್ಟಡ ಕಾಮಗಾರಿಯ ಗುಣಮಟ್ಟವನ್ನು ಕಾಲಕಾಲಕ್ಕೆ ಶಾಸಕರು ನೋಡಿಕೊಳ್ಳಬೇಕು ಎಂದು ಹೇಳಿದರು.
ಅಜಿಂ ಪ್ರೇಂಜಿ ಪೌಡೇಶನ್ ರಾಜ್ಯ ಸರ್ಕಾರದ ಜೊತೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಪ್ರಮುಖವಾಗಿ ಪ್ರತಿ ವರ್ಷ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಸರ್ಕಾರಿ ಶಾಲೆ ಹಾಗೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ 2025-26 ಸಾಲಿಗೆ ಮೊದಲ ವರ್ಷ ಪದವಿ ವಿದ್ಯಾಭ್ಯಸಕ್ಕೆ ಸೇರುವ ಕಾಲೇಜು ವಿದ್ಯಾರ್ಥಿನಿಯರಿಗೆ ತಲಾ ಮುವತ್ತು ಸಾವಿರ ಪ್ರತಿ ವರ್ಷ ನೀಡಲಾಗುತ್ತದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸೂಚನೆ ನೀಡಿದರು.
ಉಸ್ತುವಾರಿ ಸಚಿವ ಬೈರತಿ ಸುರೇಶ್ ಮಾತನಾಡಿ: ಎಂಟು ಕಾಲೇಜುಗಳ ಶಂಕುಸ್ಥಾಪನೆ ಮಾಡಲಾಗಿದೆ ಇದಕ್ಕೆ ಪ್ರಮುಖವಾಗಿ ಕಾರಣೀಭೂತರಾಗಿರುವ ಉನ್ನತ ಶಿಕ್ಷಣ ಸಚಿವರಾದ ಎಂಸಿ ಸುಧಾಕರ್ ಅವರಿಗೆ ಕೃತಜ್ಞತೆ ಸಲ್ಲಿಸಿ ಮಾತು ಮುಂದುವರೆಸಿದರು. ಈ ಹಿಂದೆ ಕೋಲಾರ ಜಿಲ್ಲೆ ಬರ ಪೀಡಿತ ಹಿಲ್ಲೆಯಾಗಿತ್ತು ಆದರೆ ಇದನ್ನು ಮನಡ ಸಿದ್ದರಾಮಯ್ಯ ಅವರು ಕೆಸಿ ವ್ಯಾಲಿ ಯೋಜನೆಯನ್ನು ಅನುಷ್ಠಾನ ಗೊಳಿಸಿದರು. ನಂತರದ ದಿನಗಳಲ್ಲಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ದಿಯಾಗಿದೆ ಇದೀಗ ಕೋಲಾರ ಜಿಲ್ಲೆ ವಿದ್ಯಾಭ್ಯಾಸದಲ್ಲೂ ಮಂದೆ ಇದೆ ಇದರ ಬಗ್ಗೆ ನನಗೆ ಹೆಮ್ಮೆ ಇದೆ. ಮಹಿಳಾ ಶಕ್ತಿ ದೇಶದ ಶಕ್ತಿಯಾಗಿದೆ. ಕುಟುಂಬದಲ್ಲಿ ಎಷ್ಟೆ ಸಮಸ್ಯೆಗಳಿದ್ದರೂ ಹೆಣ್ಣು ಮಕ್ಕಳ ವಿದ್ಯಾಭ್ಯಸಕ್ಕೆಂದು ತಂದೆ ತಾಯಿಗಳು ಒತ್ತು ನೀಡಿದ್ದಾರೆ ಅವರ ಕಷ್ಟಕ್ಕೆ ಪಲಿತಾಂಶವೇ ತಂದೆ ತಾಯಿಗೆ ಕೊಡುವ ಉಡುಗೊರೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಸರ್ಕಾರದಲ್ಲಿ ದುಡ್ಡಿಲ್ಲ ಯಾವುದೇ ಪ್ರಗತಿ ಯಾಗೋದಿಲ್ಲ ಎಂದು ಬಿಜೆಪಿ ಜೆಡಿಎಸ್ ನವರು ಹೇಳುತ್ತಾರೆ ಅದನ್ನು ನಂಬುವ ಮನಸ್ಥಿತಿ ನಮಗೂ ಇಲ್ಲ ನಿಮಗೂ ಇಲ್ಲ ಸಾಕಷ್ಡು ಕಾಮಗಾರಿಗಳು ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಅತಿ ತುರ್ತಾಗಿ ಸಾಕಷ್ಟು ಅಭಿವೃದ್ದಿ ಕೆಲಸ ನಡೆಯುತ್ತದೆ. ಜಿಲ್ಲೆಯಲ್ಲಿರುವ ಎಲ್ಲಾ ಸಮಸ್ಯೆಗಳಿಗೂ ಸ್ಪಂದಿಸುವ ಕೆಲಸ ಸರ್ಕಾರ ಮಾಡುತ್ತದೆ.
ಶಾಸಕ ಕೊತ್ತೂರು ಮಂಜುನಾಥ್ ಮಾತನಾಡಿ ದಿನದ ೨೪ ಗಂಟೆಗಳು ಕೆಲಸ ಮಾಡುವುದು ರಾಜಕಾರಣಿಗಳು ಮಾತ್ರ. ಟೆಂಡರ್ ಹಾಗದೇ ಇರುವುದನ್ನು ಶಂಕುಸ್ಥಾಪನೆ ಮಾಡಿಲ್ಲ ಕೋಲಾರದಲ್ಲಿ ಕೆಲವು ಟುಸ್ ಪಠಾಕಿಗಳು ಇದ್ದಾರೆ ಪಠಾಕಿ ಅಂಟಿಸೋದು ಅವರೆ ಬಕೇಟ್ ನಲ್ಲಿ ನೀರು ತಂದು ಹಾಕೋದು ಅವರೆ ಹಾಗಾಗಿ ಟೆಂಡರ್ ಪ್ರಕ್ರಿಯೆ ಮುಗಿಯದೇ ಇರುವ ಕಾಮಗಾರಿಗಳನ್ನು ಉದ್ಘಾಟನೆ ಮಾಡಿಲ್ಲ. ಇದು ಬಿತ್ತನೆ ಬೀಜ ಅಲ್ಲ ಇಲ್ಲಿ ಏನ್ ಬರುತ್ತೋ ಅದನ್ನೆ ಮಾಡ್ತಿವಿ. ಇದೇ ತರ ಇನ್ನು 100 ಕೋಟಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಅನುಧಾನ ತರುತ್ತೇನೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಕೋಲಾರ ಕಾನೂನು ಕಾಲೇಜಿನಲ್ಲಿ ವಿದ್ಯಾಭ್ಯಸ ಮಾಡಿದ ೪೦ ಹೆಚ್ಚ ವಿದ್ಯಾರ್ಥಿಗಳು ನ್ಯಾಯಾಧೀಶರಾಗಿದ್ದಾರೆ. ಸಾಪ್ಟ್ ವೇರ್ ಕಂಪನಿಗಳ ಹಾಗೆ ಎಲ್ಲಾ ಸರ್ಕಾರಿ ಕಾಲೇಜುಗಳನ್ನು ಅಭಿವೃದ್ದಿ ಪಡಿಸಲಾಗುವುದು ಎಂದು ಭರವಸೆ ನೀಡಿದರು.
ಕೋಟ್: ವಿದ್ಯಾರ್ಥಿಗಳಿಗೆ ಒಳ್ಳೆ ವಿದ್ಯಾಭ್ಯಾಸ ಕೊಡಿಸಬೇಕು, ಮೂಲಭೂತ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಬೇಕು ಆರೋಗ್ಯಕ್ಕೆ ಒತ್ತು ನೀಡುವುದರ ಜೊತೆಗೆ ರೈತರಿಗೆ ಬೇಕಿರುವ ಸೌಲಭ್ಯಗಳನ್ನು ಕೊಟ್ಟಾಗ ಯಾರು ನಮ್ಮ ಕಛೇರಿಗಳ ಬಳಿ ಬರೋದಿಲ್ಲ ಆ ನಿಟ್ಟಿನಲ್ಲಿ ವಿಧ್ಯಾಭ್ಯಾಸ ರೈತರಿಗೆ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಸರ್ಕಾರಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಬೇಕು ಅಧಿಕಾರಿಗಳ ಕೆಲಸ ನಮಗೆ ತೃಪ್ತಿ ತಂದಿಲ್ಲ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಪಡಿಸುತ್ತೇನೆ.
ಇದನ್ನು ಓದಿದ್ದೀರಾ..? ವಿಧ್ಯಾರ್ಥಿಗಳ ಶಿಕ್ಷಣಗುಣಮಟ್ಟವನ್ನು ಸುಧಾರಿಸಲು ಮರು ಸಿಂಚನ ಯೋಜನೆ ಸಹಕಾರಿ
ಕಾರ್ಯಕ್ರಮದಲ್ಲಿ ಎಂಎಲ್.ಸಿ ಅನೀಲ್ ಕುಮಾರ್, ಎಸ್ಪಿ ನಿಖೀಲ್ ಬಿ, ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಕೂಡಾ ಅಧ್ಯಕ್ಷ ಹನೀಫ್, ಗ್ಯಾರೆಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ ಶಿವಕುಮಾರ್, ತಹಶೀಲ್ದಾರ್ ನಯನ, ಉಪವಿಭಾಗಾಧಿಕಾರಿ ಡಾ. ಮೈತ್ರಿ ವಿವಿ ಕುಲಪತಿ ನಿರಂಜನ ವನರಹಳ್ಳಿ, ಮಹಿಳಾಕಾಲೇಜಿನ ಪ್ರಾಂಶುಪಾಲರು, ಹಾಗೂ ಕಾಲೇಜು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.





