ಬೇತಮಂಗಲ: ಸೌತ್ ಏಷಿಯಾ ಹೂಮೆನ್ ರೈಟ್ಸ್ ಫೆಡರೇಶನ್ಸ್ ರಾಷ್ಟ್ರೀಯ ಯುವ ಅಧ್ಯಕ್ಷರಾಗಿ ಡಾ. ಎಸ್.ಅಫ್ತಾಬ್ ಹುಸೇನ್ ಅವರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷ ಎಲ್.ಬಾಬು ನೇಮಕಗೊಳಿಸಿ ಆದೇಶಸಿದ್ದಾರೆ.
ಹೋಬಳಿಯ ಬೀರನಕುಪ್ಪ ಬಳಿಯ ಎಸ್.ಎ.ಆರ್ ವಾಟರ್ ಫ್ಯಾಂಟಸಿ ಪಾರ್ಕ್ ನ ಮಾಲೀಕರಾದ ಡಾ. ಎಸ್ ಆಪ್ತಬ್ ಹುಸೇನ್ ಅವರ ಸಮಾಜಮುಖಿ ಸೇವೆಗಳು ಹಾಗೂ ಇಂದಿನ ಜನತೆಗೆ ಅನುಗುಣತೆಗಾಗಿ ರಾಷ್ಟ್ರೀಯ ಯುವ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.
ಈ ವೇಳೆ ನೂತನ ರಾಷ್ಟ್ರೀಯ ಯುವ ಅಧ್ಯಕ್ಷ ಆಪ್ತಬ್ ಹುಸೇನ್ ಮಾತನಾಡಿ, ದೇಶದ ಹಾಗೂ ರಾಷ್ಟ್ರೀಯ ಸರ್ಕಾರಗಳ ಸವಲತ್ತುಗಳು ಮತ್ತು ಜನತೆಯ ಹಕ್ಕುಗಳು ದೊರೆಯಲು ತಾವು ಜನರಿಗೆ ಅರಿವು ಮೂಡಿಸುತ್ತೇನೆ ಎಂದರು.
ಇದನ್ನು ಓದಿದ್ದೀರಾ..? ಮೈದುಂಬಿ ಹರಿಯುತ್ತಿರುವ ರಾಮಸಾಗರ ಕೆರೆ
ಜೊತೆಗೆ ಬಡ ಕೂಲಿ- ಕಾರ್ಮಿಕರ ನಿರ್ಗತಿಕರಿಗೆ ಯಾವುದೇ ಅನ್ಯಾಯ ಅಕ್ರಮ, ಭ್ರಷ್ಟಾಚಾರ ,ದೌರ್ಜನ್ಯ ನಡೆದ ಸಂದರ್ಭದಲ್ಲಿ ಅವರಿಗೆ ಕಾನೂನು ಅಡಿಯಲ್ಲಿ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.





