ಬಾಗೇಪಲ್ಲಿ: ರೈತರು ಸಾವಯವ ಗೊಬ್ಬರವನ್ನು ಹೆಚ್ಚು ಹೆಚ್ಚಾಗಿ ಬಳಸಿದರೆ ಭೂಮಿ ಫಲವತ್ತಾಗಿರುವ ಜತೆಗೆ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತದೆ ನಮ್ಮ ಗ್ರೋಮೋರ್ ಕಂಪನಿಯು ವಿಜ್ಞಾನಿ ಹೊನ್ನೆಕರಪ್ಪ ಬಳ್ಳಾರಿ ಹೇಳಿದರು.
ಇವರು ಬಾಗೇಪಲ್ಲಿ ತಾಲ್ಲೂಕು ಆಚೇಪಲ್ಲಿ ಗ್ರಾಮದ ವ್ಯಾಪ್ತಿಯ ಗೊಲ್ಲಪಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಈಶ್ವರ ರೆಡ್ಡಿ ಅವರ ಜಮೀನು ಬಳಿ ಗ್ರೋಮೋರ್ ಕಂಪನಿಯು ಸಾವಯವ ರಸಗೊಬ್ಬರಗಳ ಬಗ್ಗೆ ಮಾಹಿತಿ ಮತ್ತು ತಂತ್ರಜ್ಞಾನ ರೈತರಿಗೆ ಸಲಹೆ ನೀಡಿ ಮಾತನಾಡಿದರು.
ಕೃಷಿಯಲ್ಲಿ ನಿರಂತರ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದ್ದು, ಇಳುವರಿ ಕುಂಠಿತವಾಗುತ್ತಿದೆ. ಭೂಮಿಯ ಆರೋಗ್ಯ ಕಾಪಾಡಲು ರಾಸಾಯನಿಕ ಗೊಬ್ಬರ ಬದಲಾಗಿ ಸಾವಯವ ಗೊಬ್ಬರ ಬಳಸಬೇಕು ಎಂದು ಹೇಳಿದರು.
ಉತ್ತಮ ಬೆಳೆ ಬೆಳೆಯಲು, ಹೆಚ್ಚಿನ ಇಳುವರಿ ಪಡೆಯಲು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು. ಮಣ್ಣು ಫಲವತ್ತತೆ ಹೊಂದಿದ್ದರೆ ಮಾತ್ರ ಒಳ್ಳೆಯ ಬೆಳೆಯಾಗುತ್ತದೆ. ಅಧಿಕ ಇಳುವರಿಯ ಆಸೆಯಿಂದ ಯಥೇಚ್ಛವಾಗಿ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕ ಬಳಸುವುದರಿಂದ ಮಣ್ಣು ಫಲವತ್ತತೆಯನ್ನು ಕಳೆದುಕೊಳ್ಳುತ್ತಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಬಹುತೇಕ ರೈತರು ರಾಸಾಯನಿಕ ಕೃಷಿಯಲ್ಲಿ ತೊಡಗಿರುವುದರಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತದೆ. ಮಣ್ಣಿಗೂ ಜೀವ ಇದೆ. ಅಸಂಖ್ಯಾತ, ಉಪಯುಕ್ತ ಜೀವಾಣುಗಳು ಇದ್ದುದರಿಂದಲೇ ಬೆಳೆಗಳು ಬೆಳೆಯುತ್ತವೆ. ಆದರೆ ಮಣ್ಣು ಮೂಲ ಗುಣ ಕಳೆದುಕೊಂಡರೆ ಭವಿಷ್ಯದ ದಿನಗಳಲ್ಲಿ ಯಾವುದೇ ಗೊಬ್ಬರ ಹಾಕಿದರೂ ಬೆಳೆ ಬಾರದಂಥ ಸ್ಥಿತಿ ಬರುತ್ತದೆ ಎಂಬುದನ್ನು ರೈತರು ಗಮನಿಸಬೇಕು ಎಂದರು.
ಇದನ್ನು ಓದಿದ್ದೀರಾ..? ಜಿಲ್ಲಾ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಚಂದ್ರಶೇಖರ್ ಅವರಿಗೆ ಶಾಸಕರಿಂದ ಸನ್ಮಾನ
ಈ ಸಂದರ್ಭದಲ್ಲಿ ನಮ್ಮ ಗ್ರೋಮೋರ್ ಕಂಪನಿಯು ಗೊಬ್ಬರಗಳಾದ ಎಫ್-20,ಅಕ್ಷಯಾ,ಮೆಗಾ ಪವರ್ ಇನ್ನೂ ಮುಂತಾದ ಗೊಬ್ಬರಗಳು ಬಳಕೆ ಯಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಪ್ರಮಾಣದ ಇಳುವರಿ ಪಡೆಯಬಹುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಲ್ಲಾ ರೈತರಿಗೆ ಟೊಮೇಟೊ, ಆಲೂಗಡ್ಡೆ, ಹಾಗೂ ಈರುಳ್ಳಿ ರೋಗಗಳು ಬಗ್ಗೆ ಮಾಹಿತಿ ನೀಡಿದರು
ಈ ಸಂದರ್ಭದಲ್ಲಿ ರೈತ ಮುಖಂಡರಾದ ವಿಶ್ವನಾಥ್, ಯನಮಲ ರೆಡ್ಡಿ, ನಾಗರಾಜು, ಶಿವಾರೆಡ್ಡಿ,ಜನಾರ್ದನ್,
,ನರಸಿಂಹಪ್ಪ, ರಾಮಾಂಜಿ,ಆರ್.ಎಲ್.ಚಂದ್ರಶೇಖರ ನಮ್ಮ ಗ್ರೋಮೋರ್ ಕಂಪನಿಯು ರೋಹಿತ್,ಜಗದೀಶ್ ಇತರೆ ರೈತರು ಹಾಜರಿದ್ದರು.





