ಚಿಂತಾಮಣಿ ನಗರದ ವಾರ್ಡ್ ನಂಬರ್ 23ರ ದೊಡ್ಡಪೇಟೆಯ ಗಾಣಿಗೆ ಬೀದಿಯಲ್ಲಿ ಮಧ್ಯಾಹ್ನ ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿ ಮನೆಯಲ್ಲಿ ಇದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದು ಲಕ್ಷಾಂತರ ರೂ ನಷ್ಟವಾಗಿರು ಘಟನೆ ಸಂಭವಿಸಿದೆ.
ಭಾನುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ಸುಮಾರು 5 ಮನೆಗಿಂತ ಹೆಚ್ಚು ಮನೆಗಳಿಗೆ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ಗೊತ್ತಾಗಿದೆ.
ಬಾಳೆ ಎಲೆ ಅಂಗಡಿ ವ್ಯಾಪಾರಿ ಕೃಷ್ಣ ಸಿಂಗ್ ರವರು ಕರಾಟೆ ಮಾಸ್ಟರ್ ಲೋಕೇಶ್ ರವರ ಮನೆಯಲ್ಲಿ ಲೀಸ್ ಗೆ ಇದ್ದು ಮಧ್ಯಾಹ್ನ ಮನೆಯಲ್ಲಿ ಯಾರು ಇಲ್ಲದೇ ಇರುವ ಮೇಲೆ ಈ ಘಟನೆ ನಡೆದಿದೆ.
ಇನ್ನೂ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಂತರ ಮನೆ ಬೆಂಕಿಯಿಂದ ಉರಿಯುತ್ತಿದ್ದನ್ನು ನೋಡಿ ಮನೆ ಮಾಲೀಕರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿ
ಲೋಕೇಶ್,ಮತ್ತು ಸಿಬ್ಬಂದಿ ವೆಂಕಟ್ ಶಿವಾರೆಡ್ಡಿ,ವಿಷ್ಣು,ವಿವೇಕ್,ನಾಗರಾಜ್, ಮನೆಯಲ್ಲಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದು ಆಗಬೇಕಾಗಿರುವ ಅನಾಹುತಗಳನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿದ್ದೀರಾ..? ಚಿಕ್ಕಹಸಾಳ-ದೊಡ್ಡಹಸಾಳಕ್ಕೆ 60 ಲಕ್ಷ ರೂ. ಕಾಮಗಾರಿ: ಶಾಸಕ ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ಮನೆ ಮಾಲೀಕರಾದ ಕರಾಟೆ ಮಾಸ್ಟರ್ ಲೋಕೇಶ್ ಅವರು ಮಾತನಾಡಿ ನಮ್ಮ ಮನೆ ಅಲ್ಲದೆ ಬೀದಿಯಲ್ಲಿ ಸುಮಾರು ಮನೆಗಳಲ್ಲಿ ಶಾರ್ಟ್ ಸರ್ಕ್ಯೂಟ್ ಯಿಂದ ಮನೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಎಲ್ಲಾ ಸುಟ್ಟು ಬಸ್ಮವಾಗಿದೆ ನಮ್ಮ ಮನೆಯಲ್ಲಿರುವ ಕೃಷ್ಣ ಸಿಂಗ್ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಇಂದ ಲಕ್ಷಾಂತರ ರೂ.ನಷ್ಟವಾಗಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇವರಿಗೆ ನಷ್ಟ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.





