ಚಿಂತಾಮಣಿ : ಭೂಮಿಯಿರುವ ತನಕ ಎಲ್ಲರೂ ಹಿಂದೂಗಳೇ ಕೊನೆಯವರೆಗೂ ಹಿಂದೂ ಧರ್ಮವಿರುತ್ತದೆ,ಆದರೆ ಬಿಜೆಪಿ ಪಕ್ಷದವರು ಹಿಂದೂ ಧರ್ಮದ ಹೆಸರಲ್ಲಿ ಜನರ ಭವನೆಗಳಲ್ಲಿ ದಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವ ಡಾ. ಎಂ.ಸಿ. ಸುಧಾಕರ್ ಹೇಳಿದರು.
ಅಂಬಾಜಿದುರ್ಗ ಹೋಬಳಿಯ ಕೋನಪಲ್ಲಿ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಮನರೆಗಾ ಯೋಜನೆ ಉಳಿಸಿ.ಗ್ರಾಮಗಳ ಸ್ವಾತಂತ್ರ್ಯ ಮತ್ತು ಉದ್ಯೋಗ ಖಾತರಿ ಉಳಿಸಿ ದೇಯ ವಾಕ್ಯದೊಂದಿಗೆ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಜಾತಿ ಜಾತಿಗಳ ಹಾಗೂ ಧರ್ಮಗಳ ಬಗ್ಗೆ ಜನರಲ್ಲಿ ಬಿರುಕನ್ನು ಉಂಟುಮಾಡುವುದಲ್ಲದೆ ರಾಜಕೀಯಕ್ಕಾಗಿ ದೇವರನ್ನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ.ರಾಜಕೀಯ ಲಾಭ ಮತ್ತು ಪ್ರಚಾರಕ್ಕೆ ಮಾತ್ರ ಸೀಮಿತವಾಗಿರುವ ಬಿಜೆಪಿ ಸರ್ಕಾರ ಇದೇನೆಲ್ಲ ಬಿಟ್ಟು ಜನರ ಸಮಸ್ಯೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.ಪ್ರತಿ ಪಂಚಾಯಿತಿ ವ್ಯಾಪ್ತಿಯಯಲ್ಲೂ ಮನರೇಗಾ ಯೋಜನೆ ಪ್ರಮುಖ ಯೋಜನೆ ಯಾಗಿತ್ತು.ಕೇಂದ್ರ ಸರ್ಕಾರ ಇದನ್ನ ರದ್ದು ಮಾಡಿ ಹೊಸದಾಗಿ VBGRAMG ಈ ಕಾಯ್ದೆಯನ್ನು ಅನುಷ್ಠಾನ ಮಾಡಲು ಹೊರಟಾಗ ರಾಹುಲ್ ಗಾಂಧಿ ಮತ್ತು ರವರ ಮಾರ್ಗದರ್ಶನದಲ್ಲಿ ಇಂದು ಉದ್ಯೋಗ ಖಾತ್ರಿ ಉಳಿಸಿ ಎಂಬ ಕಾರ್ಯಕ್ರಮ ದೇಶಾದ್ಯಂತ ನಡೆಯಲಿದೆ ಎಂದರು.
2005ನೇ ವರ್ಷದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭವಾಯಿತು.ನಂತರ ಇಡೀ ದೇಶದ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಅನುಷ್ಠಾನ ಮಾಡಲಾಯಿತು ಎಲ್ಲಾ ಗ್ರಾಮಗಳಲ್ಲಿ ರಸ್ತೆ,ಮನೆ. ಶೌಚಾಲಯ ಹಾಗೂ ಇನ್ನು ಸಾಕಷ್ಟು ಅಭಿರುದ್ದಿ ಕಾಮಗಾರಿಗಳು ಮಾಡಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಲೆಕ್ಕವಿಲ್ಲದಷ್ಟು ಅಭಿರುದ್ದಿ ಮತ್ತು ಉದ್ಯೋಗ ಸೃಷ್ಟಿ ಆಗಿತ್ತು.ಆದರೆ ಈಗ ನೂತನವಾಗಿ ಅನುಷ್ಠಾನಕ್ಕೆ ತರಲು ಹೊರಟಿರುವ ವಿಬಿ ಗ್ರಾಮ ಜಿ ಯೋಜನೆ ಸಂಪೂರ್ಣ ಉಪಯೋಗಕ್ಕೆ ಬಾರದಾಗಿದೆ.ಕೇಂದ್ರ ಸರ್ಕಾರವೇ ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿ ಯೋಜನೆ ರೂಪಿಸಿ ಅವರ ಸೂಚನೆಯಂತೆ ಕೆಲಸ ಮಾಡುವ ಅನಿವಾರ್ಯಯತೆ ಇದೆ.ಇದರಿಂದಾಗಿ ಸ್ಥಳೀಯವಾಗಿ ಮಾಡಬೇಕಾದ ಯಾವುದೇ ಕಾಮಗಾರಿಗಳು ಮಾಡಲು ಸಾಧ್ಯವಾಗುವುದಿಲ್ಲ.ಈ ಹಿಂದ ಮನರೇಗಾ ಯೋಜನೆಯಲ್ಲಿ 100 ದಿನದ ಮಿತಿ ಇತ್ತು ಹಾಗೂ ಬರಗಾಲ ಸಂದರ್ಭದಲ್ಲಿ 125 ರಿಂದ 150 ದಿನಗಳು ಕೆಲಸ ಮಾಡಲು ಅವಕಾಶವಿತ್ತು.ಆದರೆ ಈ ಯೋಜನೆಯಲ್ಲಿ 100 ದಿನಗಳ ದಾಟಿದರೆ ರಾಜ್ಯ ಸರ್ಕಾರವೇ ಬರಿಸಬೇಕು ಅದರಿಂದ ಕೇಂದ್ರ ಸರ್ಕಾರದಿಂದ ಇದು ಸಂಪೂರ್ಣವಾಗಿ ಅನಾನುಕೂಲವಾಗಿದೆ.
ದೇಶ ಮತ್ತು ರಾಜ್ಯದಲ್ಲಿ ಚಿನ್ನ ಬೆಳ್ಳಿಯ ಬೆಲೆ ಗಗನಕ್ಕೆ ಏರಿದೆ ಹಾಗೂ ದಿನೇ ದಿನೇ ದಿನಬಳಕೆ ವಸ್ತುಗಳು ಮತ್ತು ವಿವಿಧ ಸಾಮಗ್ರಿಗಳ ಮೇಲೆ ತೆರಿಗೆ ಏರಿಕೆಯಾಗುತ್ತಿದ್ದರು ಆದರೆ ಬಗ್ಗೆ ಜನರಿಗೆ ಸ್ಪಂದಿಸದೆ ಕೆಲವೊಂದು ವಸ್ತುಗಳ ಮೇಲೆ ಜಿ.ಎಸ್.ಟಿ ತೆರಿಗೆ ಖಂಡಿಯಾಗಿದೆ ಎಂದು ಬಡವರ ಮೇಲೆ ಹಾಕಿರುವ ಹೊರೆಯನ್ನು ಬಿಜೆಪಿ ಸರ್ಕಾರ ಜನರನ್ನು ದಿಕ್ಕು ತಪ್ಪಿಸಿ ಸಂಭ್ರಚಾರಣೆಯಲ್ಲಿ ತೊಡಗಿದ್ದಾರೆ.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಮಾತನಾಡಿ ಈಗಾಗಲೇ ಈ ಭಾಗದ ಶಾಸಕರು ಹಾಗೂ ಉನ್ನತ ಶಿಕ್ಷಣ ಸಚಿವರು ಆದಂತಹ ಎಂಸಿ ಸುಧಾಕರ್ ಅವರು ಸವಿಸ್ತಾರವಾಗಿ ತಿಳಿಸಿದ್ದು ಈಗಾಗಲೇ ನರೇಗಾ ಬಗ್ಗೆ ಜಗತ್ ಜಾಹೀರ್ ಆಗಿ ತಮಗೆಲ್ಲ ಗೊತ್ತೇ ಇದೆ.ಈಗ ನರೇಂದ್ರ ಮೋದಿ ಸರ್ಕಾರ ಹೊಸದಾಗಿ ವಿಜಿ ಗ್ರಾಮ ಜಿ ಯೋಜನೆಯ ಕಾಯ್ದೆಯನ್ನು ತಮ್ಮೆಲ್ಲರ ವಿರುದ್ಧವಾಗಿ ತಂದಿದೆ.
ಯೋಜನೆ ಬದಲಾಯಿಸಿದ್ದಲ್ಲದೆ ಕಾಂಗ್ರೆಸ್ ಪಕ್ಷ ದೇಶದ ಕೋಟ್ಯಾಂತ ಜನರಿಗೆ ರೋಜಗಾರ್ ಗ್ಯಾರಂಟಿಯ ಹಕ್ಕನ್ನು ನೀಡಿತ್ತು ಅದನ್ನು ಸಹ ಕಸಿದುಕೊಂಡಿದೆ.ಈ ಹಿಂದೆ ನರೇಗಾ ಕಾಮಗಾರಿಯ ಹಣವನ್ನು ಕೇಂದ್ರ ಸರ್ಕಾರ ನೀಡುತ್ತಿತ್ತು ಆದರೆ ಈಗ ರಾಜ್ಯ ಸರ್ಕಾರ ನೀಡುವ ಅನಿವಾರ್ಯ ಎದುರಾಗಿದೆ.
ಇದನ್ನು ಓದಿದ್ದೀರಾ..? ಸ್ಪಾರ್ಕ್ ನಿರೂಪಣಾ ರತ್ನ ರಾಜ್ಯ ಪ್ರಶಸ್ತಿಗೆ ಅರಿನಾಗನಹಳ್ಳಿ ಶಿಕ್ಷಕ ಡಾ.ಮಂಜುನಾಥ್ ಆಯ್ಕೆ.
ಯಾರು ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದರು ಅವರು ಗ್ರಾಮ ಪಂಚಾಯತಿಯ ಮಹಾತ್ಮ ಗಾಂಧಿಯ ಹೆಸರಿನ ಯೋಜನೆಯಾಗಿತ್ತು.ಕರ್ನಾಟಕದಲ್ಲಿ 40 ಲಕ್ಷಕ್ಕೂ ಹೆಚ್ಚು ಜನ ಜಾಬ್ ಕಾರ್ಡ್ ಮೂಲಕ ಕೆಲಸ ಮಾಡುತ್ತಿದ್ದರು ಮತ್ತು 5 ಲಕ್ಷ ಜನ ಯೋಜನೆಯ ಪರೀಕ್ಷಣೆ ಮಾಡುತ್ತಿದ್ದರು ಈಗ ಅವರೆಲ್ಲ ಉದ್ಯೋಗ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ.ಆದ್ದರಿಂದ ಈ ಕಾರ್ಯಕ್ರಮ ಇಲ್ಲಿಗೆ ಸೀಮಿತವಲ್ಲ ದೇಶದ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಸದಸ್ಯರು ಈ ಹೋರಾಟವನ್ನು ನಡೆಸಿ ನಿಮ್ಮ ಹಕ್ಕನ್ನು ನಿಮಗೆ ಹಿಂದಿರುಗಿಸುತ್ತೇವೆ ಹಾಗೂ 27 ರಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಮತ್ತು ಕರ್ನಾಟಕ ಪ್ರದೇಶ್ ಕಾಂಗ್ರೆಸ್ ಸುರ್ಜೆವಾಲ ಮತ್ತು ಸಂಪುಟದ ಮಂತ್ರಿಗಳೊಂದಿಗೆ ರಾಜ್ಯಪಾಲರ ಮನೆಯ ಮುಂದೆ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.





