ಬಾಗೇಪಲ್ಲಿ : ವಿಶೇಷ ಚೇತನ ಮಕ್ಕಳನ್ನು ಗುರುತಿಸಿ ಅವರಿಗೆ ಅವಕಾಶ ಕೊಡಿ ಅನುಕಂಪ ಬೇಡ ಎಲ್ಲ ರಂಗಗಳಲ್ಲಿ ವಿಶೇಷ ಚೇತನರು ಉತ್ತಮ ಸಾಧನೆ ಮಾಡುತ್ತಿದ್ದಾರೆ ಅವರಿಗೆ ಅವಕಾಶ ನೀಡಿ ಎಂದು ಬಿಇಓ ವೆಂಕಟೇಶಪ್ಪ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್, ಚಿಕ್ಕಬಳ್ಳಾಪುರ ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಸಮಗ್ರ ಶಿಕ್ಷಣ – ಕರ್ನಾಟಕ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಇವರ ಸಹಯೋಗದಲ್ಲಿ ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರ ಆವರಣದಲ್ಲಿ ವಿಶೇಷ ಚೇತನರಿಗೆ ಅಗತ್ಯವುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರವು ಸಹ ವಿವಿಧ ರೀತಿಯಲ್ಲಿ ವಿಶೇಷ ಚೇತನರ ಮಕ್ಕಳಿಗೆ ಅನೇಕ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಾಗೂ ಪೋಷಕರಲ್ಲಿ ಕೀಲಿರುಮೆ ಮನೋಭಾವ ಬರಬಾರದು ವಿಶೇಷ ಚೇತನ ಮಗು ನಮಗೆ ಶಾಪವಾಗಿ ಹುಟ್ಟಿದೆ ಎಂಬ ಭಾವನೆ ನಮ್ಮಲ್ಲಿರಬಾರದು ಎಲ್ಲರ ಮಕ್ಕಳಂತೆ ಈ ವಿಶೇಷ ಮಕ್ಕಳಅನ್ನು ಸಹ ನೋಡಿಕೊಳ್ಳಬೇಕು ಎಲ್ಲಾ ಮಕ್ಕಳಿಗೆ ಕೊಡುವಂತಹ ಅವಕಾಶಗಳನ್ನು ಸಹ ಈ ಮಕ್ಕಳಿಗೆ ಕೊಡಬೇಕು ಪ್ರತಿ ವರ್ಷವೂ ಸಹ ಆರೋಗ್ಯ ತಪಾಸಣಾ ಶಿಬಿರಗಳನ್ನು ವಿಶೇಷವಾಗಿ ಮಾಡಲಾಗುತ್ತಿದೆ ನಮ್ಮಲ್ಲಿ 98 ರಿಂದ 100 ಜನರವರೆಗೂ ಮಕ್ಕಳನ್ನು ಗುರುತಿಸಿ ಆರು ರೀತಿಯ ನ್ಯೂನ್ಯತೆ ಇರುವಂತಹ ಮಕ್ಕಳಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಇವತ್ತು ಹಮ್ಮಿಕೊಂಡಿದ್ದೇವೆ ಎಂದರು.
ಇನ್ನು ಈ ಸಂದರ್ಭದಲ್ಲಿ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್. ಹನುಮಂತರೆಡ್ಡಿ ಮಾತನಾಡಿ ಎಲ್ಲರ ಮಕ್ಕಳ ಜೊತೆ ನಮ್ಮ ವಿಶೇಷ ಚೇತನ ಮಕ್ಕಳು ಬೆರೆತಾಗ ಅವರು ಅವರಿಗೆ ಉತ್ಸಾಹದಿಂದ ಅವರು ಕಲಿಯಲು ಪ್ರಯತ್ನ ಪಡುತ್ತಾರೆ. ವಿಶೇಷ ಚೇತನ ಮಕ್ಕಳು ಕ್ರೀಡೆ ಸಾಂಸ್ಕೃತಿಕ ಎಲ್ಲಾ ರಂಗಗಳಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಪೋಷಕರು ಹಾಗೂ ಎಲ್ಲ ಸಾರ್ವಜನಿಕರು ವಿಶೇಷ ಚೇತನ ಮಕ್ಕಳನ್ನು ಪ್ರೋತ್ಸಾಹಿಸಬೇಕು ಹಿತ ಶಿಬಿರಗಳಲ್ಲಿ ಎಲ್ಲರೂ ಭಾಗವಹಿಸಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಇದನ್ನು ಓದಿದ್ದೀರಾ..? ಕನ್ನಡ ನೆಲ, ಜಲ, ಸಂಸ್ಕೃತಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ: ಎಂಎಲ್ಸಿ ಅನಿಲ್ ಕುಮಾರ್
ಇನ್ನು ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಸತ್ಯನಾರಾಯಣ ರೆಡ್ಡಿ, ಸಮನ್ವಯ ಶಿಕ್ಷಣಾಧಿಕಾರಿ ವೆಂಕಟರಾಯಪ್ಪ, ನಾರಾಯಣಸ್ವಾಮಿ, ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಗಣೇಶ್, ತಾಲೂಕಿನ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ರಾಮಪ್ಪ, ಬಿ ಐ ಇ ಆರ್ ಟಿ ಗಂಗಾಧರ, ಮುನಿರಾಜು, ಯು ಆರ್ ಡಬ್ಲ್ಯೂ ಗೌತಮಿ ಹಾಗೂ ತಾಲೂಕಿನ ಎಲ್ಲಾ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹಾಜರಿದ್ದರು.





