ಬಾಗೇಪಲ್ಲಿ : ಮಾದಿಗ ಮಹಾಸಭಾ ರಾಜ್ಯದಲ್ಲಿ ಮಾದಿಗ ಸಮುದಾಯದ ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸುವ ಸಂಸ್ಥೆಯಾಗಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ, ಕರ್ನಾಟಕ ಮಾದಿಗ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಎಚ್. ಮುನಿಯಪ್ಪ ಹೇಳಿದರು.
ಪಟ್ಟಣದ ಗಿರಿಜಾ ಕಲ್ಯಾಣ ಮಂಟಪ ದಲ್ಲಿ ಆಯೋಜಿಸಿರುವ ಕರ್ನಾಟಕ ಮಾದಿಗ ಮಹಾಸಭಾ ತಾಲ್ಲೂಕಿನ ಮಾದಿಗ ನೌಕರರ ಸಂಘ ಮತ್ತು ಎಲ್ಲಾ ಮಾದಿಗ ಮುಖಂಡರು ಭಾಗವಹಿಸಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷಾತೀತವಾಗಿ ಮಾದಿಗ ಮಹಾ ಸಭಾ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶಗಳಲ್ಲಿ ನಿರಂತರ ಹೋರಾಟ ಮಾಡುವ ಮೂಲಕ ಸಮುದಾಯದ ಹಕ್ಕುಗಳಗಾಗಿ ಶ್ರಮಿಸುತ್ತಿದೆ ಎಂದರು.
ಬಾಗೇಪಲ್ಲಿ ಪಟ್ಟಣದಲ್ಲಿ ಮಾದಿಗ ಮುಖಂಡರು ಇಬ್ಬಗವಾಗಿ ಬೇರೆ ಬೇರೆ ದಿಕ್ಕುಗಳಿಗೆ ಇದ್ದರು. ಮಾದಿಗ ಸಮುದಾಯದ ಒಂದಾಗಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಉಳಿಗಾಲವಿಲ್ಲ ಎಂದು ಮನೆಗಂಡು ಒಂದಾಗಿದ್ದಾರೆ.
ತಾಲ್ಲೂಕಿನ ಮಾದಿಗ ಮುಖಂಡ ಬಿ ವಿ ವೆಂಕಟರಮಣ ಮಾತನಾಡಿ ನಾವು ಬೇರೆ ಬೇರೆ ಜನಾಂಗದವರಿಗೆ ಸಹಕರಿಸಿ ಎಲ್ಲ ಹೋರಾಟ ಗಳಲ್ಲಿ ಮುಂದೆ ನಿಂತು ನ್ಯಾಯ ಒದಗಿಸಿ ದ್ದೇವೆ. ನಮ್ಮ ಜನರಿಗೆ ಏನು ಮಾಡಿಲ್ಲ, ನಮ್ಮ ಸಮುದಾಯದ ಮೂಲೆ ಗುಂಪಿಗೆ ತಳ್ಳಿಬಿಟ್ಟಿದ್ದಾರೆ. ಅದಿಕ್ಕೇ ನಮಗೆ ನೋವಾಗಿ ಮತ್ತೇ ಒಂದೇ ವೇದಿಕೆ ಬೇಕು ಎಂದರು.
ಮತ್ತೊಬ್ಬ ಮುಖಂಡ ಎ ವಿ ಪೂಜಪ್ಪ ಮಾತನಾಡಿ ಮಾದಿಗ ಒಂದಾಗಿ ಕಂಡ ತಕ್ಷಣ ನನಗೆ ಖುಷಿಯಾಗಿದೆ, 5000ಸದಸ್ಯತ್ವ ಮಾಡಿಸುವುದು ನಮ್ಮ ಜವಾಬ್ದಾರಿ ಎಂದರು. ಶೈಕ್ಷಣಿಕ ವಾಗಿ ನಮ್ಮ ಜನಾಂಗ ಕೆಳಮಟ್ಟಕ್ಕೆ ಹೋಗಿದೆ ಇದನ್ನ ಮೇಲೇತ್ತುವ ಕೆಲಸ ಮಾಡಿ ಎಲ್ಲಾ ರೀತಿಯಲ್ಲಿ ಸಹಕರಿಸಿ ಪ್ರೋತ್ಸಾಹಿಸಿ ಮುಂದೆ ನಿಂತು ಮಾಡುತ್ತೇವೆ ಎಂದರು.
ಮಾದಿಗ ಸಮುದಾಯದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾಸಂಸ್ಥೆ ಸ್ವಾಪಿಸಿ, ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗುವುದು. ಸಮಾಜಕ್ಕೆ, ಸಮುದಾಯಕ್ಕೆ ನಮ್ಮ ಕೊಡುಗೆ ಏನು ಎಂದು ನಮಗೆ ನಾವು ಪ್ರಶ್ನಿಸಿ ಕೊಳ್ಳಬೇಕು, ಸಮಾಜಕ್ಕೆ ನಮ್ಮ ಹೆಜ್ಜೆಗುರುತು ಬಿಡುವ ಮೂಲಕ ಮುಂದಿನ ಪೀಳಿಗೆಗೆ ಸಮಾಜದ ಹಾಗೂ ಸಮುದಾಯದ ಅಭ್ಯುದಯಕ್ಕೆ ಕೊಡುಗೆ ನೀಡಬೇಕು ಎಂದರು.
ಮಾದಿಗ ಸಮುದಾಯ ಮಠದ ಆನಂದ ಮಹಾಸ್ವಾಮೀಜಿ ಆರ್ಶೀ ವಚನ ನೀಡಿ, ಮಾದಿಗ ಸಮುದಾಯದ ಬಗ್ಗೆ ವಿಚಾರಗಳಿರುವ ಜಾಂಬವ ಪುರಾಣ ಅತ್ಯಂತ ಶ್ರೇಷ್ಠವಾಗಿದೆ ಎಂಬುದು ದೇವ ನಾಗರೀಕ ಲಿಪಿಯಲ್ಲಿ ಉಲ್ಲೇಖವಾಗಿದೆ. ಸಮುದಾಯ ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಒತ್ತು ನೀಡಿ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜರು ಮಹಾರಾಜರು ಜಂಬೂದ್ವೀಪ ಭಾರತವರ್ಷ ಎಂದು ಬ್ರಹ್ಮನರು ಹೇಳುತ್ತಾರೆ.
ಬಾಗೇಪಲ್ಲಿ ಗಿರಿಜಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಮಾದಿಗ ಮಹಾಸಭಾ ತಾಲೂಕು ಹಮ್ಮಿಕೊಂಡಿದ್ದ ಸದಸ್ಯತ್ವ ಅಭಿಯಾನ ಕಾರ್ಯಕ್ರಮವನ್ನು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಉದ್ಘಾಟಿಸಿ, ಮಾತನಾಡಿದರು. ರಾಜಕೀಯವಾಗಿ, ಸಾಮಾಜಿಕ ವಾಗಿ,ಶೈಕ್ಷಣಿಕ ವಾಗಿ, ಆರ್ಥಿಕವಾಗಿ, ಈ ಎಲ್ಲಾ ರಂಗಗಳಲ್ಲಿ ಮುಂದೆಗೆ ತರಬೇಕು ಎಂದು ಕರೆ ನೀಡಿದರು. ಮೀಸಲಾತಿ ಯಲ್ಲಿ ಶೇಕಡಾ 6% ರಷ್ಟು ನಮ್ಮ ಜನಾಂಗಕ್ಕೆ ಸಿಕ್ಕಿದೆ ಆದರೆ ಮಾದಿಗರ ಜನಾಂಗದಲ್ಲಿ ತೀರಾ ಹಿಂದುಳಿದ್ದಿದ್ದಾರೆ, ಕೇವಲ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಗೆ ಸೀಮಿತವಾಗಿ ವಿದ್ಯಾಭ್ಯಾಸದಲ್ಲಿ ಮುಂದೆವರೆದರೆ ಮಾತ್ರ ನಾವು ಪ್ರಗತಿ ಕಾಣಲು ಸಾಧ್ಯ. ನಾನು 40 ವರ್ಷ ಗಳ ಸುದೀರ್ಘ ಕಾಂಗ್ರೆಸ್ ನಲ್ಲಿ ಗೆದ್ದು, ಕೇಂದ್ರ ಸಚಿವರಾಗಿ, ರಾಜ್ಯ ಸಚಿವರಾಗಿ ಸೇವೆ ಮಾಡಿದ್ದೇನೆ,ಆದರೆ ನನ್ನ ಜನಾಂಗಕ್ಕೆ ಪರವಾಗಿ ನಿಲ್ಲಬೇಕು ಎಂದರು.
ಕೆ.ಎಚ್. ಮುನಿಯಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಧ್ವನಿ ಎತ್ತಬೇಕು, ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಮಾತಂಗ ಫೌಂಡೇಷನ್ ಅಧ್ಯಕ್ಷ ಕೆ ಎಚ್ ಮುನಿಯಪ್ಪ ಸಿಎಂ ಆಗಲಿ: ಅತಿ ಹೆಚ್ಚು ಜನಸಂಖ್ಯೆಯಿರುವ ಮಾದಿಗ ಸಮುದಾಯ ಯಾಕೆ ಮುಖ್ಯ ಮಂತ್ರಿ ಸ್ಥಾನ ನೀಡಬಾರದು. ಕೇಂದ್ರ ಮತ್ತು ರಾಜ್ಯ ದಲ್ಲಿ ಅವರ ಸೇವೆ ಸ್ಲಾಘನೀಯ ಅನನ್ಯವಾದದ್ದು.
ಲೋಕೇಶ್ ಮಾತನಾಡಿ, ಮಾದಿಗ ಸಮುದಾಯ ತನ್ನದೇ ಆದರ ಪರಂಪರೆ ಮತ್ತು ಇತಿಹಾಸ ಹೊಂದಿದೆ. ಈ ಪರಂಪರೆ ಉಳಿಸಿ ಬೆಳೆಸುವ ಜತೆಗೆ ನಮ್ಮ ಸಮುದಾಯದ ಇತಿ ಹಾಸ ಮರುಸ್ಥಾಪಿಸಬೇಕು ಎಂದರು.
ಮಾದಿಗ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕಲಿನಾಯಕನಹಳ್ಳಿ ಮುನಿಯಪ್ಪ ಮಾತನಾಡಿ, ನಮ್ಮ ಸಮುದಾಯದ ಅಭಿವೃದ್ಧಿ ಹಾಗೂ ನಮ್ಮ ಹಕ್ಕುಗಳನ್ನು ಪಡೆಯಲು ಪ್ರತಿಯೊಬ್ಬರು ಮಾದಿಗ ಮಹಾ ಸಭಾ ಸದಸ್ಯತ್ವಕ್ಕೆ ನೋಂದಣಿ ಆಗಬೇಕು ಎಂದರು.
ಇದನ್ನು ಓದಿದ್ದೀರಾ..? ಚಿಕ್ಕಬಳ್ಳಾಪುರ | ಡಿ.13ಕ್ಕೆ ಬೃಹತ್ ಲೋಕ ಅದಾಲತ್
ಈ ಸಂದರ್ಭದಲ್ಲಿ ಮೂರು ತಾಲ್ಲೂಕಿನ ಚಿನ್ನ ಕೈವರಾಮಯ್ಯ, ಕೆ ಇ ಬಿ ರಮೇಶ್ ಬಾಬು,ಸಿವಿ ವೆಂಕಟರಾಯಪ್ಪ, ಮುದ್ದಲಪಲ್ಲಿ ಕಿರಣ್, ಆನಾ ಮೂರ್ತಿ, ಕಡ್ಡಿಲು ವೆಂಕಟರಮಣ, ಜೀವಕ ನಾರಾಯಣ ಸ್ವಾಮಿ, ಅಂಜಿನಪ್ಪ,ಶಿವಚಂದ್ರಕುಮಾರ್, ನಾಗಾರ್ಜುನ, ಎಚ್ ಎ ಚೌಡಪ್ಪ, ಕೋಟಪ್ಪ,ಮೊಟಕಪಲ್ಲಿ ಲಕ್ಷ್ಮಿ, ಚೌಡಯ್ಯ, ರಾಜಪ್ಪ, ಈಶ್ವರಪ್ಪ, ವೆಂಕಿ ಮುದ್ದಲಪಲ್ಲಿ,ನವೀನ್, ವಿಜಯ್, ಹಲವು ಮಾದಿಗ ಮುಖಂಡರು ಇದ್ದರು.





