ಬಾಗೇಪಲ್ಲಿ:- ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಘಟನೆಯನ್ನು ತಾಲ್ಲೂಕು ಸಿಪಿಐಎಂ ತಾಲ್ಲೂಕು ಸಮಿತಿ ಖಂಡಿಸಿ ಪಟ್ಟಣದ ಡಾ.ಅಂಬೇಡ್ಕರ್ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮುನಿ ವೆಂಕಟಪ್ಪ ಮಾತನಾಡಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದಿರುವುದನ್ನು ಖಂಡಿಸಿ ಸಿಪಿಐಎಂ ತಾಲ್ಲೂಕು ಸಮಿತಿ ವತಿಯಿಂದ ಕಾರ್ಯಕರ್ತರು ಪಟ್ಟಣದ ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಸಿಪಿಐಎಂ ಪಕ್ಷದ ತಾಲ್ಲೂಕು ಸಮಿತಿ ಸುಂದರಯ್ಯ ಭವನ ದಿಂದ ಹೊರಟ ಬೈಕ್ ರ್ಯಾಲಿ ಪಟ್ಟಣದ
ಅಂಬೇಡ್ಕರ್ ಪ್ರತಿಮೆ ಸಂಘಟಿತರಾದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆರೋಪಿ ವಕೀಲನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‘‘ನ್ಯಾಯಮೂರ್ತಿಗಳ ಮೇಲೆ ಶೂ ಎಸೆದಿರುವುದು ದೇಶದಲ್ಲಿನ ಕ್ರೂರ ಜಾತಿ ವ್ಯವಸ್ಥೆಯ ಪ್ರದರ್ಶನವಾಗಿದೆ. ಇಂತಹ ದಾಳಿಗಳು ದೇಶದ ನ್ಯಾಯಾಂಗ ವ್ಯವಸ್ಥೆ ಹಾಗೂ ಪ್ರಜಾಸತ್ತಾತ್ಮಕ ಧಕ್ಕೆ ತಂದೊಡ್ಡಲಿದೆ,’’ ಎದು ಕಳವಳ ವ್ಯಕ್ತಪಡಿಸಿದರು.
ನ್ಯಾಯದಾನ ವ್ಯವಸ್ಥೆ ಅನ್ಯಾಯದ ವಿರುದ್ಧ ನ್ಯಾಯ ಪಡೆದುಕೊಳ್ಳಲು ಅನೇಕ ಸೌಲಭ್ಯಗಳನ್ನು ನೀಡಿದೆ, ಇಂತಹ ಮಹಾನ್ ನ್ಯಾಯ ವ್ಯವಸ್ಥೆಯ ಪ್ರಮುಖರ ಮೇಲೆ ಈ ರೀತಿ ಹಲ್ಲೆ ನಡೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಪ್ಪು ಮಾಡಿರುವ ಆರೋಪಿ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ಸಿಪಿಐಎಂ ಪಕ್ಷದ ಮುಖಂಡ ರಘುರಾಮ ರೆಡ್ಡಿ ಮಾತನಾಡಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜಿಐ) ಬಿ.ಆರ್. ಗವಾವಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ ಕಿಶೋರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದರು.
ದಲಿತ ಹಕ್ಕುಗಳ ಸಮಿತಿ ಮುಖಂಡ ಬಿಳ್ಳೂರು ನಾಗರಾಜು ಮಾತನಾಡಿ ಮುಖ್ಯ ನ್ಯಾಯಮೂರ್ತಿಯ ಮೇಲೆ ಅಗೌರವ ತೋರಿದ ಆತನ ಮನಸ್ಥಿತಿ ಸರಿಯಾದುದು ಅಲ್ಲ, ಈ ರೀತಿ ಅಗೌರವ ತರುವುದು ಯಾರಿಗೂ ಶೋಭೆ ತರದು, ಸಜ್ಜನ ಸಾತ್ವಿಕತೆಯ ಪ್ರತಿರೂಪವಾಗಿರುವ ಗವಾಯಿ ಅವರ ಮೇಲೆ ಈ ರೀತಿ ಹಲ್ಲೆ ಯತ್ನ ನಡೆದಿರುವುದು ಅತ್ಯಂತ ಘೋರ ಶಬ್ದಗಳಲ್ಲಿ ಖಂಡನೆ ಮಾಡಬೇಕಿದೆ ಎಂದರು.
ಇದನ್ನು ಓದಿದ್ದೀರಾ..? ನಾಳೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅಮೃತ ಹಸ್ತದಿಂದ ಸೇತುವೆಗಳ ಲೋಕಾರ್ಪಣೆ: ಶಾಸಕಿ ಎಂ.ರೂಪಕಲಾ
ಈ ಸಂದರ್ಭದಲ್ಲಿ ಸಿಪಿಐಎಂ ಪಕ್ಷದ ಮುಖಂಡರಾದ ವಾಲ್ಮೀಕಿ ಅಶ್ವತ್ಥಪ್ಪ,ಚನ್ನರಾಯಪ್ಪ,ಜಿ.ಕೃಷ್ಣಪ್ಪ,ಮುಸ್ತಫಾ,ಡಿ.ಟಿ.ಮನಿ ಸ್ವಾಮಿ,ಕೃಷ್ಣಪ್ಪ ಎಸ್.ಎಫ್.ಐ ಮುಖಂಡ ಸೋಮಶೇಖರ ಹಾಗೂ ಇತರರು ಹಾಜರಿದ್ದರು.





