ಹೆಣ್ಣುಮಕ್ಕಳು ಶಾಲಾ ಶಿಕ್ಷಣದಿಂದ ವಂಚಿತರಾಗಬಾರದೆಂದು

Date:

ಕೋಲಾರ : ತಾಲೂಕಿನ ಯಲವಾರ ಗ್ರಾಮದಲ್ಲಿ ರೋಟರಿ ಕ್ಲಬ್ ಕೋಲಾರ ಹಾಗೂ ರೋಟರಿ ಲೇಕ್ ಸೈಡ್ ಬೆಂಗಳೂರು ಸಂಸ್ಥೆಯ ಸಹಯೋಗದಲ್ಲಿ 8ನೇ ತರಗತಿಯ ವಿದ್ಯಾರ್ಥಿ ನಿಯರಿಗೆ 5 ಉಚಿತ ಬೈಸಿಕಲ್ ಗಳನ್ನು ವಿತರಿಸಿ ಮಾತನಾಡಿ, ಸಂಘ ಸಂಸ್ಥೆಗಳು ಹಾಗೂ ಸರಕಾರಗಳು ವಿವಿಧ ಯೋಜನೆಗಳನ್ನು ನೀಡಿದ್ದು, ಪೋಷಕರು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕಡ್ಡಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.

ಪೋಷಕರು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಅಸ್ತ್ರವಾಗಿ ನೀಡಿದರೆ, ಸಮಾಜ ಹಾಗೂ ಕುಟುಂಬವೂ ನಾನಾ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ರೋಟರಿ ಸಂಸ್ಥೆಯೂ ಸಮಾಜದಲ್ಲಿ ಶಿಕ್ಷಣ ಹಾಗೂ ಅರೋಗ್ಯ ಕ್ಷೇತ್ರಗಳಿಗೆ ಇಂದಿಗೂ ಸಹ ವಿವಿಧ ಯೋಜನೆ ಗಳನ್ನು ನೀಡುವ ಮೂಲಕ ಸಾಗುತ್ತಿದೆ. ಇದರ ಸದುಪಯೋಗವನ್ನು ಪ್ರತಿಯೊಬ್ಬರು ಪಡೆದುಕೊ ಳ್ಳಬೇಕು ಎಂದು ಮನವಿ ಮಾಡಿದರು.

ಡಿಸೆಂಬರ್ ತಿಂಗಳಿಂದ ಕೇಂದ್ರ ಸರಕಾರದಿಂದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆಯನ್ನು ಮನೆ ಬಾಗಿಲಿಗೆ ಬಂದು ನೀಡಲಿದ್ದು, ಪೋಷಕರು ಜಾಗೃತರಾಗಿ ಮಕ್ಕಳ ಹಿತಕ್ಕಾಗಿ ಲಸಿಕೆಯನ್ನು ಕಡ್ಡಾಯ ಹಾಕಿ ಅರೋಗ್ಯ ವಂತ ಮಗುವಾಗಿ ಮಾಡಬೇಕು ಎಂದು ಮನವಿ ಮಾಡಿದರು.

ನಿವೃತ್ತ ಕೆ ಎಸ್ ಆರ್ ಟಿ ಸಿ ವೈ. ವಿ. ರಮೇಶ್ ಕುಮಾರ್ ಮಾತನಾಡಿ, ಜಿಲ್ಲಾ ರೋಟರಿ ಕ್ಲಬ್ ನಿಂದ ಸರಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ರಂಗದಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲು ರೋಟರಿ ಸಂಸ್ಥೆ ಹೆಚ್ಚು ಸಹಕಾರಿ ಯಾಗುತ್ತಿದೆ ಎಂದರು.

ಸರಕಾರಿ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯರಾದ ಯಲವಾರ ಗ್ರಾಮದ ಟಿ. ಗೌತಮಿ, ವೈ. ವಿ. ಅನುಶ್ರೀ, ವೈ. ಆರ್. ತ್ರಿವೇಣಿ, ವಿ. ಸಂಜನಾ, ಎಂ. ಸುಸ್ಮಿತಾ ರಿಗೆ ಉಚಿತ ಬೈಸಿಕಲ್ ಸೌಲಭ್ಯವನ್ನು ಜಿಲ್ಲಾ ರೋಟರಿ ಸಂಸ್ಥೆಯಿಂದ ಪಡೆದರು.

ಇದನ್ನು ಓದಿದ್ದೀರಾ..?ಮನೆ ವಿಚಾರಕ್ಕೆ ದೊಡ್ಡಪ್ಪನ ಮರ್ಡರ್ ಮಾಡಿದ ತಮ್ಮನ ಮಗ

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ರಾಜ್ ಕುಮಾರ್, ಜಿಲ್ಲಾ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್, ಪ್ರಗತಿ ಆಗೋ ಸರ್ವಿಸಸ್ ನ ದೇವರಾಜ್, ಬಿಕೆ ನಾಗರಾಜ್, ಇಸ್ರೋ ಶಂಕರಪ್ಪ, ನಿವೃತ್ತ ಕೆ ಎಸ್ ಆರ್ ಟಿ ಸಿ ಎಚ್ ಎಮ್ ಶ್ರೀನಿವಾಸ್, ನಿವೃತ್ತ ಕೆ ಎಸ್ ಆರ್ ಟಿ ಸಿ ಲಕ್ಷ್ಮಿ ನಾರಾಯಣ್ ಸ್ವಾಮಿ ಗೌಡ, ಬೈಚಪ್ಪ, ಪ್ರಗತಿಪರ ರೈತರಾದ ಗೋವಿಂದಪ್ಪ, ತೂರಾಂಡಹಳ್ಳಿ ರವಿ, ನಾಗೇಶ್, ಗ್ರಾಮಪಂ ಸದಸ್ಯರಾದ ಶೈಲಜಾ, ಭವ್ಯ, ವೆಂಕಟೇಶಪ್ಪ, ಗ್ರಾಮಸ್ಥರು ವಿದ್ಯಾರ್ಥಿಗಳು ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...