ಮುಳಬಾಗಿಲು : ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಜಿಲ್ಲೆಗೆ ಶಾಶ್ವತವಾದ ನೀರಾವರಿ ಯೋಜನೆ ಕೃಷಿ ಆಧಾರಿತ ಕೈಗಾರಿಕೆಗಳು ಸ್ಥಾಪನೆ ಹಾಗೂ ಕೆ.ಸಿ. ವ್ಯಾಲಿ ನೀರು ಮೂರನೇ ಹಂತ ಶುದ್ಧೀಕರಣ ಇನ್ನಿತರ ರೈತಪರ ಕೂಲಿ ಕಾರ್ಮಿಕರ ಪರ ಕಾರ್ಯಕ್ರಮಗಳನ್ನು ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ 9-10 -11 ನೇ ತಾರೀಕು 18ನೇ ರಾಜ್ಯ ಸಮ್ಮೇಳನವನ್ನು ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದು ಜಿಲ್ಲೆಯ ಮತ್ತು ತಾಲೂಕಿನ ಎಲ್ಲಾ ರೈತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿ ಮಾಡಬೇಕೆಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಮುಖಂಡರಾದ ವಿ. ಗೀತಾ ಪತ್ರಿಕಾ ಗೋಷ್ಠಿ ಮೂಲಕ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ 18ನೇ ರಾಜ್ಯ ಸಮ್ಮೇಳನದ ಬಗ್ಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ನಮ್ಮ ಕೋಲಾರ ಜಿಲ್ಲೆಯ ರೈತರು ಇಡೀ ರಾಜ್ಯಕ್ಕೆ ಚಿನ್ನ, ಹಾಲು,ರೇಷ್ಮೆ,ತರಕಾರಿ,ಹೂಗಳನ್ನು, ಕೊಟ್ಟಂತ ನಮ್ಮ ಜಿಲ್ಲೆಗೆ ರೈತರಿಗೆ ಕ್ಯಾನ್ಸರ್ ಕಾರಕವಾದ ಕೊಳಚೆ ನೀರನ್ನು ಬಿಡುವುದು ಎಷ್ಟು ಮಾತ್ರ ಸರಿ ಎಂದು ಸರ್ಕಾರಗಳ ವಿರುದ್ಧ ಆರೋಪ ಮಾಡಿದರು.
ಕೆ ಪಿ ಆರ್ ಎಸ್ ನ 18ನೇ ರಾಜ್ಯ ಸಮ್ಮೇಳನ ಕಾರ್ಯಕ್ರಮ ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ ನಡೆಯುತ್ತಿದ್ದು ಈ ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸಭಾಪತಿಗಳಾದ ವಿ ಆರ್ ಸುದರ್ಶನ್ ಹಾಗೂ ಅನೇಕ ರಾಜ್ಯ ಮಟ್ಟದ ಗಣ್ಯ ನಾಯಕರು ಭಾಗವಹಿಸುತ್ತಿದ್ದು, ಅನೇಕ ವಿಚಾರಗಳನ್ನು ಚರ್ಚೆ ಮಾಡುತ್ತಿದ್ದು ಜಿಲ್ಲೆ ಮತ್ತು ತಾಲೂಕಿನ ರೈತರು ಕೂಲಿ ಕಾರ್ಮಿಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮ್ಮೇಳನ ಕಾರ್ಯಕ್ರಮದಲ್ಲಿ ಬಂದು ಭಾಗವಹಿಸಿ ಯಶಸ್ವಿ ಮಾಡಬೇಕೆಂದು ತಿಳಿಸಿದರು.
ನಂತರ ಸಿಪಿಎಂ ಐ ತಾಲ್ಲೂಕು ಕಾರ್ಯದರ್ಶಿಗಳಾದ ಪುಣ್ಯಹಳ್ಳಿ ಶಂಕರ್ ಮಾತನಾಡಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಒಂದು ಸಮ್ಮೇಳನ ನಡೆಸಿ ಈ 3 ವರ್ಷಗಳಲ್ಲಿ ರಾಜ್ಯ,ಜಿಲ್ಲೆ ಮತ್ತು ತಾಲೂಕುಗಳಲ್ಲಿ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿ ಅದಕ್ಕೆ ಪರಿಹಾರ ಯೋಜನೆ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಮಾವೇಶ ಮಾಡಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ವಿರೋಧಿ ನೀತಿಗಳು ವಿದ್ಯುತ್ ಸ್ಮಾರ್ಟ್ ಮೀಟರ್ ವಿದ್ಯುತ್ ಖಾಸಗಿಕರಣ ರೈತರಿಗೆ ಬೆಂಬಲ ಬೆಲೆ ನೀಡಬೇಕೆಂದು ನಮ್ಮ ಸಂಘಟನೆ ವತಿಯಿಂದ ಸ್ವಾಮಿನಾಥನ್ ವರದಿ ಮಾಡಬೇಕೆಂದು ಅನೇಕ ಬಾರಿ ಹೋರಾಟ ಮಾಡಿದರು ಸರ್ಕಾರಗಳು ಬೆಂಬಲ ಬೆಲೆ ಜಾರಿಗೆ ತಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.
ನಮ್ಮ ತಾಲೂಕಿನಲ್ಲಿ ಸಾಗುವಳಿ ಚೀಟಿಗಾಗಿ 15 ಸಾವಿರ ಜನ ಅರ್ಜಿಯಾಗಿದ್ದು 13,000 ರೈತರ ಅರ್ಜಿಗಳು ವಜಾ ಆಗಿದ್ದಾವೆ ಎಂದು ಆರೋಪ ಮಾಡಿದ್ರು ಕಳಪೆ ಬಿದ್ದನೆ ಬೀಜ ಹಳೆಪೇಟೆ ರಸ ಗೊಬ್ಬರಗಳು ಕ್ರಿಮಿ ಕೀಟನಾಶಕ ಅಂಗಡಿಗಳಿಂದ ರೈತರಿಗೆ ತುಂಬಾ ಅನ್ಯಾಯವಾಗುತ್ತಿದೆ ಇದನ್ನು ಸರ್ಕಾರಗಳು ಕಾನೂನು ಚೌಕಟ್ಟಿನಲ್ಲಿ ಸರಿಪಡಿಸಬೇಕೆಂದು ಈ ಸಮ್ಮೇಳನದಲ್ಲಿ ಒತ್ತಾಯ ಮಾಡುತ್ತೇವೆ ಎಂದು ತಿಳಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದಿಂದ ಕೋಲಾರದ ಕೆಇಬಿ ಸಮುದಾಯ ಭವನದಲ್ಲಿ 9-10-11ನೇ ತಾರೀಕು ನಡೆಯುವ 18ನೇ ರಾಜ್ಯ ಸಮ್ಮೇಳನದಲ್ಲಿ ತಾಲೂಕು ಮತ್ತು ಜಿಲ್ಲೆ ಎಲ್ಲಾ ರೈತರು ಪ್ರಗತಿಪರ ರೈತ ಸಂಘಟನೆಗಳು, ವಿದ್ಯಾರ್ಥಿಗಳು ಕೂಲಿ ಕಾರ್ಮಿಕರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿ ಮಾಡಬೇಕೆಂದು ಪತ್ರಿಕಾ ಘೋಷ್ಠಿಯ ಮೂಲಕ ಎಲ್ಲರಲ್ಲೂ ಮನವಿ ಮಾಡಿದರು.
ಇದನ್ನು ಓದಿದ್ದೀರಾ..? ಅಭಿವೃದ್ದಿ ವಿಚಾರದಲ್ಲಿ ರಾಜಕೀಯ ಬೇಡ : ಶಾಸಕ ಕೊತ್ತೂರು ಮಂಜುನಾಥ್
ಈ ಸಂದರ್ಭದಲ್ಲಿ ರೈತ ಮುಖಂಡರಾದ ಸಿದ್ದನಹಳ್ಳಿ ಶೇಖರ್, ಸಿಪಿಐ ಯಮುನ ತಾಲೂಕು ಅಧ್ಯಕ್ಷ ವಕೀಲರಾದ ವೆಂಕಟೇಶ್, ಎಸ್. ಎಫ್. ಐ. ರಾಜ್ಯಾಧ್ಯಕ್ಷ ಅಂಬ್ಳಿ ಕಲ್ ಶಿವಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್, ಸಿಪಿಎಂ ಜಿಲ್ಲಾ ಮುಖಂಡರಾದ ಸಂಘಸಂದ್ರ ರಾಮಚಂದ್ರಪ್ಪ, ರಾಜು, ಕೊಂಡಮ್ಮ,ಭಾಗ್ಯಮ್ಮ, ಕೆ ಪಿ ಆರ್ ಎಸ್ ನ ಕಾರ್ಯಕರ್ತರು ಭಾಗವಹಿಸಿದ್ದರು.





