ಆಳಂದ ಪಟ್ಟಣದಲ್ಲಿ 75 ವರ್ಷದ ವೃದ್ಧನೊಬ್ಬ 6 ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಶುಕ್ರವಾರ ಪ್ರಕರಣ ದಾಖಲಿಸಿಕೊಂಡ ಆಳಂದ ಪೋಲೀಸ್‌ರು ಆರೋಪಿಯನ್ನು ಬಂಧಿಸಿದ್ದಾರೆ.
ಪಟ್ಟಣದ ಸನ್ನಿ ಮೌಲಾನ್ ಸಾಬ್ ಮುಲ್ಲಾ ಬಂಧಿತ ಆರೋಪಿ, ಮನೆ ಸಮೀಪದಲ್ಲಿ ಆಟವಾಡುತ್ತಿದ್ದ ಬಾಲಕಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಮುಂದಾದಾಗ ಬಾಲಕಿ ಗಾಬರಿಗೊಂಡಿದ್ದಾಳೆ. ಬಾಲಕಿ ಜೋರಾಗಿ ಕಿರುಚಿ ಮನೆಯಿಂದ ಅಳುತ್ತಾ ಹೊರ ಬಂದಿದ್ದಾಳೆ. ಹೊರಗಿನಿಂದ ಪೋಷಕರು ಮನೆಗೆ ಬರುವಷ್ಟರಲ್ಲೆ ವೃದ್ಧ ಪರಾರಿಯಾಗಿದ್ದಾನೆ.
ಬಾಲಕಿಯ ಮನೆ ಸುತ್ತಲಿನ ನಿವಾಸಿಗಳು ಸೇರಿದಂತೆ ನೂರಾರು ಜನ ನೀಚ ಕೃತ್ಯ ಖಂಡಿಸಿ ಆಳಂದ ಪೋಲೀಸ್ ಠಾಣೆ ಮುಂದೆ ಜಮಾಯಿಸಿ ಪ್ರತಿಭಟಿಸಿದರು, ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗೆ ಕೂಡಲೇ ಬಂಧಿಸುವಂತೆ ಒತ್ತಾಯಿಸಿದರು.
ಈ ಸಂಬಂಧ ಆಳಂದ ಪೋಲೀಸ್ ಠಾಣೆ ಪಿಎಸ್‌ಐ ಮಹಾಂತೇಶ ಪಾಟೀಲ್ ಈದಿನ.ಕಾಮ್ ದೊಂದಿಗೆ ಮಾತನಾಡಿ, “75 ವರ್ಷದ ವೃದ್ಧನೊಬ್ಬ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಘಟನೆ ಜರುಗಿದೆ, ನಿನ್ನೆ ಶುಕ್ರವಾರ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಗೆ ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ಮುಸ್ಲಿಂ ವಿದ್ಯಾರ್ಥಿಗೆ ಹೊಡೆಸಿದ್ದ ವಿಡಿಯೋ ವೈರಲ್ : ಶಿಕ್ಷಕಿಯ ವಿರುದ್ಧ ಎಫ್‌ಐಆರ್
“ಬಾಲಕಿ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ ಎಸಗಿರುವುದು ಅಮಾನವೀಯ ಘಟನೆ, ಆಳಂದ ತಾಲೂಕಿನಲ್ಲಿ ಇಂಥ ಘಟನೆಗಳು ಪದೇ ಪದೇ ನಡೆಯುತ್ತಿವೆ ಎಂದು ಖಂಡಿಸಿ, ಈ ಕುರಿತು ಪೋಲೀಸ್ ಇಲಾಖೆ ಎಚ್ಚೆತುಕೊಂಡು ಮಹಿಳಾ ಸುರಕ್ಷತೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕು” ಎಂದರು.




