ಬೀದರ್‌ | 35 ಗುಂಟೆಯಲ್ಲಿ ʼಡ್ರ್ಯಾಗನ್‌ ಫ್ರೂಟ್‌ʼ ಬೆಳೆದ ರೈತ; ವರ್ಷಕ್ಕೆ ಲಕ್ಷ ಲಕ್ಷ ಆದಾಯ

Date:

ಇಂದಿನ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಲಾಭವಿಲ್ಲ ಎಂದು ಹಳ್ಳಿಯಲ್ಲಿರುವ ಹೊಲ ಮಾರಿ ನಗರಕ್ಕೆ ಸೇರುವವರೇ ಹೆಚ್ಚು. ಅದರಲ್ಲೂ ಬರದ ನಾಡಿನಲ್ಲಿ ಕೃಷಿ ಮಾಡಲು ಬಹುತೇಕರು ಹಿಂದೇಟು ಹಾಕುತ್ತಾರೆ. ಆದರೆ ಅದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬ ರೈತ ಕೇವಲ 35 ಗುಂಟೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣು ಬೆಳೆದು ಯಶಸ್ಸು ಕಂಡಿದ್ದಾರೆ.

ಬೀದರ್ ಜಿಲ್ಲೆಯ‌ ಭಾಲ್ಕಿ ತಾಲೂಕಿನ ಮೋರಂಬಿ ಗ್ರಾಮದ ರೈತ ಅನಂತರಾವ್‌ ಇತಾಪೆ ಅವರು ತಮ್ಮ 35 ಗುಂಟೆ ಜಮೀನಿನಲ್ಲಿ ವಿದೇಶಿ ಮೂಲದ ಡ್ರ್ಯಾಗನ್ ಹಣ್ಣು ಬೆಳೆಯುತ್ತಿದ್ದು, ಕಡಿಮೆ ಖರ್ಚಿನಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಕೃಷಿಕ ಅನಂತರಾವ್‌ 8-10 ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಸೋಯಾಬಿನ್‌, ತೊಗರಿ, ಹೆಸರು, ಉದ್ದು ಬೆಳೆಯುತ್ತಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಅನಂತರಾವ್‌ ಅವರಿಗೆ ಡ್ರ್ಯಾಗನ್ ಪ್ರೂಟ್ ಬೇಸಾಯದ ಕುರಿತು ತಿಳಿಸಿದ. ಆದರೆ, ತಂದೆಗೆ ಡ್ರ್ಯಾಗನ್‌ ಬೇಸಾಯ ಕುರಿತು ಆಸಕ್ತಿ ಇರದಿದ್ದರೂ ಮಗನ ಇಚ್ಛೆಯಂತೆ 35 ಗುಂಟೆಯ ಜಾಗದಲ್ಲಿ ಡ್ರ್ಯಾಗನ್ ಹಣ್ಣು ಸಸಿಗಳನ್ನು ನಾಟಿ ಮಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
WhatsApp Image 2024 09 11 at 5.57.47 PM

ಮೊದಲ ಬಾರಿಗೆ 2021ರಲ್ಲಿ ತೆಲಂಗಾಣದ ಸಂಗಾರೆಡ್ಡಿಯಿಂದ ಒಂದು ಸಸಿಗೆ ತಲಾ 90 ರೂಪಾಯಿಯಂತೆ ಒಟ್ಟು 2000 ಡ್ರ್ಯಾಗನ್‌ ಸಸಿಗಳನ್ನು ಖರೀದಿಸಿ, ನಾಟಿ ಮಾಡಿದ್ದಾರೆ. ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ನಾಲ್ಕು ಸಸಿಗೆ ಒಂದರಂತೆ 500 ಸಿಮೆಂಟ್ ಕಂಬಗಳನ್ನು ಹಾಕಿದ್ದಾರೆ. ಗಿಡಕ್ಕೆ ಹನಿ ನೀರಾವರಿ ಪೈಪ್‌ ಹಾಕಿಸಿದ್ದಾರೆ. ಆರಂಭದಿಂದಲೂ ಸಂಪೂರ್ಣ ಸಾವಯವ ಗೊಬ್ಬರ ಬಳಸಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.

ಮನರೇಗಾ ನೆರವು :

‌ʼಜಮೀನಿನಲ್ಲಿ ಕೊಳವೆ ಬಾವಿ, ಪೈಪ್‌ಲೈನ್ ಸೇರಿದಂತೆ ಮೊದಲಿಗೆ ಒಂದು ಡ್ರ್ಯಾಗನ್ ಒಂದು ಸಸಿಗೆ ಕನಿಷ್ಠ ಒಟ್ಟು 600 ರೂ.ಗಿಂತ ಅಧಿಕ ಖರ್ಚಾಗಿದೆ. ಗ್ರಾಮ ಪಂಚಾಯಿತಿಯಿಂದ ಮನರೇಗಾ ಯೋಜನೆಯಡಿ ಆರ್ಥಿಕ ನೆರವು ನೀಡಿದ್ದರು. ಉಳಿದ ಸ್ವಂತ ಹಣ ಹೂಡಿ, ಆರಂಭದಲ್ಲಿ 8 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಕಳೆದ ಮೂರು ವರ್ಷಗಳಿಂದ ಶ್ರಮದಿಂದ ದುಡಿದು ಬೆಳೆದ ಬೆಳೆ ಕೊನೆಗೂ ಕೈ ಹಿಡಿದಿದ್ದು, ಬಂಡವಾಳ ಹಾಕಿದ ಅಷ್ಟೂ ಹಣ ವಾಪಸ್‌ ಬಂದಿದೆʼ ಎಂದು ಅನಂತರಾವ್‌ ಸಂತಸದಿಂದ ಮಾಹಿತಿ ಹಂಚಿಕೊಂಡರು.

ಒಮ್ಮೆ ನಾಟಿ ಮಾಡಿದರೆ 30 ವರ್ಷ ಆದಾಯ :

ʼಡ್ರ್ಯಾಗನ್ ಫ್ರೂಟ್ ಸಸಿ ಕಾಯಿ ಬಿಟ್ಟ 25 ದಿನಗಳ ನಂತರ ಕಟಾವು ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಹಣ್ಣಿನ ದರ 90 ರಿಂದ 100 ರೂಪಾಯಿ ಇದೆ. ಆದರೆ, ನನಗೆ ಮಾರಾಟದ ಬಗ್ಗೆ ಚಿಂತೆಯಿಲ್ಲ. ತೆಲಂಗಾಣದ ಹೈದ್ರಾಬಾದ್‌ ವ್ಯಾಪಾರಿಗಳು, ಸ್ಥಳೀಯರು ತೋಟಕ್ಕೆ ಖುದ್ದು ಬಂದು ಡ್ರ್ಯಾಗನ್ ಹಣ್ಣು ಖರೀದಿಸುತ್ತಾರೆ. ಇದೀಗ ಹಣ್ಣಿನ ತೋಟಗಾರಿಕೆ ಕೃಷಿಯಲ್ಲಿ ಲಕ್ಷಗಟ್ಟಲೇ ಆದಾಯ ಸಿಗುತ್ತಿದೆ. ಒಮ್ಮೆ ಡ್ರ್ಯಾಗನ್ ಫ್ರೂಟ್ ಕೃಷಿ ಮಾಡಿದರೆ ಸುಮಾರು 30 ವರ್ಷಗಳ ತನಕ ಇರುತ್ತದೆ.‌ ವರ್ಷಗಳು ಕಳೆದಂತೆ ನಿರ್ವಹಣೆ ಖರ್ಚು ಕಡಿಮೆ, ಲಾಭ ದುಪ್ಪಟಾಗುತ್ತದೆʼ ಎಂದು ಹೇಳುತ್ತಾರೆ ಕೃಷಿಕ ಅನಂತರಾವ್‌.

image 7 1

ಕಡಿಮೆ ಖರ್ಚು ಆದಾಯ ದುಪ್ಪಟ್ಟು :

ʼಈ ಬೆಳೆಯಲ್ಲಿ ಅನಗತ್ಯ ಖರ್ಚು ಇಲ್ಲ. ಡ್ರ್ಯಾಗನ್ ಫ್ರೂಟ್ ಬೆಳೆಗೆ ರೋಗಬಾಧೆ ಕಡಿಮೆ, ನೀರಿನ ಬಳಕೆಯ ಪ್ರಮಾಣವೂ ಕಡಿಮೆ ಇದೆ. ಹೀಗಾಗಿ ಬರದ ನಾಡಿನಲ್ಲಿಯೂ ಬೆಳೆಯಬಹುದು. ಇನ್ನು ಹೆಚ್ಚು ಕೀಟನಾಶಕಗಳ ಬಳಕೆಯೂ ಅಗತ್ಯವಿಲ್ಲ. ನಮ್ಮ ಹೊಲದ ಕೊಟ್ಟಿಗೆಯಲ್ಲೇ ತಯಾರಾಗುವ ಸಗಣಿ ಗೊಬ್ಬರ ಬಳಸುತ್ತೇವೆ. ನಮ್ಮಲ್ಲಿ ಗುಲಾಬಿ ಬಣ್ಣದ ಹಣ್ಣು ಬೆಳೆಯುತ್ತೇವೆ. ಇದು ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ. ಹೀಗಾಗಿ ಹೆಚ್ಚಿನ ಬೇಡಿಕೆಯಿದೆ. ತಿಂಗಳಿಗೊಮ್ಮೆ 2 ಟನ್‌ನಷ್ಟು ಫಸಲು ಬರುತ್ತದೆʼ ಎಂದು ಅನಂತರಾವ್‌ ವಿವರಿಸುತ್ತಾರೆ.

ವರ್ಷದಲ್ಲಿ ಐದು ಬಾರಿ ಫಸಲು :

ಈ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ ವರ್ಷದೊಳಗೆ ಫಸಲು ಬಿಡಲು ಆರಂಭವಾಗಿತ್ತು. ಪ್ರತಿ ವರ್ಷ ಮೇ ತಿಂಗಳಿಂದ ಫಸಲು ಕೊಡಲು ಶುರುವಾದರೆ, ಅಕ್ಟೋಬರ್‌ವರೆಗೆ ಒಟ್ಟು ಐದು ಬಾರಿ ಫಸಲು ಬರುತ್ತದೆ. ಎರಡ್ಮೂರು ಹಣ್ಣು ಸೇರಿದರೆ 1ಕೆ.ಜಿ. ತೂಕ ಬರುತ್ತದೆ. ಒಂದು ಬಾರಿಯ ಫಸಲು ಸುಮಾರು 2 ಟನ್‌ನಷ್ಟು ಬರುತ್ತದೆ. ಈ ಕೃಷಿಯಿಂದ ವರ್ಷಕ್ಕೆ ಹತ್ತು ಲಕ್ಷದಷ್ಟು ಹಣ್ಣಿನ ಮಾರಾಟ ಆಗುತ್ತದೆ. ರೈತರು ಅಭಿರುಚಿ ಮತ್ತು ಆಸಕ್ತಿ ಮೂಲಕ ಪ್ರಯತ್ನದಿಂದ ಇಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ಸು ಕಾಣಬಹುದುʼ ಎಂದು ತಮ್ಮ ಅನುಭವ ಹೇಳುತ್ತಾರೆ.

ಡ್ರ್ಯಾಗನ್‌ ಫ್ರೂಟ್‌ ಕೃಷಿ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷಿಕ ಅನಂತರಾವ್‌ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ : 6362139273

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಔರಾದ್‌ | ಅಪ್ಪಟ ದೇಶಪ್ರೇಮಿ ಶಾಹೀದ್ ಭಗತ್ ಸಿಂಗ್

ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ನಿದ್ದೆಗೆಡಿಸಿದ ಸಿಂಹಾಳಿಯಂತೆ ಗರ್ಜಿಸಿ ಭಾರತದ ಹಿರಿಮೆ ಗರಿಮೆಯನ್ನು...

ಬೀದರ್‌ | ಕಾರಂಜಾ ಸಂತ್ರಸ್ತರಿಗೆ ಕಾಲಮಿತಿಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಿ

ಕಾರಂಜಾ ಸಂತ್ರಸ್ತರ ಸಮಸ್ಯೆ ಕುರಿತು ದಶಕಗಳಿಂದ ಹೋರಾಟ ನಡೆಯುತ್ತಿದ್ದು, ಸರ್ಕಾರಕ್ಕೂ ಈ...

ಬೀದರ್‌ನಲ್ಲಿ ಮಾ.25ರಂದು ಉದ್ಯೋಗ ಮೇಳ

ಬೀದರ್ ನಗರದ ನೌಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾ ಉದ್ಯೋಗ...

ರಾಯಚೂರು | ಟ್ರಾಕ್ಟರ್ ಗೆ ಬೈಕ್ ಡಿಕ್ಕಿ; ಇಬ್ಬರು ಯುವಕರು ಸಾವು

ರಸ್ತೆ ಬದಿ ನಿಲ್ಲಿಸಿದ್ದ ಟ್ರಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು...