ಶಿಕ್ಷಣ ಕೇವಲ ವರ್ಗ ಕೋಣೆಯಲ್ಲಿ ನಡೆಯುವುದಿಲ್ಲ. ವರ್ಗ ಕೋಣೆಯ ಹೊರಗೂ ವಿದ್ಯಾರ್ಥಿಗಳು ಕಲಿಕೆಯ ಅನುಭವ ಪಡೆಯುತ್ತಾರೆ. ವಿದ್ಯಾರ್ಥಿಗಳು ವರ್ಗ ಕೋಣೆಯ ಹೊರಗೆ ಕಲಿಕೆಯ ಅನುಭವ ಪಡೆಯಲಿ ಎಂಬ ಉದ್ದೇಶದಿಂದ ಶಾಲಾ ಪ್ರಾಚಾರ್ಯ ಫಾ. ವಿಶಾಲ್ ಅವರ ನಿರ್ದೇಶನದ ಮೇರೆಗೆ 5, 6, 7, 8ನೇ ತರಗತಿಯ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆ, ಅರಣ್ಯ ಇಲಾಖೆ ಹಾಗೂ ಆರಕ್ಷಕ ಠಾಣೆಗಳಿಗೆ ಕರೆದುಕೊಂಡು ಹೋಗಲಾಯಿತು.
ಮಂಗಳೂರಿನ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಐದು ಮತ್ತು ಏಳನೆಯ ತರಗತಿಯ ವಿದ್ಯಾರ್ಥಿಗಳು, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳೊಡನೆ ಬೆರೆತು ಪರಸ್ಪರ ಪರಿಚಯ ಮಾಡಿಕೊಂಡರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಎರಡೂ ಶಾಲೆಯ ವಿದ್ಯಾರ್ಥಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಎಲ್ಲ ವಿದ್ಯಾರ್ಥಿಗಳು ಸಂತೋಷದಿಂದ ರಸಪ್ರಶ್ನೆ ಮತ್ತು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಮಂಗಳೂರಿನ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕಾಣಿಕೆಗಳನ್ನು ನೀಡಲಾಯಿತು.
ಅರಣ್ಯ ಇಲಾಖೆಗೆ ಭೇಟಿ ನೀಡಿದ ಆರನೇ ತರಗತಿಯ ವಿದ್ಯಾರ್ಥಿಗಳು ಅರಣ್ಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸಸಿ ನೆಡುವುದು, ಪರಿಸರ ರಕ್ಷಣೆ ಮುಂತಾದ ವಿಷಯಗಳ ಬಗ್ಗೆ ತಿಳಿದುಕೊಂಡರು. ಅರಣ್ಯ ಅಧಿಕಾರಿಗಳಾದ ಇರ್ಷಾದ್ ನೇವಾರ ಅವರು ವಿದ್ಯಾರ್ಥಿಗಳಿಗೆ ಪರಿಸರ ರಕ್ಷಣೆಯ ಬಗ್ಗೆ, ಮರಗಳ ಮಹತ್ವ ಇವುಗಳ ಕುರಿತು ಸೂಕ್ತ ಮಾಹಿತಿ ನೀಡುವುದಲ್ಲದೆ ವಿವಿಧ ಸಸಿಗಳ ಪರಿಚಯ ಮಾಡಿಕೊಟ್ಟರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅಕ್ರಮ ಸ್ಪಿರೀಟ್ ಪತ್ತೆಯಾದ ಪ್ರಕರಣ; 51 ಕೆ.ಜಿ ಗಾಂಜಾ ಪೊಲೀಸ್ ವಶಕ್ಕೆ
ಆರಕ್ಷಕ ಠಾಣೆಗೆ ಭೇಟಿ ನೀಡಿದ ಎಂಟನೇ ತರಗತಿಯ ವಿದ್ಯಾರ್ಥಿಗಳು, ಆರಕ್ಷಕ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಸೈಬರ್ ಅಪರಾಧ, ನಾಗರಿಕ ಅಪರಾಧ ವಿವಿಧ ಅಪರಾಧಗಳಿಗೆ ದೂರು ಸಲ್ಲಿಸುವುದು ಹೇಗೆ? ಮತ್ತು ನ್ಯಾಯ ಪಡೆಯುವುದು ಹೇಗೆ? ಎಂಬುದರ ಬಗ್ಗೆ ಮಾಹಿತಿ ಪಡೆದುಕೊಂಡರು. ಪೊಲೀಸ್ ಅಧಿಕಾರಿಗಳಾದ ಆರಿಫ್ ಮುಷಾಪುರಿ ಅವರು ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡಿದರು.





