ಕರ್ನಾಟಕದ 148 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ ಎಬಿಬಿ ಇಂಡಿಯಾ

Date:

ಒಳಗೊಳ್ಳುವಿಕೆಯ ಮತ್ತು ಸಮಾನ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ಎಬಿಬಿ ಇಂಡಿಯಾ ತನ್ನ ಸಿಎಸ್ಆರ್ ಯೋಜನೆಗಳ ಭಾಗವಾಗಿ ಆಯೋಜಿಸಿರುವ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಶಾಲೆಗಳಿಗೆ ವಿಸ್ತರಿಸುತ್ತಿರುವುದಾಗಿ ಘೋಷಿಸಿತು.

ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿರುವ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ನೆಲಮಂಗಲದ 98 ಸರ್ಕಾರಿ ಶಾಲೆಗಳಲ್ಲಿ ಅನುಷ್ಠಾನಗೊಳಿಸಲಾಗಿರುವ ಈ ಕಾರ್ಯಕ್ರಮಗಳನ್ನು ಈ ಶೈಕ್ಷಣಿಕ ವರ್ಷದಿಂದ ಪೀಣ್ಯದಲ್ಲಿರುವ 50 ಸರ್ಕಾರಿ ಶಾಲೆಗಳಿಗೂ ವಿಸ್ತರಿಸಲಾಗಿದೆ. ಈ ಕಾರ್ಯಕ್ರಮಗಳಿಂದ ಪೀಣ್ಯ ಮತ್ತು ನೆಲಮಂಗಲದ ಒಟ್ಟು 148 ಶಾಲೆಗಳ ಸುಮಾರು 10,000 ವಿದ್ಯಾರ್ಥಿಗಳಿಗೆ ನೆರವಾಗಲಿದೆ.

ಎಸ್‌ಟಿಇಎಂ(ಸೈನ್ಸ್ ಟೆಕ್ನಾಲಟಿ ಎಂಜಿನಿಯರಿಂಗ್ ಮ್ಯಾತ್ಸ್) ಅವೇರ್ ನೆಸ್ ಮತ್ತು ಫೌಂಡೇಷನಲ್ ಲಿಟರೆಸಿ ಆಂಡ್ ನ್ಯುಮರಿಕಲ್ ಸ್ಕಿಲ್ಸ್ ಪ್ರೋಗ್ರಾಮ್(ಎಫ್ಎಲ್ಎನ್)ನ ಯುವ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿರುವ ವೈಜ್ಞಾನಿಕ ಪರಿಕಲ್ಪನೆಗಳು ಮತ್ತು ಎಸ್‌ಟಿಇಎಂ ವಿಷಯಗಳ ಜತೆಗೆ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಅರಿವು ಹಾಗೂ ಆ ವಯಸ್ಸಿಗೆ ಸೂಕ್ತವಾದ ಕೌಶಲ್ಯಗಳನ್ನು ಕಲಿಸುವ ಉದ್ದೇಶ ಹೊಂದಿದೆ. ಶಾಲೆಯ ವೇಳಾಪಟ್ಟಿಯ ಜತೆಗೆ ಈ ಕಾರ್ಯಕ್ರಮಗಳನ್ನೂ ಸಂಯೋಜಿಸಲಾಗಿದ್ದು, ಕಲಿಕೆಯನ್ನು ಸಂವಾದಾತ್ಮಕವಾಗಿಸಲು ಮತ್ತು ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಲು ಪ್ರಾಯೋಗಿಕ ಕಲಿಕಾ ಕ್ರಮ ಬಳಸಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಶಿಕ್ಷಣ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವು ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಅರಿವು ಹೆಚ್ಚಿಸುವ ಮೂಲಕ ಅವರ ಬೆಳವಣಿಗೆಗೆ ಅಗತ್ಯವಾದ ಸಾಮರ್ಥ್ಯ ಒದಗಿಸುವ ಮೂಲಕ ಶಿಕ್ಷಣದ ಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮದ ಜೊತೆಗೆ ಪರಿಸರ ಶಿಕ್ಷಣ ಕೇಂದ್ರ (ಸೆಂಟರ್ ಫಾರ್ ಎನ್ವಿರಾನ್ಮೆಂಟ್ ಎಜುಕೇಷನ್- ಸಿಇಇ) ಸಹಯೋಗದ ಮೂಲಕ ಪರ್ಯಾವರಣ ಮಿತ್ರ ಎಂಬ ಇನ್ನೊಂದು ಕಾರ್ಯಕ್ರಮ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ. ಶಾಲೆ ಮತ್ತು ಅದರ ಸುತ್ತಮುತ್ತಲಿನ ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ ಪರಿಸರ ಸುಸ್ಥಿರತೆಯ ಸವಾಲುಗಳನ್ನು ಎದುರಿಸಲು ಅವರನ್ನು ಈ ಕಾರ್ಯಕ್ರಮದ ಮೂಲಕ ಸಿದ್ಧಪಡಿಸುವ ಗುರಿಯನ್ನು ಹೊಂದಲಾಗಿದೆ. ನೀರು ಮತ್ತು ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ವಿದ್ಯುತ್ ಇತ್ಯಾದಿಗಳಂತಹ ಪ್ರಮುಖ ವಿಷಯಗಳನ್ನು ಒಳಗೊಂಡ ಈ ಕಾರ್ಯಕ್ರಮದ ವಿನ್ಯಾಸ ಮತ್ತು ಅನುಷ್ಠಾನದಲ್ಲಿ ರಾಜ್ಯದ ಶಿಕ್ಷಣ ಇಲಾಖೆಯು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳು ಶಾಲೆಗಳು ಮತ್ತು ತರಗತಿ ಕೊಠಡಿಗಳ ಹೊರಬಂದು ಕಲಿಯಲು ಸಹಾಯ ಮಾಡುತ್ತದೆ. ಅವರು ಪ್ರಕೃತಿ, ಸಮಾಜ ಮತ್ತು ಸಮುದಾಯಗಳ ಜತೆಗೆ ಬೆರೆಯುವುಂತೆ ಮಾಡುತ್ತದೆ.

ಉಪಕ್ರಮಗಳ ವಿಸ್ತರಣೆಯ ಕುರಿತು ಎಬಿಬಿ ಇಂಡಿಯಾದ ಮಿಷನ್ ಬಿಸಿನೆಸ್ ಪ್ರೆಸಿಡೆಂಟ್ ಆಗಿರುವ ಸಂಜೀವ್ ಅರೋರಾ ಮಾತನಾಡಿ, “ಎಬಿಬಿ ಸಂಸ್ಥೆಯು ಒಳಗೊಳ್ಳುವಿಕೆಯ ಶಿಕ್ಷಣ ಮತ್ತು ಪರಿಸರ ಸುಸ್ಥಿರತೆಗೆ ನೆರವಾಗಲು ಬದ್ಧವಾಗಿದೆ. ನಾವು ನಮ್ಮ ಕಾರ್ಯಾಚರಣೆಗಳಲ್ಲಿ ಸುಸ್ಥಿರ ಮಾರ್ಗಗಳನ್ನು ಕಲಿಯಲು ಅಳವಡಿಸಿಕೊಳ್ಳುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಮುಂದಿನ ಪೀಳಿಗೆಯೂ ಕೂಡ ಪರಿಸರದ ಮೇಲೆ ಉಂಟಾಗುವ ಪರಿಣಾಮಗಳ ಕುರಿತು ತಿಳಿದಿರಬೇಕೆಂದು ನಾವು ಭಾವಿಸುತ್ತೇವೆ. ಉತ್ತಮವಾಗಿ ವಿನ್ಯಾಸಗೊಳಿಸಿರುವ ಈ ಕಾರ್ಯಕ್ರಮಗಳ ಮೂಲಕ ಅವರು ಅಗತ್ಯವಿರುವ ಸಾಮರ್ಥ್ಯಗಳನ್ನು ಪಡೆದು ತಮ್ಮನ್ನು ತಾವು ಸಿದ್ಧಗೊಳಿಸುತ್ತಾರೆ ಮತ್ತು ಜೀವನದಲ್ಲಿ ಹೆಚ್ಚು ಸುಸ್ಥಿರ ಆಯ್ಕೆಗಳನ್ನು ಮಾಡಲು ಕಲಿಯುತ್ತಾರೆಂದು ನಾವು ನಂಬುತ್ತೇವೆ” ಎಂದು ಹೇಳಿದರು.

“2022ರಲ್ಲಿ ಪ್ರಾರಂಭವಾದ ಈ ಯೋಜನೆ ವಿದ್ಯಾರ್ಥಿಗಳಲ್ಲಿ ಅರಿವಿನ ಮಟ್ಟವನ್ನು ಯಶಸ್ವಿಯಾಗಿ ಹೆಚ್ಚಿಸಿದೆ. ಪ್ರಮುಖ ವೈಜ್ಞಾನಿಕ ಪರಿಕಲ್ಪನೆಗಳಲ್ಲಿ ಇದ್ದ ಮಹತ್ವಾಕಾಂಕ್ಷೆ ಮತ್ತು ವಾಸ್ತವದ ಮಧ್ಯದ ಅಂತರವನ್ನು ಕಡಿಮೆ ಮಾಡಿದೆ. ಕಾಲ ಕಾಲಕ್ಕೆ ಮಾಡಲಾದ ಮೌಲ್ಯಮಾಪನಗಳಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಅರಿವಿನ ಮಟ್ಟಗಳಲ್ಲಿ ಪ್ರಗತಿ ಆಗಿರುವುದು ಕಂಡುಬಂದಿದೆ” ಎಂದಿದ್ದಾರೆ.

“ನೆಲಮಂಗಲ ಬ್ಲಾಕ್‌ನ 98 ಮಂದಿ ಶಿಕ್ಷಕರಿಗೆ ಈ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಬೇಕಾಗಿರುವ ತರಬೇತಿ ಮತ್ತು ಅಪ್‌ಡೇಟ್ ಆಗಿರುವ ಪರಿಕಲ್ಪನೆಗಳು, ಅದಕ್ಕೆ ಪೂರಕವಾದ ಸಂಪನ್ಮೂಲಗಳನ್ನು ಒದಗಿಸಲಾಗಿದೆ. ಈ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಎಲ್ಲ ಶ್ರೇಣಿಗಳ ವಿದ್ಯಾರ್ಥಿಗಳು ಎಸ್‌ಟಿಇಎಂ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಇದೇ ರೀತಿಯ ಶಿಕ್ಷಕರ ತರಬೇತಿ ಮತ್ತು ಓರಿಯಂಟೇಶನ್ ಕಾರ್ಯಕ್ರಮವನ್ನು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪೀಣ್ಯ ಬ್ಲಾಕ್‌ನಲ್ಲಿ ಕೂಡ ಜಾರಿಗೊಳಿಸಲಾಗುತ್ತದೆ” ಎಂದು ತಿಳಿಸಿದ್ದಾರೆ.

“ಲೀಲಾ ಪೂನಾವಾಲ ಫೌಂಡೇಶನ್‌ನ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗಿರುವ ಎಂಜಿನಿಯರಿಂಗ್ ವಿದ್ಯಾರ್ಥಿವೇತನದ ಮೂಲಕ ಎಸ್‌ಟಿಇಎಂನಲ್ಲಿ ಮಹಿಳಾ ಶಿಕ್ಷಣವನ್ನೂ ಕೂಡ ಎಬಿಬಿ ಸಂಸ್ಥೆ ಬೆಂಬಲಿಸುತ್ತದೆ. ಈ ಕಾರ್ಯಕ್ರಮದ ಮೂಲಕ ಈವರೆಗೆ ಎರಡು ಬ್ಯಾಚ್‌ಗಳು ಪದವಿ ಪಡೆದಿವೆ” ಎಂದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಆತ್ಮಹತ್ಯೆ ಪ್ರಕರಣ: ಮೊರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿನಿಯ ಹೂತಿದ್ದ ಮೃತದೇಹ ಹೊರತೆಗೆದ ಪೊಲೀಸರು

ಎಬಿಬಿ ಸಂಸ್ಥೆಯು ಹೆಚ್ಚು ಸುಸ್ಥಿರ ಮತ್ತು ಸಂಪನ್ಮೂಲ-ಸಮರ್ಥ ಭವಿಷ್ಯವನ್ನು ಉಂಟುಮಾಡುವ ಎಲೆಕ್ಟ್ರಿಫಿಕೇಷನ್ (ವಿದ್ಯುದೀಕರಣ) ಮತ್ತು ಅಟೋಮೇಷನ್ (ಯಾಂತ್ರೀಕರಣ) ವಿಭಾಗದಲ್ಲಿನ ತಾಂತ್ರಿಕ ನಾಯಕನಾಗಿ ಹೊಮ್ಮಿದೆ. ಎಂಜಿನಿಯರಿಂಗ್ ಜ್ಞಾನ ಮತ್ತು ಸಾಫ್ಟ್‌ವೇರನ್ನು ಹೇಗೆ ತಯಾರಿಸುವುದು, ಬಳಸಿಕೊಳ್ಳುವುದು, ಚಾಲಿತಗೊಳಿಸುವುದು ಮತ್ತು ನಿರ್ವಹಿಸಲಾಗುವುದು ಎಂಬುದನ್ನು ಅತ್ಯುತ್ತಮವಾಗಿ ತಿಳಿಸುವ ಉತ್ಪನ್ನಗಳನ್ನು ಕಂಪೆನಿಯು ಒದಗಿಸುತ್ತದೆ. 140 ವರ್ಷಗಳ ಶ್ರೇಷ್ಟ ಪರಂಪರೆಯನ್ನು ಹೊಂದಿರುವ ಎಬಿಬಿಯ 105,000 ಕ್ಕೂ ಹೆಚ್ಚು ಉದ್ಯೋಗಿಗಳು ಕೈಗಾರಿಕಾ ರೂಪಾಂತರವನ್ನು ವೇಗಗೊಳಿಸಲು ಬೇಕಾದ ನಾವೀನ್ಯತಾ ಉತ್ಪನ್ನಗಳನ್ನು ನೀಡಲು ಬದ್ಧರಾಗಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಂಡ್ಲುಪೇಟೆ | ಸಿಡಿಪಿಒ ವಿರುದ್ಧ ಜಾರಕಿಹೊಳಿ ಬ್ರಿಗೇಡ್ ಭ್ರಷ್ಟಾಚಾರ ಆರೋಪ; ದೂರು

ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ಸಿಡಿಪಿಓ ಹೇಮಾವತಿ ವಿರುದ್ದ ಜಾರಕಿಹೊಳಿ ಬ್ರಿಗೇಡ್ ಜಿಲ್ಲಾಧಿಕಾರಿಯವರಿಗೆ...

ಗದಗ | SC ST ಜನರ ನಡುವೆ ಗಲಾಟೆ; ಗಾಯಾಳುಗಳು ಆಸ್ಪತ್ರೆಗೆ ದಾಖಲು

ನೀರು ಕುಡಿದ ವಿಚಾರಕ್ಕೆ ಪರಿಶಿಷ್ಟ ಜಾತಿ(SC) ಪರಿಶಿಷ್ಟ(ST) ಜನಾಂಗದವರ ನಡುವೆ ಗಲಾಟೆ...

ದಾವಣಗೆರೆ | ರಾಜಕಾಲುವೆ ಚರಂಡಿ ಹಾಗೂ ತಡೆ ಗೋಡೆ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ತಹಶೀಲ್ದಾರ್ ಆದೇಶ

ರಾಜಕಾಲುವೆ ಭೂಮಾಪನ ಕಾರ್ಯ ಸಂಪೂರ್ಣಗೊಳ್ಳುವವರೆಗೆ ಹರಿಹರ ನಗರದ ರಾಜ ಕಾಲುವೆಯಲ್ಲಿ ಸಣ್ಣ...

ದಾವಣಗೆರೆ | ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಕಣಕ್ಕೆ

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್...