ಕೆಜಿಎಫ್ : ಶಿಡ್ಲಘಟ್ಟ ನಗರಸಭೆ ಆಯುಕ್ತೆ ಅಮೃತಗೌಡರಿಗೆ ಬೆದರಿಕೆ ಪ್ರಕರಣದಲ್ಲಿ ಕಾಂಗ್ರೇಸ್ ಮುಖಂಡ ರಾಜೀವ್ ಗೌಡ ಬಂಧನ ಶೀಘ್ರ ವಾಗಲಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು.
ಜಿಲ್ಲೆಯ ಕೆಜಿಎಫ್ ನಲ್ಲಿ ಭಾರತ ಮಿಸಲುಪಡೆ ಶಂಕು ಸ್ಥಾಪನೆ ವೇಳೆ ಸುದ್ದಿ ಗಾರೊಂದಿಗೆ ಮಾತನಾಡಿ ರಾಜೀವ್ ಗೌಡ ಪತ್ತೆ ಗೆ ಪ್ರತ್ಯೇಕ ಟೀಮ್ ರಚನೆ ಮಾಡಲಾಗಿದ್ದು ಅವರು ಎಲ್ಲಿ ಇದ್ದರು ಸಹ ಹುಡುಕಿಕೊಂಡು ಬರಲಾಗುವುದು ಎಂದರು ಎಷ್ಟು ದಿನ ತಪ್ಪಿಸಿಕೊಂಡು ಇರುವುದಕ್ಕೆ ಆಗುತ್ತೆ ಏಳು ದಿನವಾಗಲೀ, ಹತ್ತು ದಿನವಾಗಲೀ ಹಿಡಿದು ತರಲಾಗುವುದು ಯಾರೇ ಸಚಿವರು ಬೆಂಬಲ ನೀಡಲಿ ಕಾನೂನು ಅಧಿಕಾರಿ ಸೇರಿದಂತೆ ಎಲ್ಲರಿಗೂ ಬಂದೇ ಅಲ್ಲವಾ ಎಂದು ಪ್ರಶ್ನಿಸಿದರು.
ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣವೂ ತನಿಖೆಯ ವರದಿ ನಂತರ ಕ್ರಮ ಕೈಗೊಳ್ಳಲಾಗುವುದು.
ತನಿಖೆಗೆ ಯಾರನ್ನು ಇನ್ನು ನೇಮಕ ಮಾಡಿಲ್ಲ. ರಾಮಚಂದ್ರರಾವ್ ಪ್ರಕರಣ ಸರ್ಕಾರಕ್ಕೆ ಮುಜಗರವಾಗಲಿದಿಯಾ ಎಂಬ ಪ್ರಶ್ನೆಗೆ ಅದಕ್ಕೆ ಅವರನ್ನು ಸಸ್ಪಂಡ್ವ ಮಾಡಲಾಗಿದೆ. ಕ್ರಮ ತೆಗೆದುಕೊಂಡಿದ್ದೀವಿ ಮುಂದೆ ತನಿಖೆ ನಡೆಯಲಿದೆ. ಅವರು ಹೇಳಿಕೊಂಡಿದ್ದಾರೆ ಇದೆಲ್ಲಾ ಸುಳ್ಳೆಂದು ತನಿಖೆ ವರದಿ ಬಂದ ನಂತರ ಗೊತ್ತಾಗಲಿದೆ ಮಹಿಳೆ ಬಂದು ದೂರು ಕೊಡಲು ಮುಜಗರವಾಗುತ್ತಿದ್ದೀಯಾ ಎಂಬ ಪ್ರಶ್ನೆಗೆ ಸಸ್ಪೆಂಡ್ ಮಾಡಲಾಗಿದೆ ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗಿವುದು ಎಂದರು.
ಇದನ್ನು ಓದಿದ್ದೀರಾ..? ಜಾತೀಯತೆ ಹೆಮ್ಮರವಾಗಿ ಬೇರೂರಿದ್ದು ಸಂವಿಧಾನದ ಆಶಯಗಳು ಇನ್ನೂ ಈಡೇರಿಲ್ಲ : ಬಿ.ವಿ.ಆನಂದ್
ಈ ಸಂದರ್ಭದಲ್ಲಿ ಕೆಜಿಎಫ್ ಶಾಸಕಿ ರೂಪಶಿದರ್, ಬಂಗಾರಪೇಟೆ ಶಾಸಕ ಎಸ್ಎಂ ನಾರಾಯಣಸ್ವಾಮಿ, ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು
ತನಿಖಾ ವರದಿ ಬಳಿಕ ರಾಮಚಂದ್ರ ರಾವ್ ವಿರುದ್ಧ ಕ್ರಮ: ಗೃಹ ಸಚಿವ
ಪೋಸ್ಟ್ ಹಂಚಿಕೊಳ್ಳಿ:




