ಭೀಮಾನದಿ ತೀರದಲ್ಲಿ ಪ್ರವಾಹ ಹೆಚ್ಚುತ್ತಿದ್ದು, ಎರಡು ದಿನಗಳಿಂದ ತಾರಾಪುರ ಗ್ರಾಮ ನಡುಗಡ್ಡೆಯಾಗಿ ಮಾರ್ಪಟ್ಟಿದೆ. ಮೂರು ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಿ ಸಂತ್ರಸ್ತರನ್ನು ಸ್ಥಳಾಂತರ ಮಾಡಲಾಗುತ್ತಿದೆ.
ಹಲವು ದಿನಗಳಿಂದ ನಿರಂತರವಾಗಿ ಭೀಮಾನದಿಯಲ್ಲಿ ಪ್ರವಾಹ ಹೆಚ್ಚುತ್ತಲೇ ಇದ್ದು, ನದಿ ತೀರದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ನದಿ ತೀರದ ಗ್ರಾಮಗಳಾದ ದೇವಣಗಂವಾ, ತವರಾಖೆಡ, ಬ್ಯಾಡಗಿಹಾಳ, ಕುಮಸಗಿ, ಶೇಂಬವಾಡ, ಕಡ್ಲೆವಾಡ, ಶಿರಸಗಿ ಗ್ರಾಮಕ್ಕೆ ನೀರು ಆವರಸಿದ್ದು, ಕೆಲ ಮನೆಗಳು ಜಲಾವೃತವಾಗಿವೆ.
ಸಂತ್ರಸ್ತ ಕುಟುಂಬಗಳನ್ನು ಸ್ಥಳಾಂತರಿಸಲಾಗುತ್ತಿದೆ. ತಾರಾಪುರ, ತಾವರಖೇಡ, ಕುಮಸಗಿ ಮೂರು ಗ್ರಾಮಗಳಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ನದಿ ತೀರದ ಜನರು, ಜಮೀನುಗಳಲ್ಲಿ ವಾಸವಾಗಿದ್ದು, ಜನರು ಆತಂಕಕ್ಕೊಳಗಾಗಿದ್ದಾರೆ.
ಶುಕ್ರವಾರ ಅಲಮೆಲ ತಹಶೀಲ್ದಾರ್ ಧನಪಾಲಶೆಟ್ಟಿ ದೇವುರಾ ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕುಮಸಗಿ ಗ್ರಾಮದಲ್ಲಿ ಸಂಚರಿಸಿ, ನದಿ ಪ್ರವಾಹದಿಂದ ಉಂಟಾದ ಸಮಸ್ಯೆಗಳು ಆಲಸಿ, ಸ್ಥಳೀಯ ಗ್ರಾಮ ಅಭಿವೃದ್ಧಿ ಅಧಿಕಾರಿ ಮತ್ತು ಗ್ರಾಮ ಲೆಕ್ಕಾಧಿಕಾರಗಳು ಸ್ಥಳದಲ್ಲೇ ಬಿದ್ದುಬಿಟ್ಟು ಯಾವುದೇ ಸಮಸ್ಯೆಯಾಗದಂತೆ ನಿಗಾವಹಿಸಿದ್ದಾರೆ. ಹಾನಿಗೊಳಗಾದ ಮನೆ ಮತ್ತು ಬೆಳೆಗಳು ಸಮೀಕ್ಷೆ ಮಾಡಿ ವರದಿ ನೀಡುವಂತೆ ತಿಳಿಸಿದರು.
ನಡುಗಡ್ಡೆಯಾದ ತಾರಾಪುರ ಆಲಮೇಲ ತಾಲೂಕಿನ ಹಳೆ ತಾರಾಪುರ ಗ್ರಾಮವನ್ನು ಸುತ್ತುವರೆದಿರುವ ಭೀಮನದಿಯ ನೀರು ಗ್ರಾಮವನ್ನು ಸಂಪೂರ್ಣ ನಡುಗಡ್ಡೆಯನ್ನಾಗಿಸಿದೆ. ಹೊಸ ತಾರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ತಾರಾಪುರ ಗ್ರಾಮಕ್ಕೆ ಆಲಮೇಲ ತಹಶೀಲ್ದಾರ್ ಧನಪಾಲ ಶೆಟ್ಟಿ, ಎ ಎಂ ಅತ್ತರ ಕಡಣೀ ಗ್ರಾಮ ಪಂಚಾಯಿತಿ ಪಿಡಿಒ ಶರಣಗೌಡ ಕಡ್ಲೆವಾಡ, ತಾರಾಪುರ ಗ್ರಾಮಸಹಾಯಕ ಮಡಿವಾಳಪ್ಪ ಬಿರಾದಾರ ಭೇಟಿ ನೀಡಿದರು.
ಕಾಳಜಿ ಕೇಂದ್ರಗಳನ್ನು ದೇವಣಗಾಂವ ಮತ್ತು ಕುಮಸಗಿ ಗ್ರಾಮಗಲ್ಲು ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದರು.
ತಾವರಖೇಡ ಗ್ರಾಮದಲ್ಲಿ ಸುಮಾರ 5 ರಿಂದ 6 ಮನೆಗಳಿಗೆ ನೀರು ನುಗ್ಗಿರುವುದರಿಂದ ಕೆಲವು ಜನರು ಅಲ್ಲಿಂದ ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ. ಹಳೆಬ್ಯಾಡಗಿಹಾಳ ಗ್ರಾಮದಲ್ಲಿ ನೀರು ನುಗ್ಗಿದೆ. ದೇವಣಗಾಂವ ಗ್ರಾಮದ ಹನುಮಾನ ದೇವಸ್ಥಾನ ಆವರಣವನ್ನು ನೀರು ಸುತ್ತುವರೆದಿದ್ದು ಜನವಸತಿ ಸಮೀಪ ನೀರು ಆವರಿಸುತ್ತದೆ. ಕುಮಸಗಿ ಗ್ರಾಮದಲ್ಲಿ ಸುಮಾರು ನೀರು ನುಗ್ಗಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಜನರು ಅನಕ್ಷರತೆಯಿಂದ ಹೊರಬಂದು ಶಿಕ್ಷಣ ಕಲಿಯಬೇಕಿದೆ: ಗಿರೀಶಗೌಡ ಪಾಟೀಲ್
“ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ದೇವಣಗಾಂವ ಸಮೀಪದ ಸೊನ್ನ ಬ್ಯಾರೇಜ್‌ನಿಂದ ಗುರುವಾರ 28 ಗೇಟ್‌ಗಳನ್ನು ತೆರೆದು, 3.55 ಲಕ್ಷ ಕ್ಯೂಸೆಕ್ ಹೊರ ಬಿಡಲಾಗಿದೆ. ಸೀನಾ ನದಿಯಿಂದ 2.15ಲಕ್ಷ ಕ್ಯೂಸೆಕ್, ಉಜನಿ ಮತ್ತು ವೀರ ಜಲಾಶಯಗಳಿಂದ 80 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಅಲ್ಲದೆ, ಕರ್ನಾಟಕ ಮತ್ತು ಮಹಾರಾಷ್ಟ್ರದ ಭೀಮಾನದಿ ಪಾತ್ರದಲ್ಲಿ ಬೀಳುತ್ತಿರುವ ಮಳೆಯಿಂದ ಸುಮಾರು 60 ಸಾವಿರ ಕ್ಯೂಸೆಕ್ ಒಟ್ಟು 3.55 ಲಕ್ಷ ಕ್ಯೂಸೆಕ್ ನೀರು ಸೊನ್ನ ಬ್ಯಾರೇಜ್‌ನಲ್ಲಿ ಹರಿಯುತ್ತಿದೆ. ಪ್ರವಾಹ ಸೃಷ್ಟಿಮಾಡಿರುವ ಸೀನಾ ನದಿ ಪಾತ್ರದಲ್ಲಿ ಸ್ವಲ್ಪಮಟ್ಟಿಗೆ ಮಳೆ ಕಡಿಮೆಯಾಗಿರುವುದರಿಂದ ನಾಳೆ ಮತ್ತು ನಾಡಿದ್ದು ಪ್ರವಾಹದಲ್ಲಿ ಸ್ವಲ್ಪ ಕಡಿಮೆಯಾಗುವ ಸಾಧ್ಯತೆ ಇದೆ” ಎಂದು ಅಜ್ಜಲಪುರ ಕೆಎನ್‌ಎನ್‌ಎಲ್‌ಎ ಕಾರ್ಯನಿರ್ವಾಹಕ ಎಂಜಿನಿಯರ್ ಸಂತೋಷ್ ಕುಮಾರ್ ಸಜ್ಜನ ತಿಳಿಸಿದ್ದಾರೆ.





