ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ CSK ಬಣವು ಉತ್ತರ ಕನ್ನಡ ಜಿಲ್ಲೆಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿತು.
ಹಳಿಯಾಳದಲ್ಲಿ ಸಭೆ ನಡೆಸಿ ಸಂಘಟನೆಗೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಿ ಹಳಿಯಾಳದ ದೇಶಪಾಂಡೆ ನಗರದ ವಿಷಯವಾಗಿ ಮತ್ತು ಅನ್ನಪೂರ್ಣ ಹೋಟೆಲ್ ಪಕ್ಕದ ಪುರಸಭೆ ಜಾಗೆ ಅಕ್ರಮವಾಗಿ ನೋಂದಣಿ ಮಾಡಿದ್ದನ್ನೂ ವಿರೋಧಿಸಿ ಪುರಸಭೆ ಮುಖ್ಯಧಿಕಾರಿಗಳಿಗೆ ಸಂಘದ ಕಾರ್ಯಕರ್ತರು ಮನವಿ ನೀಡಿದರು.
ಮೀನು ಮಾರುಕಟ್ಟೆ ರಸ್ತೆಯಲ್ಲಿ ಇರುವ ಮಿಲಾಗ್ರಿಸ್ ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಸಮಸ್ಯೆ ಆಗುತ್ತಿದ್ದು, ಅದನ್ನು ಪರಿಹರಿಸಿ ಕೊಡಲು ಪಿಎಸ್ಐಗೆ ಮನವಿ ನೀಡಲಾಯಿತು.
ಅಲ್ಪ ಸಂಖ್ಯಾತರ ಜಿಲ್ಲಾ ಅಧ್ಯಕ್ಷರಾಗಿ ಮೈಕಲ್ ದಾಂಡೇಲಿ, ಯುವ ಘಟಕದ ಅಧ್ಯಕ್ಷರಾಗಿ ಕಲ್ಲಪ್ಪಾ ಕಾದ್ರೊಳ್ಳಿ, ಜಿಲ್ಲಾ ಯುವ ಅಧ್ಯಕ್ಷರಾಗಿ ಬಸವರಾಜ ಕಾದ್ರೊಳ್ಳಿ, ಅಲ್ಪ ಸಂಖ್ಯಾತರ ಅಧ್ಯಕ್ಷರಾಗಿ ರೆಹಮಾನ್ ಜಂಬುವಾಲೆ, ST ಗೌರವಾಧ್ಯಕ್ಷರಾಗಿ ರೆಹಮಾನ್ ಜಮಾದಾರ್, ಮಹಿಳಾ ಜಿಲ್ಲಾಧ್ಯಕ್ಷರಾಗಿ ಜೋತಿ ದೊಡ್ಮನಿ, SC ತಾಲೂಕು ಅಧ್ಯಕ್ಷರಾಗಿ ರವಿ ದೊಡ್ಮನಿ, ST ತಾಲೂಕು ಅಧ್ಯಕ್ಷರಾಗಿ
ಹನೀಫ್ ಜಮಾದಾರ್, SC ಮಹಿಳಾ ಅಧ್ಯಕ್ಷರಾಗಿ ಪದ್ಮಾವತಿ ದೊಡ್ಮನಿ, ST ಮಹಿಳಾ ಅಧ್ಯಕ್ಷರಾಗಿ ಜನ್ನತಬಿ ನಾಯಕ, ಅಲ್ಪ ಸಂಖ್ಯಾತರ ತಾಲೂಕ ಅಧ್ಯಕ್ಷರಾಗಿ ಅಲ್ಲಾಬಕ್ಷ ಬಂಕಾಪುರ್ ಅವರನ್ನು ಆಯ್ಕೆ ಮಾಡಿ ಜವಾಬ್ದಾರಿ ಹಂಚಲಾಯಿತು.
ಇದನ್ನೂ ಓದಿ: ಉತ್ತರ ಕನ್ನಡ | ಕನ್ನಡ ತರ್ಜುಮೆ ತಂತ್ರಾಂಶ ʼಕನ್ನಡ ಕಸ್ತೂರಿʼ ಶೀಘ್ರದಲ್ಲೇ ಬಿಡುಗಡೆ
ಸಭೆಯಲ್ಲಿ ಶಂಕರ ಗರಗ, ಇರ್ಫಾನ್ ಫಿರೋಜಿ, ರಾಮದಾಸ ಚಾವನ್, ರಿಟಾ ಸಿದ್ದಿ, ಮೋಹನ್ ಸಿದ್ದಿ, ಪ್ರಕಾಶ ಮೇತ್ರಿ, ಮಂಜು ತಟ್ಟಿಗೇರಾ ಸೇರಿದಂತೆ ಹಲವು ಕಾರ್ಯಕರ್ತರು ಹಾಜರಿದ್ದರು.





