ಉಡುಪಿ | ಮೇ 5 ರಿಂದ ದಲಿತರ ಒಳಮೀಸಲಾತಿ ಸಮೀಕ್ಷೆ, ಅಂಬೇಡ್ಕರ್ ಯುವಸೇನೆ ಮನವಿ

Date:

ಮೇ 5 ರಿಂದ ಉಡುಪಿ ಜಿಲ್ಲೆಯಲ್ಲಿ ನಡೆಯುವ ಪರಿಶಿಷ್ಟ ಜಾತಿಯ ಒಳಮೀಸಲಾತಿ ಸಮೀಕ್ಷೆ ಕಾರ್ಯವನ್ನು ಜಿಲ್ಲಾಡಳಿತ ಕೈಗೊಂಡಿದ್ದು ದಲಿತರು ಸರಿಯಾದ ಮಾಹಿತಿ ನೀಡುವಂತೆ ಅಂಬೇಡ್ಕರ್ ಯುವಸೇನೆಯ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮನವಿಮಾಡಿದ್ದಾರೆ.

ಪರಿಶಿಷ್ಟ ಜಾತಿಗಳ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳ ಸಮೀಕ್ಷೆಗೆ ಬರುವ ಸಂದರ್ಭದಲ್ಲಿ ಮನೆಯಲ್ಲಿ ವಿದ್ಯಾವಂತರು ಇಲ್ಲದಿದ್ದರೆ ಸಮೀಕ್ಷೆಗಾರರಿಗೆ ಮರುದಿನ ಬರುವಂತೆ ಸೂಚಿಸಬೇಕು. ಉಡುಪಿ ಜಿಲ್ಲೆಯ ಪರಿಶಿಷ್ಟ ಜಾತಿಯ ಉಪಜಾತಿ ಕೇಳಿದರೆ ಆದಿದ್ರಾವಿಡ ಎಂದು ನಮೂದಿಸಬೇಕು. ಒಂದು ವೇಳೆ ಆದಿದ್ರಾವಿಡದಲ್ಲಿ ಉಪಜಾತಿ ಕೇಳಿದರೆ ಇಲ್ಲ ಎನ್ನಬೇಕು. ಯಾವುದೇ ಕಾರಣಕ್ಕೆ ಗೊತ್ತಿಲ್ಲ ಎನ್ನಬಾರದು.

ಯಾವುದೇ ಕಾರಣಕ್ಕೆ ವೃತ್ತಿ ಆಧಾರದಿಂದ ಬರುವ ಹೆಸರುಗಳನ್ನು ಉಪಜಾತಿಯೆಂದು ನಮೂದಿಸಬಾರದು ಮತ್ತು ಪರಿಶಿಷ್ಟಜಾತಿಯಲ್ಲಿ ಆದಿದ್ರಾವಿಡ ಹೊರತುಪಡಿಸಿ, ಉಪಜಾತಿಗಳು ಹುಟ್ಟಿಕೊಂಡಿರುವುದಿಲ್ಲ ಮತ್ತು ಹುಟ್ಟಿಕೊಂಡಿದ್ದರೂ ಯಾವುದೇ ಆಧಾರವಿರುವುದಿಲ್ಲ ಎಂದು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಸ್ಪಷ್ಟಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...