ಬೀದರ್ ಜಿಲ್ಲಾ ಕೇಂದ್ರದಿಂದ ಔರಾದ್ ತಾಲ್ಲೂಕಿಗೆ ಹೊರಡುವ ಕೆಕೆಆರ್‌ಟಿಸಿ ಬಸ್‌ಗಳನ್ನು ಸಂತಪೂರ ಹಾಗೂ ಜನವಾಡ ಗ್ರಾಮಗಳಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಸಂಬಂಧ ಸೇನೆಯ ಪದಾಧಿಕಾರಿಗಳು ಬುಧವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೆಕರ್ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ʼಬೀದರ್‌ದಿಂದ ಔರಾದ್ ತಾಲ್ಲೂಕು ಕೇಂದ್ರಕ್ಕೆ ಹೊರಡುವ ಸಾರಿಗೆ ಬಸ್‌ಗಳು ಜನವಾಡ ಹಾಗೂ ಸಂತಪೂರ ಗ್ರಾಮಗಳಲ್ಲಿ ನಿಲುಗಡೆ ಮಾಡುತ್ತಿಲ್ಲ. ಇದರಿಂದ ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬಸ್ ಪಾಸ್ ಇರುವ ವಿದ್ಯಾರ್ಥಿಗಳು ಖಾಸಗಿ ಬಸ್‌ಗಳಿಗೆ ತೆರಳಬೇಕಾದಂತಹ ಸ್ಥಿತಿ ಬಂದಿದೆʼ ಎಂದು ಹೇಳಿದರು.
ಬೀದರ್-ಔರಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡ ಗ್ರಾಮಗಳಾದ ಜನವಾಡ ಮತ್ತು ಸಂತಪೂರದಿಂದ ದಿನಾಲೂ ನೂರಾರು ಪ್ರಯಾಣಿಕರು, ವಿದ್ಯಾರ್ಥಿಗಳು ಜಿಲ್ಲಾ, ತಾಲ್ಲೂಕು ಕೇಂದ್ರಗಳಿಗೆ ತೆರಳುತ್ತಾರೆ. ಹೀಗಾಗಿ ಕೂಡಲೇ ಕೆಕೆಆರ್‌ಟಿಸಿ ಎಲ್ಲ ಬಸ್‌ಗಳನ್ನು ಸಂತಪೂರ, ಜನವಾಡ ಗ್ರಾಮಗಳಲ್ಲಿ ನಿಲುಗಡೆ ಮಾಡಲು ಆದೇಶಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಲದ ಹೊರೆ : ಒಂದೇ ದಿನ ಇಬ್ಬರು ರೈತರ ಆತ್ಮಹತ್ಯೆ
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ರಾಜ್ಯಾಧ್ಯಕ್ಷ ರಾಜಕುಮಾರ್ ಗುನ್ನಳ್ಳಿ, ಜಿಲ್ಲಾಧ್ಯಕ್ಷ ನಿತೀಶ ಉಪ್ಪೆ, ಉಪಾಧ್ಯಕ್ಷರಾದ ಲಕ್ಷ್ಮಣ ಚಕ್ರವರ್ತಿ, ಕುಮಾರ್ ಕಾಂತೆ, ಜಿಲ್ಲಾ ಕಾರ್ಯದರ್ಶಿ ನ್ಯೂಟಲ್ ಮಾರ್ಕ್, ಔರಾದ್ ತಾಲ್ಲೂಕಾಧ್ಯಕ್ಷ ಭೀಮರಾವ್ ಭಾವಿಕಟ್ಟಿ, ತಾಲ್ಲೂಕು ಉಪಾಧ್ಯಕ್ಷ ದಿಲೀಪ ಮೇತ್ರೆ ಸೇರಿದಂತೆ ಮತ್ತಿತರಿದ್ದರು.





