ಕಲಬುರಗಿ | ಅಂಬೇಡ್ಕರ್‌ಗೆ ಅವಮಾನ: ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ಆಕ್ರೋಶ

Date:

ಅಂಬೇಡ್ಕರ್ ಅವರಿಗೆ ಅಪಹಾಸ್ಯ ಮಾಡಿ ಅಪಮಾನಿಸಿದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾರನ್ನು ಕೇಂದ್ರದ ಮಂತ್ರಿ ಮಂಡಲದಿಂದ ವಜಾಗೊಳಿಸುವಂತೆ ಆಗ್ರಹಿಸಿ, ಅಮಿತ್ ಶಾ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ ಕಲಬುರಗಿ ಜಿಲ್ಲೆಯ ತಿಮ್ಮಾಪೂರ ವೃತ್ತದ ಬಳಿ ಸ್ಲಂ ಜನಾಂದೋಲನ ಕರ್ನಾಟಕದ ವತಿಯಿಂದ ಪ್ರತಿಭಟನಾ ಮೆರವಣಿಗೆ‌ ಮಾಡಿಲಾಯಿತು.

ಪ್ರತಿಭಟನಾ ಮೆರವಣಿಗೆ‌ ಮಾಡಿದ ಬಳಿಕ ಸ್ಲಂ ಜನಾಂದೋಲನ ಕರ್ನಾಟಕ ಜಿಲ್ಲಾ ಘಟಕ ಕಲಬುರಗಿ ಘಟಕದ ವತಿಯಿಂದ ಕಲಬುರಗಿ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಬಳಿಕ ಮಾತನಾಡಿದ ಜಿಲ್ಲಾ ಸಂಚಾಲಕರಾದ ರೇಣುಕಾ ಸರಡಗಿ, “ಸಾವಿರಾರು ವರ್ಷಗಳಿಂದ ಭಾರತದ ಮೂಲನಿವಾಸಿಗಳನ್ನು ಶೋಷಣೆ ಮಾಡುತ್ತಲೇ ಬಂದಿದ್ದ ಬ್ರಾಹ್ಮಣವಾದಿ ವಿಚಾರಧಾರೆಯ ಹಿಂಸಕರು, ಜಾತಿ, ಧರ್ಮಗಳ ಹೆಸರಿನಿಂದ ಅಖಂಡ ಭಾರತವನ್ನು ಒಡೆದು ಈ ದೇಶದ ಮಣ್ಣಿನ ಮಕ್ಕಳನ್ನು ಎಲ್ಲ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿ ಅಟ್ಟಹಾಸ ಮೆರೆಯುತ್ತಿದ್ದಾರೆ” ಎಂದು ಆರೋಪಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

“ಸಂವಿಧಾನ ವಿರೋಧಿಯಾದ ಸಂಘ ಪರಿವಾರದ ವಿಚಾರಧಾರೆಯ ಹಿನ್ನೆಲೆಯಲ್ಲಿ ಬೆಳೆದುಬಂದ ಜಾತಿವಾದಿ ಮನಸ್ಥಿತಿಯ ಅಂಬೇಡ್ಕರ್ ವಿರೋಧಿ ಅಮೀತ ಶಾ ಎಂಬ ಹೆಸರಿನ ಕೇಂದ್ರ ಗೃಹ ಮಂತ್ರಿ ಡಿ.17 2024 ರಂದು ಪಾರ್ಲಿಮೆಂಟನ ರಾಜ್ಯಸಭೆಯಲ್ಲಿ “ಅಭಿ ಏಕ್ ಫ್ಯಾಷನ್ ಹೋಗಯಾ ಹೇ, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಅಂಬೇಡ್ಕರ್, ಇತ್ನಾ ನಾಮ ಅಗರ್ ಭಗವಾನ್ ಕಾ ಲೇತೇತೋ ಸಾತ್ ಜನೋತಕ್ ಸ್ವರ್ಗ ಮಿಲ್ಜಾತೆ” ಎಂದು ಹೇಳುವುದರ ಮೂಲಕ ಇಡೀ ಭಾರತದ ಬಹುಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ” ಎಂದು ‌ಆಕ್ರೋಶ ವ್ಯಕ್ತಪಡಿಸಿದರು.

“ಶತಮಾನಗಳಿಂದ ಅವಮಾನ, ಶೋಷಣೆ, ದೌರ್ಜನ್ಯಕ್ಕೆ ಒಳಗಾಗಿದ್ದ ಜನರಿಗೆ, ಮಹಿಳೆಯರಿಗೆ ಸ್ವಾತಂತ್ರ ತಂದುಕೊಟ್ಟವರು ಡಾ. ಬಿ ಆರ್ ಅಂಬೇಡ್ಕರ್. ಇದರ ಜೊತೆಗೆ ಅವರ ಸಂವಿಧಾನ ಈ ದೇಶದ ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು ಸೇರಿದಂತೆ ಶೋಷಣೆಗೆ ಒಳಗಾಗ ಬಹುದಾದ ಎಲ್ಲಾ ಸಮುದಾಯಗಳಿಗೆ ರಕ್ಷಾ ಕವಚವಾಗಿದೆ. ಇಂತಹ ವ್ಯಕ್ತಿಯ ಹೆಸರನ್ನು ಪುರ್ನ ಉಚ್ಛರಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

WhatsApp Image 2024 12 23 at 7.11.21 PM

ಅಮಿತ್ ಶಾ ಮತ್ತು ಆ‌ರ್.ಆ‌ರ್.ಎಸ್ ನವರು ಉದ್ದೇಶಿಸಿರುವ ಮಾವನ ವಿರೋಧಿ ಮನಸೃತಿಯನ್ನು ಮರುಸ್ಥಾಪಿಸುವ ಯೋಜನೆಗೆ ಅಂಬೇಡ್ಕರ್ ತಡೆಗೋಡೆಯಾಗಿರುವುದೇ ಬಾಬಾಸಾಹೇಬ್‌ರ ವಿರುದ್ಧ ಅವರಿಗೆ ಇರುವ ಸಿಟ್ಟು. ಅದನ್ನು ಅವರು ಸೈದ್ಧಾಂತಿಕ ಗುರುಗಳಲ್ಲಿ ಒಬ್ಬರಾದ ಸಾರ್ವರಕರ್ ಲಿಖಿತ ರೂಪದಲ್ಲಿ ಬರೆದಿಟ್ಟು ಹೋಗಿದ್ದಾನೆ. ಅವರ ಗುರುಗಳ ಆಜ್ಞೆ ಪಾಲಿಸುವ ನಿಟ್ಟಿನಲ್ಲಿ ವಿವಿಧ ಕಾರಣಗಳಿಗೆ ಒಳಗೆ ಅಡಗಿದ್ದ ಮಾತುಗಳು ಅಮಿತ್ ಶಾ ಬಾಯಲ್ಲಿ ಬಂದಿದೆ. ದೇವರ ಹೆಸರು ಹೇಳಿ ಜನರನ್ನು ಕೊಲ್ಲುವುದಕ್ಕಿಂತ ಅಂಬೇಡ್ಕರ್ ಅವರ ಹೆಸರು ಹೇಳಿ ಸಮಾನತೆ ಸಾಧಿಸುವುದು ಸಾವಿರಪಟ್ಟು ಒಳ್ಳೆಯದು. ಕೂಡಲೇ ಅಮಿತ್ ಶಾ ಅವರನ್ನು ಕೇಂದ್ರದ ಮಂತ್ರಿ ಮಂಡಲದಿಂದ ಕೈಬಿಡಬೇಕು. ದೇಶದ ಜನತೆಯ ಕ್ಷಮೆಯನ್ನು ಅಮಿತ್ ಶಾ ಕೇಳಬೇಕು” ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.

ಇದನ್ನು ಓದಿದ್ದೀರಾ? ಸಂತೆಯಲ್ಲಿ ಕಳೆದು ಹೋದ ‘ಕನ್ನಡ ಸಾಹಿತ್ಯ ಸಮ್ಮೇಳನ’

ಈ ಸಂದರ್ಭದಲ್ಲಿ ಸ್ಲಂ ಜನಾಂದೋಲನದ ಅಧ್ಯಕ್ಷೆ ಗೌರಮ್ಮ ಮಾಕಾ, ಸಂಘಟನಾ ಸಂಚಾಲಕ ಶರಣು ಹಂಗರಗಿ, ಕಾರ್ಯದರ್ಶಿ ಶರಣು ಕಣ್ಣಿ ಸೇರಿದಂತೆ ಹಲವರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...