ಬೆಂಗಳೂರು | ವಿಳಾಸ ತಪ್ಪಾಗಿದ್ದಕ್ಕೆ ವಾಗ್ವಾದ: ಹಲ್ಲೆ ನಡೆಸಿ ಪರಾರಿಯಾಗಿದ್ದ ಡೆಲಿವರಿ ಬಾಯ್ ವಿರುದ್ಧ ಎಫ್‌ಐಆರ್

Date:

ವಿಳಾಸ ತಪ್ಪಾಗಿದ್ದಕ್ಕೆ ವಾಗ್ವಾದ ನಡೆದ ಬಳಿಕ ಗ್ರಾಹಕರೋರ್ವರ ಸಂಬಂಧಿಗೆ ಡೆಲಿವರಿ ಬಾಯ್ ಓರ್ವ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ನಡೆದಿದೆ.

ಘಟನೆ ಮೇ 21ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿನಸಿ ಸಾಮಗ್ರಿ ಡೆಲಿವರಿ ಮಾಡಲು ಬಂದಿದ್ದ ಝೆಫ್ಟೋ ಡೆಲಿವರಿ ಬಾಯ್ ವಿಷ್ಣುವರ್ಧನ್ ಎಂಬಾತ ಮಹಿಳಾ ಗ್ರಾಹಕರೋರ್ವರ ಸಂಬಂಧಿ ಶಶಾಂಕ್ ಎಂಬುವವರ ಕಣ್ಣಿಗೆ ಪಂಚ್ ಮಾಡಿ, ಹಲ್ಲೆ ನಡೆಸಿ, ಪರಾರಿಯಾಗಿದ್ದಾನೆ. ಶಶಾಂಕ್​ ಅವರ ಕಣ್ಣಿನ ಕೆಳಭಾಗದ ಮೂಳೆ ಮುರಿದಿದೆ.

ಶಶಾಂಕ್ ಅವರ ನಾದಿನಿ ಝೆಪ್ಟೋದಲ್ಲಿ ದಿನಸಿ ಸಾಮಗ್ರಿ ಆರ್ಡರ್ ಮಾಡಿದ್ದರು. ಆರ್ಡರ್ ಡೆಲಿವರಿ ವಿಳಾಸ ಬದಲಾಗಿದ್ದಕ್ಕೆ ಡೆಲಿವರಿ ಬಾಯ್​ ವಿಷ್ಣುವರ್ಧನ್ ನಿಂದನೆ ಮಾಡಿದ್ದಾನೆ. ನಾದಿನಿಯನ್ನು ನಿಂದಿಸಿದ್ದಕ್ಕೆ ಮನೆಯಿಂದ ಹೊರಬಂದು ಶಶಾಂಕ್ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಡೆಲಿವರಿ ಬಾಯ್ ವರ್ತನೆ ಕಂಡು ಶಶಾಂಕ್ ಪೊಲೀಸರಿಗೆ ಕರೆ ಮಾಡಲು ಮುಂದಾದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಪೊಲೀಸರ ಹೆಸರು ಹೇಳುತ್ತಿದ್ದಂತೆ ದ್ವಿಚಕ್ರ ವಾಹನದಿಂದ ಇಳಿದು ಬಂದು ಡಿಲಿವರಿ ಬಾಯ್​ ವಿಷ್ಣವರ್ಧನ್​ ಗ್ರಾಹಕ ಶಶಾಂಕ್​ ಅವರ ಕಣ್ಣಿಗೆ ಪಂಚ್ ಮಾಡಿದ್ದಾನೆ. ಇದರಿಂದ ಗ್ರಾಹಕ ಶಶಾಂಕ್ ಅವರ ಕಣ್ಣಿನ ಕೆಳ ಭಾಗದ ಮೂಳೆ ಮುರಿದಿದೆ. ಕಣ್ಣು ಮಂಜಾಗಿದ್ದು ದೃಷ್ಟಿ ಸ್ವಲ್ಪಮಟ್ಟಿಗೆ ಹಾನಿಯಾಗಿದೆ. ಇದೇ ಪರಿಸ್ಥಿತಿ ಇದ್ದಲ್ಲಿ ಅಪರೇಷನ್ ಮಾಡುವುದು ಅನಿವಾರ್ಯ ಎಂದು ವೈದ್ಯರು ಹೇಳಿದ್ದಾರೆ.

ಇದನ್ನು ಓದಿದ್ದೀರಾ? ಹೆದ್ದಾರಿಯಲ್ಲೇ ನಿಂತು ಮಹಿಳೆಯೊಂದಿಗೆ ಕಾಮಕೃತ್ಯ ನಡೆಸಿದ ಬಿಜೆಪಿ ಮುಖಂಡ: ಸಿಸಿಟಿವಿ ದೃಶ್ಯ ವೈರಲ್; ಎಫ್‌ಐಆರ್

ಘಟನೆ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿಷ್ಣವರ್ಧನ್​ಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ಝೆಪ್ಟೋ ಕಂಪನಿಯ ವ್ಯವಸ್ಥಾಪಕರಿಗೆ ಶಶಾಂಕ್ ಕುಟುಂಬದವರು ದೂರು ನೀಡಿದ್ದಾಗ, ಉಡಾಫೆಯಿಂದ ವರ್ತಿಸಿರುವುದಾಗಿ ಆರೋಪಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...