ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಲಾಡ್ಜ್ ಒಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಬಿಜೆಪಿ ಮುಖಂಡನೋರ್ವನ ಮಗ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು ಯುವಕ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್ ಗೆ ಕರೆದಿದ್ದ ಎನ್ನಲಾಗಿದೆ.
ವಿಚಾರಣೆ ವೇಳೆ ಇನ್ನೋರ್ವ ಬಾಲಕಿಗೂ ಇದೇ ರೀತಿ ಆಮಿಷ ಒಡ್ಡಿ ಲಾಡ್ಜ್ ಗೆ ಕರೆದಿರುವ ವಿಷಯ ಬೆಳಕಿಗೆ ಬಂದಿದೆ. ಈ ಅಂಶಗಳನ್ನು ಗಮನಿಸುವಾಗ ಈ ಪ್ರಕರಣದ ಹಿಂದೆ ದೊಡ್ಡ ಜಾಲ ಇರುವ ಶಂಕೆ ಇದ್ದು ಪೊಲೀಸರು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕುಶವಾಗಿ ತನಿಖೆ ನಡೆಸಿ ಇದರ ಹಿಂದೆ ಇರುವ ಷಡ್ಯಂತರವನ್ನು ಬಯಲಿಗೆಲೆಯಬೇಕು ಎಂದು ಎಸ್ ಡಿ ಪಿ ಐ ಉಡುಪಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಅಶ್ರಫ್ ಭಾವ ರವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
ಬಾಯಿ ತೆರೆದರೆ ಸಂಸ್ಕೃತಿ, ಮಹಿಳೆಯರ ರಕ್ಷಣೆ ಬಗ್ಗೆ ಭಾಷಣ ಬಿಗಿಯುವ ಬಿಜೆಪಿ ನಾಯಕರು ತಮ್ಮ ಮಕ್ಕಳಿಗೆ ಯಾವ ರೀತಿಯ ಸಂಸ್ಕೃತಿಯನ್ನು ಕಳಿಸಿದ್ದಾರೆ ಎಂದು ಇದರಿಂದ ತಿಳಿಯುತ್ತದೆ. ಜಿಲ್ಲೆಯಲ್ಲಿ ಇದಕ್ಕಿಂತ ಮುಂಚೆಯೂ ಸಹ ಬಿಜೆಪಿಯ ನಾಯಕರುಗಳಿಂದ ಇಂತಹದೇ ಹಲವು ಘಟನೆಗಳು ನಡೆದಿದೆ ಇತ್ತೀಚೆಗೆ ಕಾರ್ಕಳದಲ್ಲಿ ಬಿಜೆಪಿ ಮುಖಂಡ ಉಪನ್ಯಾಸಕ ನೋರ್ವ ತನ್ನ ವಿದ್ಯಾರ್ಥಿನಿಗೆ ಕಿರುಕುಳ ನೀಡಿರುವ ಘಟನೆಯು ವರದಿಯಾಗಿತ್ತು, ಅದೇ ರೀತಿ ಅಮಾಸೆಬೈಲಿನಲ್ಲಿ ಧರ್ಮಸ್ಥಳ ಸಂಘದ ಮಹಿಳೆಗೆ ಬಿಜೆಪಿ ಮುಖಂಡನೊಬ್ಬ ಲೈಂಗಿಕ ದೌರ್ಜನ್ಯ ವೆಸಗಿ ಜೈಲಿಗೆ ಹೋದ ಘಟನೆಯು ನಡೆದಿತ್ತು ಅಲ್ಲದೆ ಪಕ್ಕದ ಮೂಡಬಿದ್ರೆಯ ಬಿಜೆಪಿ ಶಾಸಕರ ಆಪ್ತನೊಬ್ಬನ ಮೊಬೈಲಿನಲ್ಲಿ ಹಲವು ಮಹಿಳೆಯರ ಅಶ್ಲೀಲ ವಿಡಿಯೋಗಳು ಪತ್ತೆಯಾಗಿ ಹಲವು ಮಹಿಳೆಯರಿಗೆ ಬ್ಲಾಕ್ ಮೇಲ್ ಮಾಡಿರುವ ಪ್ರಕರಣವು ವರದಿಯಾಗಿತ್ತು. ಹಾಗೂ ಪುತ್ತೂರಿನಲ್ಲಿ ಬಿಜೆಪಿ ಮುಖಂಡ ರೋರ್ವರ ಮಗ ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮಗು ಕರುಣಿಸಿದ ಘಟನೆಯು ನಡೆದಿತ್ತು.
ಈ ರೀತಿಯ ಹಲವು ಪ್ರಕರಣಗಳು ಬಿಜೆಪಿಯವರಿಂದ ನಡೆದಿದೆ ಆದ್ದರಿಂದ ಧರ್ಮದ ಲೇಬಲ್ ಹಚ್ಚಿಕೊಂಡು ಇವರು ಮಾಡುತ್ತಿರುವ ಅನಾಚಾರದ ಬಗ್ಗೆ ಸಮಾಜ ಜಾಗೃತರಾಗಬೇಕು ಎಂದು ಅಶ್ರಫ್ ಭಾವ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.





