ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ಶಿನಾಳ ರಸ್ತೆಯ ಪಾಟೀಲ ತೋಟದ ರಸ್ತೆ ಗುಂಡಿಗಳಿಂದ ತುಂಬಿದ್ದು, ಬೈಕ್ ಸವಾರರಿಗೆ ಈ ಗುಂಡಿಗಳು ಕಾಣದಂತಾಗಿದ್ದು, ವಾಹನಗಳನ್ನು ಸಂಚರಿಸಲು ಹೈರಾಣಾಗುತ್ತಿದ್ದಾರೆ.
ಅಥಣಿ ತಾಲೂಕಿನಲ್ಲಿ ಹಲವು ಗ್ರಾಮಗಳಿಗೆ ತೆರಳಬೇಕಾದ ರಸ್ತೆಗಳು ಹದುಗೆಟ್ಟು ಹೋಗಿರುತ್ತವೆ. ಇಂತಹ ರಸ್ತೆಗಳ ದುರಸ್ತಿಗೆ ಸಂಬಂಧಪಟ್ಟವರು ಗಮನ ಹರಿಸುತ್ತಿಲ್ಲವೆಂಬುದು ಸ್ಥಳೀಯರ ಆರೋಪವಾಗಿದೆ.
“ತಗ್ಗು ಗುಂಡಿಯಂತಹ ರಸ್ತೆಗಳಲ್ಲಿ ವಾಹನಗಳನ್ನು ಚಲಾಯಿಸಲು ಸವಾರರು ಹೈರಾಣಾಗುತ್ತಿದ್ದರೂ ಕೂಡ ಸಂಬಂಧಪಟ್ಟವರು ಜಾಣಕುರುಡರಂತೆ ವರ್ತಿಸುತ್ತಿದ್ದಾರೆ. ಹಾಗಾಗಿ ಈ ರಸ್ತೆಗಳು ಹದಗೆಟ್ಟಿದ್ದರೂ ಕೂಡ ಹೇಳೋರಿಲ್ಲ, ಕೇಳೋರೂ ಇಲ್ಲ ಎನ್ನುವಂತಾಗಿದೆ” ಕಳವಳ ವ್ಯಕ್ತಪಡಿಸಿದ್ದಾರೆ.
“ಐಬಿ ರಸ್ತೆಯಲ್ಲಿಯೂ ತಗ್ಗುಗುಂಡಿಗಳು ಬಿದ್ದಿದ್ದು, ಪ್ಯಾಚ್ ವರ್ಕ್ ಮಾಡಿದ್ದು, ಪೂರ್ಣ ರಸ್ತೆ ನಿರ್ಮಾಣ ಮಾಡಿಲ್ಲ. ಈ ರಸ್ತೆಯಲ್ಲಿ ಸಂಚರಿಸುವವರಿಗೆ ತಗ್ಗುಗುಂಡಿ, ಧೂಳು ತುಂಬಿಕೊಳ್ಳುವ ರಸ್ತೆಗಳನ್ನು ನೋಡಬಹುದು” ಎಂದರು.
“ಇಂತಹ ಹದತಗೆಟ್ಟಿರುವ ರಸ್ತೆಯಲ್ಲಿ ಬೈಕ್‌ಗಳು ಸ್ಕಿಡ್ ಆಗಿ ಬಿದ್ದು, ಸವಾರರಿಗೆ ಅನಾಹುತಗಳು ಎದುರಾದರೆ ಯಾರು ಹೊಣೆ? ಹಾಳಾದ ರಸ್ತೆಯ ಅಕ್ಕಪಕ್ಕಗಳಲ್ಲಿ ಬೀದಿ ವ್ಯಾಪಾರಿಗಳು ತಳ್ಳುವ ಗಾಡಿ ಮೇಲೆ ಬಜ್ಜಿ, ವಡಾಪಾವ್, ಹೋಟೆಲ್‌ಗಳು ಟೀ ಶಾಪ್‌ಗಳು, ಫ್ರೂಟ್ಸ್ ವ್ಯಾಪಾರಿಗಳು, ಪಾನಿಪೂರಿಯಂತಹ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರು ಈ ರಸ್ತೆ ಧೂಳಿನಿಂದ ಹೈರಾಣಾಗುತ್ತಿದ್ದಾರೆ” ಎಂಬುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

“ಈ ಬಗ್ಗೆ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ವರದಿಗಳನ್ನು ಪ್ರಕಟಿಸಿದರೂ ಕೂಡ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ವಾಹನ ಸವಾರರು ಸಂಚರಿಸುವಾಗ ರಸ್ತೆ ದುರಸ್ತಿಪಡಿಸುವಂತೆ ಆಗ್ರಹಿಸಿ ಸಂಬಂಧಪಟ್ಟವರಿಗೆ ಹಿಡಿಶಾಪ ಹಾಕುತ್ತ ಸಂಚರಿಸುತ್ತಿದ್ದಾರೆ. ಸಂಬಂಧಪಟ್ಟವರು ಇನ್ನಾದರೂ ಮಾಧ್ಯಮ ವರದಿಗಳಿಗೆ ಗಮನಹರಿಸಿ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ದಿ ಇಂಟೆಲೆಕ್ಚುವಲ್ ಶಾಲಾ ಮಕ್ಕಳಿಂದ ವಿಜ್ಞಾನ ವಸ್ತುಪ್ರದರ್ಶನ: ಗಮನ ಸೆಳೆದ ಮಾದರಿಗಳು
“ಸಂಬಂಧಪಟ್ಟವರು ತಾಲೂಕು ಆಡಳಿತ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ರಾಜ್ಯಪಾಲರು, ರಾಷ್ಟ್ರಪತಿಗಳು, ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಪ್ರಧಾನ ಮಂತ್ರಿಗಳು, ಸಾರಿಗೆ ಸಚಿವರು, ಶಾಸಕರು ತಾಲೂಕಿನ ಎಲ್ಲ ರಸ್ತೆಗಳನ್ನು ಸರಿಪಡಿಸುತ್ತಾರೆಯೋ? ಅಥವಾ ತಗ್ಗು ಗುಂಡಿಯಂತಹ ರಸ್ತೆಗಳು ಮತ್ತೆ ಯತಾಸ್ಥಿತಿ ಮುಂದುವರೆಯುತ್ತವೆಯೇ? ಎಂಬುದನ್ನು ಕಾದು ನೋಡಬೇಕಿದೆ” ಎಂದರು.





