ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ಸಂಘಟನೆಯ ಔರಾದ ತಾಲೂಕಾ ಘಟಕ ರಚಿಸಲಾಗಿದ್ದು, ತಾಲೂಕು ಅಧ್ಯಕ್ಷರಾಗಿ ಪ್ರವೀಣ ಕಾರಂಜೆ ಅವರನ್ನು ನೇಮಕ ಮಾಡಲಾಗಿದೆ.
ಔರಾದ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂಡಿಯನ್ ನ್ಯಾಷನಲ್ ಭೀಮ ಆರ್ಮಿ ರಾಜ್ಯಾಧ್ಯಕ್ಷ ದಿಲೀಪಕುಮಾರ ವರ್ಮಾ ನೇತ್ರತ್ವದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಔರಾದ ತಾಲೂಕಾ ಘಟಕದ ಪದಾಧಿಕಾರಿಗಳು:
ಸಂಪತಕುಮಾರ ಸಕ್ಪಾಲ್ (ಗೌರವಾಧ್ಯಕ್ಷ), ಪ್ರವೀಣ ಕಾರಂಜೆ (ತಾಲೂಕಾ ಅಧ್ಯಕ್ಷ), ಸಂತೋಷ ಸೂರ್ಯವಂಶಿ ( ಉಪಾಧ್ಯಕ್ಷ), ದಿನೇಶ ಶಿಂಧೆ (ಪ್ರಧಾನ ಕಾರ್ಯದರ್ಶಿ), ಸುಂದರ ಮೇತ್ರೆ (ಖಜಾಂಚಿ), ಸಿದ್ಧಾರ್ಥ ಭೋಸ್ಲೆ (ಕಾರ್ಯದರ್ಶಿ), ಗಂಗಾರಾಮ (ಸಹ ಕಾರ್ಯದರ್ಶಿ), ಪ್ರೇಮ ಘೋಡಬೋಲೆ (ಜಂಟಿ ಕಾರ್ಯದರ್ಶಿ) ಹಾಗೂ ಸಂಘಟನಾ ಕಾರ್ಯದರ್ಶಿಗಳಾಗಿ ಅಮೀತ ಶಿಂಧೆ, ಸತ್ಯಪಾಲ ವಾಘಮಾರೆ, ಗಂಗಾಧರ ಸೂರ್ಯವಂಶಿ, ಸತೀಶ ಸೂರ್ಯವಂಶಿ, ರಾಹುಲ್ ಸೋನಕಾಂಬಳೆ, ಕಾಂತೇಶ ಭಾಲ್ಕೆ, ರಾಹುಲ್ ಭೋರೆ, ಸುಮೀತ್ ಶಿಂಧೆ, ಉತ್ತಮ ಗಾಯಕವಾಡ ಅವರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ : ಬೀದರ್ | ವಿದ್ಯುತ್ ಶಾರ್ಟ್ ಸರ್ಕೀಟ್ : 4 ಎಕರೆ ಕಬ್ಬು ಬೆಂಕಿಗಾಹುತಿ, ಪರಿಹಾರಕ್ಕೆ ಮನವಿ
ಸಂಘಟನೆಯ ರಾಜ್ಯಾಧ್ಯಕ್ಷ ದೀಲಿಪಕುಮಾರ ವರ್ಮಾ ಮಾತನಾಡಿ, ʼಸಂಘಟನೆಯ ತತ್ವ ಸಿದ್ಧಾಂತಗಳ ಅನುಗುಣವಾಗಿ ಸಂಘಟನೆಯನ್ನು ಬಲಪಡಿಸಿ, ಜನಪರ, ದಲಿತ,ರೈತರ, ಕಾರ್ಮಿಕರ, ಮಹಿಳಾ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟಗಳನ್ನು ರೂಪಿಸಬೇಕುʼ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಾಹುಲ ಖಂದಾರೆ, ಸುಭಾಷ ಲಾಧಾ, ಸುನೀಲ ಮಿತ್ರಾ ಸೇರಿದಂತೆ ಮತ್ತಿತರರಿದ್ದರು.





