ಕೋಲಾರ: ಸವಿತಾ ಸಮಾಜದ ಅಭಿವೃದ್ಧಿ ನಿಗಮದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶದ ಕ್ಷೌರಿಕ ಮನೆ ವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಗಮದ ಅಧ್ಯಕ್ಷ ಎಂ.ಎಸ್ ಮುತ್ತುರಾಜ್ ತಿಳಿಸಿದರು
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ದೊಡ್ಡಹಸಾಳ ಗ್ರಾಮದ ಎಂ.ರಾಮಮೂರ್ತಿ ಮನೆಯಲ್ಲಿ ಪ್ರಾರಂಭವಾಗಲಿದ್ದು ಗುರುವಾರ ಶಿಲ್ಲಂಗೆರೆ ಶುಕ್ರವಾರ ಯಲವಾರ ಗ್ರಾಮದಲ್ಲಿ ವಾಸ್ತವ್ಯ ಮಾಡಲಾಗುತ್ತದೆ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಸವಿತಾ ಸಮಾಜದ ನಿಗಮದಿಂದ ಸಮುದಾಯದ ವಿದ್ಯಾರ್ಥಿಗಳು ವಿದೇಶದಲ್ಲಿ ವ್ಯಾಸಂಗ ಮಾಡಲು 50 ಲಕ್ಷ ಪೋತ್ಸಾಹಧನ ಕನಿಷ್ಠ ಎರಡು ಎಕರೆ ಜಮೀನು ಇದ್ದರೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆಬಾವಿಗೆ ಅವಕಾಶ ನೀಡಲಾಗುತ್ತದೆ ಸ್ವಯಂ ಉದ್ಯೋಗಕ್ಕಾಗಿ 1 ಲಕ್ಷ ಜೊತೆಗೆ ಸ್ವಾವಲಂಬಿ ಸಾರಥಿ ಇತ್ಯಾದಿ ಯೋಜನೆಗಳು ಇದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ನಿಗಮಕ್ಕೆ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್ ಅವರು 18 ಕೋಟಿ ಅನುದಾನ ನೀಡಲಾಗಿದೆ ಮುಂದೆ ಹೆಚ್ಚಿನ ಬೇಡಿಕೆ ಇಡಲಾಗುತ್ತದೆ ನಮಗೆ ಜಾತಿಯ ಶಕ್ತಿ ಇಲ್ಲ ಜಾತಿಯ ಹಾಗೂ ವೃತ್ತಿಯ ಬಗ್ಗೆ ಅವಹೇಳನಕಾರಿಯ ಪದ ಬಳಸುತ್ತುರುವುದು ಬೇಸರ ತರಿಸಿದೆ ಮುಂದೆ ಇದಕ್ಕೆ ಕಾನೂನು ತರಲು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ ಎಂದರು.
ಸವಿತಾ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ ನಿಗಮ ಅಧ್ಯಕ್ಷ ಮುತ್ತುರಾಜ್ ಕ್ಷೌರಿಕರ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದು ಇದು ಹೊಸ ಪ್ರಯೋಗವಾಗಿದೆ ಸಮುದಾಯದ ಬಗ್ಗೆ ಸಮಾಜದಲ್ಲಿ ಕಾಡುತ್ತಿರುವ ಕೀಳರಿಮೆ ಹೋಗಲಾಡಿಸಲು ಆತ್ಮವಿಶ್ವಾಸ ತುಂಬಲು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಕೋಲಾರದಿಂದ ಪ್ರಾರಂಭವಾಗಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ನಡೆಯಲಿದೆ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯ ಉಪಾಧ್ಯಕ್ಷ ಓಬಿಸಿ ಮಂಜುನಾಥ್ ಮಾತನಾಡಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಸವಿತಾ ಸಮಾಜ ಬೆಸ್ತರು ಹಾಗೂ ಮಡಿವಾಳ ಸಮುದಾಯವನ್ನು ಎಸ್ಸಿಗೆ ಸೇರಿಸಲು ಮನವಿ ಮಾಡಿದ್ದೇವೆ ಮುಂಬರುವ ಬಜೆಟ್ ನಲ್ಲಿ ಸಮಾಜದ ಏಳಿಗೆಗಾಗಿ ಕನಿಷ್ಠ 100 ಕೋಟಿ ವಿಶೇಷ ಅನುದಾನಕ್ಕೆ ಮನವಿ ಮಾಡಿದ್ದೇವೆ ಸಮಾಜದಲ್ಲಿನ ಕಟ್ಟಕಡೆಯ ಬಡವರನ್ನು ಗುರುತಿಸಿ ಸೌಲಭ್ಯವನ್ನು ಸಿಗುವಂತೆ ಮಾಡಬೇಕಾಗಿದೆ ಎಂದರು.
ಇದನ್ನು ಓದಿದ್ದೀರಾ..? ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಮಾಡಿದ ವಿಜಯಕುಮಾರ್ ಗೆ ಕಾಂಗ್ರೆಸ್ ಮುಖಂಡರಿಂದ ವಾಗ್ದಾಳಿ
ಈ ಪತ್ರಿಕಾಗೋಷ್ಠಿಯಲ್ಲಿ ಸವಿತಾ ಸಮಾಜದ ಮುಖಂಡರಾದ ಶಿವಕುಮಾರ್, ಕೆಂಪರಾಜು, ದೀಪು, ಕೋಟೆ ರಾಜೇಶ್, ಗುರು ಮುಂತಾದವರು ಇದ್ದರು.





