ಧಾರವಾಡ | ಅಂಗನವಾಡಿ ಸಮಸ್ಯೆ ಬಗೆಹರಿಸಲು ಅಧಿಕಾರಿಗಳು ವಿಫಲ: ಕಟ್ಟಡ ಕುಸಿದರೆ ಮಕ್ಕಳ ಪ್ರಾಣಕ್ಕೆ ಯಾರು ಹೊಣೆ?

Date:

ಧಾರವಾಡ ಜಿಲ್ಲೆಯಲ್ಲಿ ಒಟ್ಟು 1511 ಅಂಗನವಾಡಿ ಕೇಂದ್ರಗಳಿವೆ. ಈ ಪೈಕಿ ಕುಂದಗೋಳ ತಾಲೂಕಿನಲ್ಲಿ ಒಟ್ಟು 212 ಅಂಗನವಾಡಿ ಕೇಂದ್ರಗಳಿದ್ದು ಅದರಲ್ಲಿ ಬಾಡಿಗೆ ಕಟ್ಟಡಗಳೂ ಸೇರಿವೆ.

ಅಂಗನವಾಡಿ ಕೇಂದ್ರಗಳ ಕುರಿತು ಸಮೀಕ್ಷೆ ನಡೆಸಿದಾಗ ಹಲವಾರು ವರ್ಷಗಳಿಂದ ಇನ್ನೂ ಕೆಲವು ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳೇ ಇಲ್ಲ. 212 ಕೇಂದ್ರಗಳಲ್ಲಿ 138 ಸ್ವಂತ ಕಟ್ಟಡಗಳು, 27 ಬಾಡಿಗೆ ಕಟ್ಟಡಗಳು, ಪಂಚಾಯತ್ ಕಟ್ಟಡದಲ್ಲಿ 13, ಸಮುದಾಯ ಭವನದಲ್ಲಿ 8, ಸರ್ಕಾರಿ ಶಾಲೆ ಹಾಗೂ ಅಂಗನವಾಡಿ ಯುವಕ ಮಂಡಲದಲ್ಲಿ 2 ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.

ಧಾರವಾಡ ತಾಲೂಕು ವ್ಯಾಪ್ತಿಗೆ ಹೋಲಿಸಿದರೆ ಕುಂದಗೋಳ ತಾಲೂಕಿನಲ್ಲಿ ಅಷ್ಟೊಂದು ಕಳಪೆ ಅನಿಸುವುದಿಲ್ಲವಾದರೂ ಕೆಲವೊಂದು ಕಡೆಗಳಲ್ಲಿ ಶಿಥಿಲಾವಸ್ಥೆಗೆ ತಲುಪಿದ ಕಟ್ಟಡಗಳಲ್ಲೇ ಚಿಣ್ಣರು ಕೂರುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಾಲೂಕಿನ ಹಿರೇಹರಕುಣಿ ವ್ಯಾಪ್ತಿಯಲ್ಲಿ ಒಟ್ಟು 7 ಅಂಗನವಾಡಿ ಕೇಂದ್ರಗಳು, ಅದರಲ್ಲಿ 2 ಬಾಡಿಗೆ, ಇದೇ ವ್ಯಾಪ್ತಿಯ ಚಿಕ್ಕಹರಕುಣಿಯಲ್ಲಿ ಇರುವ ಒಂದೇ ಒಂದು ಕಟ್ಟಡ. ಈ ಕಟ್ಟಡವು ಶಿಥಿಲಾವಸ್ಥೆಗೆ ತಲುಪಿದೆ.

1001198003

“ಅಂಗನವಾಡಿಯಲ್ಲಿ ಹಿಟ್ಟು, ಬೆಲ್ಲ, ಬೇಳೆ ಇತ್ಯಾದಿಗಳನ್ನು ಇಲಿ, ಹೆಗ್ಗಣಗಳು ಬಂದು ತಿನ್ನುವಂತ ಅವ್ಯವಸ್ಥೆ ನಿರ್ಮಾಣವಾಗಿದೆ. ಪ್ರತಿಯೊಂದು ಆಹಾರ ಪದಾರ್ಥಗಳನ್ನು ಡಬ್ಬಿಗಳಲ್ಲಿ ಹಾಕಿ ಕಾಯ್ದುಕೊಳ್ಳಬೇಕು” ಎಂದು ಅಂಗನವಾಡಿ ಸಹಾಯಕಿ ಯಲ್ಲವ್ವ ಹಾದಿಮನಿ ಹೇಳುತ್ತಾರೆ.

ಹಿರೇಹರಕುಣಿಯ ಪಂಚಾಯತಿ ಆವರದಲ್ಲಿರುವ ಕಟ್ಟಡ ಬಹಳಷ್ಟು ಕಾವಲಿನಲ್ಲಿದ್ದು ಯಾವುದೇ ತೊಂದರೆಯಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೇಂದ್ರ 3 ರಲ್ಲಿ ಮತ್ತು ಹನುಮನಹಳ್ಳಿ ಅಂಗನವಾಡಿ ಕೇಂದ್ರಗಳಲ್ಲಿ ವ್ಯವಸ್ಥೆಗಿಂತ ಪಾಠ ಮಾಡುವ ಟೀಚರ್ ಸರಿಯಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ತಾಲೂಕಿನಲ್ಲಿ ಅತ್ಯಂತ ದೊಡ್ಡ ಗ್ರಾಮ ಸಂಶಿ. ಈ ಗ್ರಾಮದಲ್ಲಿ ಒಟ್ಟು 15 ಕೇಂದ್ರಗಳಲ್ಲಿ, 3 ಬಾಡಿಗೆ ಕಟ್ಟಡದಲ್ಲಿವೆ. ಪಂಚಾಯತಿ ಕಟ್ಟಡ, ಅಂಬೇಡ್ಕರ್ ಭವನ, ಅಕ್ಕಮಹಾದೇವಿ ದೇವಸ್ಥಾನದಲ್ಲಿ ಮೂರು ಅಂಗನವಾಡಿ ಕೇಂದ್ರಗಳು ನಡೆಯುತ್ತಿವೆ.

ಅಂಬೇಡ್ಕರ್ ಭವನದಲ್ಲಿ ನಡೆಯುವ ಕೇಂದ್ರಕ್ಕೆ ಹಳೆಯ ಕಟ್ಟಡ ಇದ್ದರೂ ಶಿಥಿಲಾವಸ್ಥೆಗೆ ತಲುಪಿರುವ ಕಟ್ಟಡದಿಂದಾಗಿ ಚಿಣ್ಣರು, ಸಹಾಯಕಿಯರು ಪರದಾಡುವಂತಾಗಿದೆ. ಕಮಡೊಳ್ಳಿ ಗ್ರಾಮದಲ್ಲಿ ಹಳೆಯ ಕಟ್ಟಡ ಹಾಳಾಗಿದ್ದು, ಕಳೆದ ಐದು ವರ್ಷಗಳಿಂದ ಸರ್ಕಾರಿ ಉರ್ದು ಶಾಲೆಯಲ್ಲಿಯೇ ನಡೆಸಲಾಗುತ್ತಿದೆ.

1001198011

ತಾಲೂಕಿನ ಶಿರೂರ ಗ್ರಾಮದಲ್ಲಿರುವ ಎರಡು ಕೇಂದ್ರಗಳಲ್ಲಿ ಒಂದು ಅಂಗನವಾಡಿ ಕೇಂದ್ರ ಪಂಚಾಯತಿ ಕಟ್ಟಡದಲ್ಲೇ ನಡೆಯುತ್ತಿದೆ. ದುರಂತವೆಂದರೆ ಈ ಹಳೆಯ ಪಂಚಾಯತಿ ಕಟ್ಟಡದಲ್ಲೇ ಕಂದಾಯ ಇಲಾಖಾ ಅಧಿಕಾರಿಗಳೂ ಕಾರ್ಯನಿರ್ವಹಿಸುತ್ತಾರೆ. ಮತ್ತು ಈ ಗ್ರಾಮ ಲೆಕ್ಕಾಧಿಕಾರಿಗಳ ಪಕ್ಕದಲ್ಲಿಯೇ ಚಿಣ್ಣರು ಕುಳಿತುಕೊಳ್ಳುವ ವಾತಾವರಣ ನಿರ್ಮಾಣವಾಗಿದ್ದು ಕಳೆದ 15 ವರ್ಷಗಳಿಂದಲೂ ಮುಂದುವರೆದಿದೆ. ಒಂದು ವೇಳೆ ಲೆಕ್ಕಾಧಿಕಾರಿಗಳ‌ ಭೇಟಿಗೆ ಜನ ಜಾಸ್ತಿ ಬಂದರೆ; ಮಕ್ಕಳ‌ನ್ನು‌ ಪಕ್ಕದಲ್ಲಿರುವ ಈಶ್ವರ ದೇವಾಲಯಕ್ಕೆ ಕರೆದುಕೊಂಡು ಹೋಗುವ ಪರಿಪಾಠವನ್ನು ರೂಢಿಸಿಕೊಂಡಿದ್ದಾರೆ.

ಕಟ್ಟಡವಾದರೂ ಸರಿಯಾಗಿದೆಯೆ? ಎಂದು ನೋಡಿದರೆ ಕಟ್ಟಡವೂ ನೆಟ್ಟಗಿಲ್ಲ. ಈ ಕಟ್ಟಡದ ಗೋಡೆಯ ಮೇಲೆ ಬೃಹತ್ತಾಗಿ ಅರಳಿ ಮರವೊಂದು ಬೆಳೆದು ನಿಂತಿದೆ. ಮೇಲೆ ಹಾಸಲಾದ ಹಂಚುಗಳು ಒಡೆದು ಚೂರಾಗಿವೆ. ಜೋರಾಗಿ ಮಳೆ ಸುರಿಯತೊಡಗಿದರೆ ಈ ಕಟ್ಟಡದಲ್ಲಿರುವ ಎಲ್ಲರಿಗೂ ಈಶ್ವರ ದೇವಸ್ಥಾನವೇ ಆಶ್ರಯವಾಗಿದೆ.

ಈ ಕಟ್ಟಡ ಯಾವುಗ ಬೀಳುತ್ತದೆಯೊ ಎಂದು ಅಲ್ಲಿರುವ ಸ್ಥಳೀಯರಿಗೂ ಹೇಳಲೂ ಬರುವುದಿಲ್ಲ. ಒಂದು ವೇಳೆ ಕಟ್ಟಡ ಕುಸಿದು ಬಿದ್ದರೆ ಯಾರು ಹೊಣೆ? ಕಟ್ಟಡದಲ್ಲಿರುವ ಲೆಕ್ಕಾಧಿಕಾರಿಗಳು, ಗ್ರಾಮಸ್ಥರು, ಮಕ್ಕಳು, ಅಂಗನವಾಡಿ ಸಹಾಯಕಿಯರಿಗೆ ಸಮಸ್ಯೆ ಉಂಟಾದರೆ ಯಾರನ್ನು ಕೇಳುವುದು? ಇದರ ಜವಾಬ್ದಾರರು ಯಾರು? ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ. ಈ ಬಗ್ಗೆ ಹಲವು ಬಾರಿ ಮನವಿ‌ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಹೇಳುತ್ತಾರೆ.

1001198007

ಬಸ್ಸಾಪುರ, ಬೆನಕನಹಳ್ಳಿ, ಗುಡೇನಕಟ್ಟಿ ಗ್ರಾಮಗಳಲ್ಲಿರುವ ಅಂಗನವಾಡಿಗಳಲ್ಲಿ ಯಾವುದೇ ದೊಡ್ಡ ಸಮಸ್ಯೆಗಳು ಕಂಡುಬಂದಿಲ್ಲ. ಮೇಲಾಗಿ ಒಂದು ವರ್ಷದ ಹಿಂದಕ್ಕೆ ಹೋಲಿಸಿದರೆ ಈಗ ಬಹುತೇಕ ಸುಧಾರಣೆ ಆಗಿದೆ ಎಂದು ಅಂಗನವಾಡಿ ಸೇವಕಿಯರೂ ಸಂತಸದಿಂದ ಹಂಚಿಕೊಳ್ಳುತ್ತಾರೆ. ಗುಡೇನಕಟ್ಟಿಯಲ್ಲಿ ನಂದಘರ್ ಕಟ್ಟಡ ನಿರ್ಮಾಣ ಆದಮೇಲೆ ಪಾಲಕರು ಮಕ್ಕಳನ್ನು ಅಂಗನವಾಡಿಗೆ ಖುಷಿಯಿಂದ ಕಳಿಸುತ್ತಿದ್ದಾರೆ ಎಂದು ಅಂಗನವಾಡಿಯ ಸಹಾಯಕಿ ಯಲ್ಲವ್ವ ಹೂಲಿಕಟ್ಟಿ ಹೇಳುತ್ತಾರೆ.

ಇನ್ನು ಹಿರೇನೆರ್ತಿ ಗ್ರಾಮದಲ್ಲಿ ಒಟ್ಟು 4 ಅಂಗನವಾಡಿಗಳಲ್ಲಿ 2 ಬಾಡಿಗೆ ಕಟ್ಟಡ, ಅದರಲ್ಲಿ ಕೇಂದ್ರ ಸರ್ಕಾರದ ಅನುದಾನದ ಅಡಿಯಲ್ಲಿ‌ ನಿರ್ಮಾಣವಾದ ನಂದಘರ್ ಅಂಗನವಾಡಿ ಕಟ್ಟಡದ ಕಾಮಗಾರಿ ಕಳಪೆಮಟ್ಟದಲ್ಲಿದ್ದು, ಮಳೆ ಬಂದರೆ ಸೋರುವ ಸ್ಥಿತಿಯಲ್ಲಿದೆ. ಮತ್ತೊಂದು ಕಟ್ಟಡ ಆಗಲೊ ಈಗಲೊ ಬೀಳುವ ಹಂತದಲ್ಲಿರುವ ಹಳೆಯ ಹಂಚಿನ ಮನೆಯಲ್ಲಿ ನಡೆಯುತ್ತಿದೆ. ಹಳೆ ಕಟ್ಟಡವೂ ಬೀಳುತ್ತಿದ್ದ ಕಾರಣ ಒಂದು ವರ್ಷವಾದರೂ ಹೊಸ ಕಟ್ಟಡ ನಿರ್ಮಾಣಕ್ಕೆ ಯೋಜನೆಯೂ ಹಾಕಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

1001198006

ಒಟ್ಟಾರೆಯಾಗಿ ಈ ಎಲ್ಲ ಸಮಸ್ಯೆಗಳ ಕುರಿತು ಈ ದಿನ. ಕಾಮ್ ಜೊತೆಗೆ ಮಾತನಾಡಿದ ತಾಲೂಕು ಸಿಡಿಪಿಓ ಅಧಿಕಾರಿ ಶಾರಧಾ ನಾಡಗೌಡರ, ” ಈ ಎಲ್ಲ ಸಮಸ್ಯೆಗಳು ಗಮನಕ್ಕೆ ಬಂದಿದ್ದು ಆದಷ್ಟು ಬೇಗ ಬಗೆಹರಿಸುವಲ್ಲಿ‌ ಕಾರ್ಯೋನ್ಮುಖರಾಗುತ್ತೇವೆ. ಕೆಲವೊಂದು ಕಡೆಗೆ ಬಜೆಟ್ ಇಲ್ಲದಿರುವ ಕಾರಣ ಕಟ್ಟಡಗಳು ನಿರ್ಮಾಣವಾಗದೆ ಅರ್ಧಕ್ಕೆ ನಿಂತಿವೆ. ತಾಲೂಕು ಸೂಪರ್ ವೈಸರ್ ಗಮನಕ್ಕೆ ತರಲಾಗುವುದು” ಎಂದರು.

ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳನ್ನು ಬಗೆಹರಿಸಲು ಆಸಕ್ತಿ ವಹಿಸುವರೋ ಅಥವಾ ಹಾರಿಕೆ ಉತ್ತರವನ್ನೇ ನೀಡುತ್ತಾ ಮುಂದುವರೆಯುತ್ತಾರೋ ಎಂಬುದನ್ನು ಕಾದುನೋಡಬೇಕಿದೆ.

IMG 20240805 WA0207
ಶರಣಪ್ಪ ಗೊಲ್ಲರ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...