ಸಾರ್ವಜನಿಕ ಸೇವೆ ಸಮಯದಲ್ಲಿ ಗ್ರಾಮ ಪಂಚಾಯತ್ ಗೆ ಬೀಗ ಹಾಕಿ ಸಿಬ್ಬಂದಿಗಳು ನಾಪತ್ತೆಯಾಗಿದ್ದಾರೆ. ಸಮಸ್ಯೆಗಳನ್ನು ಕೇಳಲು ಹೋದ ಸಾರ್ವಜನಿಕರಿಗೆ ಬಲಕುಂದಿ ಗ್ರಾಮ ಪಂಚಾಯತಿಯಲ್ಲಿ ಯಾರು ಸಿಬ್ಬಂದಿಗಳು ಇಲ್ಲದ ಕಾರಣ ಗೊಂದಲ ಉಂಟಾಗಿದ್ದು, ಜನರ ಸಮಸ್ಯೆ ಆಲಿಸುವವರೇ ಇಲ್ಲದಂತಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ಲ ತಾಲ್ಲೂಕಿನ ಬಲಕುಂದಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಬಲಕುಂದಿ ತಾಂಡಾ ೧, ತಾಂಡಾ ೨ , ಹೊಸುರು ಗ್ರಾಮದ ಸಾರ್ವಜನಿಕರು ಸಮಸ್ಯೆಗಳ ಕುರಿತು ಬಲಕುಂದಿ ತಾಂಡಾ ಗ್ರಾಮದ ನಿವಾಸಿ, ಎಸ್. ಎಫ್. ಐ ಮುಖಂಡ ಚಂದ್ರು ರಮೇಶ್ ರಾಠೋಡ ಅವರು ಮನವಿ ಸಲ್ಲಿಸಲು ಸೋಮವಾರ ಪಂಚಾಯಿತಿಗೆ ಹೋಗಿದ್ದರು. ಪಂಚಾಯಿತಿ ಬಾಗಿಲು ತೆರೆಯದೆ ಇದ್ದುದರಿಂದ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
“ಸುಮಾರು ಮದ್ಯಾನ 3(೧-೪) ಗಂಟೆಯಾದರೂ ಯಾವ ಅಧಿಕಾರಿಗಳು ಬರಲಿಲ್ಲ. ಇತರಹದ ವ್ಯವಸ್ಥೆಯಿಂದ ಪಂಚಾಯತಿ ಅಭಿವೃದ್ಧಿ ಕುಂಠಿತಗೊಂಡಿದೆ. ಕಂದಾಯ ಗ್ರಾಮವಾಗಿ ಘೋಷಣೆಯಾಗಿ ಸುಮಾರು 5 ವರ್ಷವಾದರೂ ಕೂಡ ಅಲ್ಲಿನ ಜನರಿಗೆ ಹಕ್ಕುಪತ್ರಗಳನ್ನು ನೀಡಿಲ್ಲ. ಸರಿಯಾಗಿ ವಿದ್ಯುತ್ ಸಂಪರ್ಕ, ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ ಇಲ್ಲ” ಎಂದು ಚಂದ್ರು ರಾಠೋಡ್ ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಜಿಲ್ಲೆಯಾದ್ಯಂತ ಸಂಭ್ರಮದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಜಯಂತ್ಯುತ್ಸ
“ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ಸ್ಥಳೀಯ ಶಾಸಕರು ವಿಜಯಾನಂದ ಕಾಶಪ್ಪನವರ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕೂಡಲೇ ಆದಷ್ಟು ಬೇಗ ಸಮಸ್ಯೆಗಳನ್ನು ಸರಿಪಡಿಸಬೇಕು” ಎಂದು ಒತ್ತಾಯಿಸಿದರು.





