ಬಾಗಲಕೋಟೆ | ಕಾಳಗದ ಜಯಸಿಂಹ ಟಗರು ₹5 ಲಕ್ಷಕ್ಕೆ ಮಾರಾಟ; ಹುಬ್ಬೇರಿಸಿದ ನೆಟ್ಟಿಗರು!

Date:

ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ತೆಗ್ಗಿ ಗ್ರಾಮದಲ್ಲಿ ಜಯಸಿಂಹ ಟಗರು ₹5 ಲಕ್ಷಕ್ಕೆ ಮಾರಾಟವಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಕಾಳಗಕ್ಕೆ ಬಳಸುವ ಟಗರು ಲಕ್ಷಾಂತರ ರೂಪಾಯಿಗೆ ಮಾರಾಟವಾಗುವುದು ಸಾಮಾನ್ಯ. ಆದರೆ ಐದು ಲಕ್ಷಕ್ಕೆ ಮಾರಾಟವಾಗಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ತೆಗ್ಗಿ ಗ್ರಾಮದ ಬಸವರಾಜ ಎಂಬುವರು ಮೂಲತಃ ಟಗರು ಸಾಕಾಣಿಕೆದಾರರು. ಎರಡು ವರ್ಷದ ಹಿಂದೆ ಒಂದು ಟಗರನ್ನು ₹90,000 ಕೊಟ್ಟು ಖರೀದಿ ಮಾಡಿದ್ದರು. ಇದೀಗ, ಈ ಟಗರನ್ನು ಧಾರವಾಡ ಮೂಲದ ಆರ್​ಎಕ್ಸ್​​ವೈ ಟಗರು ಪ್ರಿಯ ಗ್ರೂಪ್​ನವರು ಬರೋಬ್ಬರಿ ₹5 ಲಕ್ಷದ ₹1 ಸಾವಿರ ಕೊಟ್ಟು ಖರೀದಿಸಿದ್ದಾರೆ.

ಈ ಟಗರು ಯಾವುದೇ ಟಗರಿನ ಕಾಳಗದಲ್ಲಿ ಸೋಲನ್ನು ಕಾಣದೇ ಇರುವ ಧೀರ. ಹಾಗಾಗಿ ಇದರ ಮಾಲೀಕ ಬಸವರಾಜ ಇದಕ್ಕೆ ಪ್ರೀತಿಯಿಂದ ಜಯಸಿಂಹ ಎಂಬ ಹೆಸರು ಇಟ್ಟಿದ್ದು, ಜಯಶಾಲಿ ಜಯಸಿಂಹ ಟಗರು ಈವರೆಗೂ 50ಕೂ ಹೆಚ್ಚು ಟಗರಿನ ಬಡಿದಾಟದಲ್ಲಿ ಬಹುಮಾನವನ್ನು ಪಡೆದಿದೆ. ಅಲ್ಲದೆ ₹6 ಲಕ್ಷಕ್ಕೂ ಅಧಿಕ ಹಣ, ಬೈಕ್ ಹಾಗೂ ಇನ್ನಿತರ ಬಹುಮಾನಗಳನ್ನು ಮಾಲೀಕ ಬಸವರಾಜನಿಗೆ ತಂದು ಕೊಟ್ಟಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಗುಬ್ಬಿ |  ಉಪಲೋಕಾಯುಕ್ತರೆದುರೇ ಭಿಕ್ಷೆ ಬೇಡಿದ ವಿಶೇಷ ಚೇತನ ವೃದ್ದೆ

ಇದೀಗ, ಧಾರವಾಡ ಮೂಲದ ಆರ್​ಎಕ್ಸ್​ವೈ ಎಂಬ ಗ್ರೂಪ್​ನವರು ಬರೋಬ್ಬರಿ ₹5 ಲಕ್ಷ ಕೊಟ್ಟು ಈ ಜಯಸಿಂಹ ಟಗರನ್ನು ತಮ್ಮದಾಗಿಸಿಕೊಂಡಿದ್ದಾರೆ. ಜಯಸಿಂಹ ಇಷ್ಟು ದುಡ್ಡಿಗೆ ಮಾರಾಟವಾಗಿದ್ದನ್ನು ಕಂಡು ಟಗರು ಪ್ರಿಯರು ಭಲೇ ಮೈಲಾರಿ ಎನ್ನುತ್ತಿದ್ದಾರೆ.

WhatsApp Image 2025 11 17 at 3.21.38 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...