ಬಾಗಲಕೋಟೆ | ಅತಿಕ್ರಮವಾಗಿ ನಿರ್ಮಿಸಿರುವ ಗ್ರಾನೈಟ್ ಫ್ಯಾಕ್ಟರಿ ತೆರವಿಗೆ ಕರವೇ ಆಗ್ರಹ

Date:

‌ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಇಳಕಲ್‌ ತಾಲೂಕಿನಲ್ಲಿ ಅತಿಕ್ರಮವಾಗಿ ನಿರ್ಮಾಣ ಮಾಡಿರುವ ಗ್ರಾನೈಟ್‌ ಫ್ಯಾಕ್ಟರಿ ಹಾಗೂ ಮಾರಾಟ ಮಳಿಗೆಗೆಳನ್ನು ತೆರವುಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿತು.

ಬಾಗಲಕೋಟೆಯ ಇಳಕಲ್ ತಾಲೂಕು ಪೈಕಿ ರಿ ಸನಂ.75 ರಲ್ಲಿ ಇಳಕಲ್‌ನಿಂದ ಹೊಲಗೇರಿಗೆ ಹೋಗುವ ರಸ್ತೆ ಹಾಗೂ ಇದರ ಉತ್ತರಕ್ಕೆ ಹೊಂದಿಕೊಂಡಿರುವ ಸರ್ಕಾರಿ ಹಳ್ಳವನ್ನು ಒತ್ತುವರಿ ಮಾಡಿ ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯವರು ಕಟ್ಟಡ ಕಾಂಪೌಂಡ್ ಕಟ್ಟಿ ಅತಿಕ್ರಮ ಮಾಡಿದ ಕುರಿತು ಸಮರ್ಪಕ ದಾಖಲೆಗಳೊಂದಿಗೆ ಕರವೇ ತಾಲೂಕು ಘಟಕದ ವತಿಯಿಂದ ಇಳಕಲ್ ತಹಶೀಲ್ದಾರರಿಗೆ ದೂರು ಸಲ್ಲಿಸಲಾಗಿತ್ತು. ಆದರೆ ತಹಶೀಲ್ದಾರರು ನಿರ್ಲಕ್ಷ್ಯ ತೋರಿದ ಕಾರಣ 2024ರ ಅಕ್ಟೋಬರ್‌ 14ರಂದು ತಹಶೀಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಆರಂಭಿಸಲಾಗಿತ್ತು.

ಈ ಅತಿಕ್ರಮಣವನ್ನು ತೆರವುಗೊಳಿಸುವ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳವುದಾಗಿ ಬಾಗಲಕೋಟೆ ವಿಭಾಗೀಯ ಅಧಿಕಾರಿಗಳು ಭರವಸೆ ನೀಡಿದ ನಂತರ ಧರಣಿ ಸತ್ಯಾಗ್ರಹವನ್ನು ಅ.20ರಂದು ಕೈಬಿಡಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ತಾಲೂಕು ಭೂಮಾಪಕರು ನೀಡಿದ ವರದಿ ಹಾಗೂ ಗುರುತಿಸಿದ ಅತಿಕ್ರಮಣದ ಹದ್ದಿನಲ್ಲಿ ಕಟ್ಟಿರುವ ಕಟ್ಟಡಗಳನ್ನು ತೆರವುಗೊಳಿಸಲು ಇಳಕಲ್ ನಗರಸಭೆ ಸಿಬ್ಬಂದಿಗಳು ಕಳೆದ ಜನವರಿ 2 ರಂದು ಕಾಂಪೌಂಡಿನಲ್ಲಿ ಆಕಳುಗಳಿವೆ ಎಂದು ಕಾರಣ ನೀಡಿ ಅವುಗಳ ಸ್ಥಳಾಂತರಕ್ಕೆ 7 ದಿನಗಳ ಕಾಲಾವಧಿ ಕೇಳಿ ಖುದ್ದು ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯ ಮಾಲೀಕರು ಪೌರಾಯುಕ್ತರಲ್ಲಿ ವಿನಂತಿಸಿಕೊಂಡಿದ್ದರು.

ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯವರಿಂದ ಸರಕಾರಿ ಹಳ್ಳ ಒತ್ತುವರಿಯಾಗಿರುವುದು ಲಗತ್ತಿಸಿರುವ ದಾಖಲೆಗಳು ಮತ್ತು ಈ ಪತ್ರದ ಮುಖೇನ ಸ್ಪಷ್ಟವಾಗಿ ಸಾಬೀತಾಗಿದ್ದು, ಖುದ್ದು ಗಾಯತ್ರಿ ಗ್ರಾನೈಟ್ ಫ್ಯಾಕ್ಟರಿಯ ಮಾಲೀಕರೇ ಒಪ್ಪಿಕೊಂಡು ಕೇಳಿದ್ದ ಕಾಲಾವಕಾಶ ಮುಗಿದು ಹೋಗಿದ್ದರೂ ಸರ್ಕಾರಿ ಹಳ್ಳ ಒತ್ತುವರಿಯನ್ನು ತೆರವುಗೊಳಿಸದೇ ಇರುವುದು ಅಧಿಕಾರಿಗಳು ಹಾಗೂ ಅತಿಕ್ರಮಣದಾರರ ನಡುವೆ ಆಂತರಿಕ ಹೊಂದಾಣಿಕೆ ಆಗಿರಬಹುದು ಎನ್ನುವ ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.

ಕಾರಣ ಸದರಿ ಅತಿಕ್ರಮಣವನ್ನು 10 ದಿನಗಳಲ್ಲಿ ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು ಎಂದು ಕರವೇ ಒತ್ತಾಯಿಸಿತು.

ಈ ಸುದ್ದಿ ಓದಿದ್ದೀರಾ?: ಬಾಗಲಕೋಟೆ | ರೈತರ ಅನುಕೂಲಕ್ಕಾಗಿ ಕೆರೆಗಳ ಅಭಿವೃದ್ಧಿಗೆ ಕ್ರಮ: ಶಾಸಕ ವಿಜಯಾನಂದ ಕಾಶಪ್ಪನವರ

ಈ ವೇಳೆ ಕರವೇ ಜಿಲ್ಲಾಧ್ಯಕ್ಷ ಬಸವರಾಜ ಧರ್ಮಂತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಮೇಶ ಅಂಬಿಗೇರ, ತಾಲೂಕು ಅಧ್ಯಕ್ಷ ಗಣೇಶ ನಾಯಕ, ವಿದ್ಯಾರ್ಥಿ ಘಟಕದ ಮಶಾಕ್ ಸಂತಿ ಶಿರೂರ ಹಾಗೂ ಇತರರು ಇದ್ದರು.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...