ಬಾಗಲಕೋಟೆ ಜಿಲ್ಲೆಯ ಜಮಖಂಡಿ ಸಮೀಪದ ಹಿಪ್ಪರಗಿಯ ʼನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆʼಗೆ ಕೃಷ್ಣಾ ಮೇಲ್ದಂಡೆ ಯೋಜನೆ ವಿಶೇಷ ಭೂ ಸ್ವಾಧಿನಾಧಿಕಾರಿ ಸಾಜಿಜ ಅಹ್ಮದ ಮುಲ್ಲಾ ಭೇಟಿ ನೀಡಿ ಶಾಲೆಗಾಗಿ ಶ್ರಮಿಸಿದವರನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ನಾವು ಓದುವಾಗ ಮೂಲಭೂತ ಸೌಕರ್ಯಗಳ ಕೊರತೆ ಇತ್ತು, ಈ ಶಾಲೆಯ ಮಕ್ಕಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಕಂಪ್ಯೂಟರ್ ವ್ಯವಸ್ಥೆ ಮತ್ತು ಆಟದ ಮೈದಾನ ಇರುವುದು ನನಗೆ ಹರ್ಷ ತಂದಿದೆ ಎಂದರು.
ಮುಂದುವರಿದು, ಈ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಿದ ಗ್ರಾಮದ ಹೆಮ್ಮೆಯ ಯುವ ಪಡೆ ಹಾಗೂ ಗ್ರಾಮ ಪಂಚಾಯತಿ ಮತ್ತು ಊರಿನ ಗುರುಹಿರಿಯರಿಗೆ ಕೃತಘ್ನತೆ ಸಲ್ಲಿಸಿದ ಅವರು, ಈ ಎಲ್ಲ ಆಧುನಿಕ ಸೌಲಭ್ಯಗಳ ಸದುಪಯೋಗಪಡೆದುಕೊಂಡು ಸರಿಯಾದ ದಿಕ್ಕಿನಲ್ಲಿ ಅಧ್ಯಯನ ಮಾಡಿ, ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕೆಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಶಾಲೆಯಲ್ಲಿ ವಿಶೇಷವಾಗಿ ಉಚಿತವಾಗಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿರುವುದನ್ನು ಶ್ಲಾಘಿಸಿದರು. ಇಡೀ ಜಿಲ್ಲೆಯಲ್ಲಿಯೇ ಅತ್ಯಂತ ಉನ್ನತ ಗುಣಮಟ್ಟದ ಶಿಕ್ಷಣವನ್ನು ಈ ಶಾಲೆಯು ನೀಡಲಾಗುತ್ತಿದೆ ಎಂದು ಶಾಲೆಯನ್ನು ಪ್ರಶಂಶಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಎಸ್.ಬಿ. ಕುಂಬಾರ ಹಾಗೂ ಶಾಲೆಯ ಸಿಬ್ಬಂದಿ, ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಮಹಾದೇವ ಮಂಟೂರ, ಅಣ್ಣಪ್ಪ ಪಾಟೀಲ, ಮಹಾದೇವ ಕಾಂಬಳೆ, ಗ್ರಾಮದ ಪಿಡಿಒ ಅಧಿಕಾರಿಗಳಾದ ಬಸಲಿಂಗ ವಾಲಿ, ಕಂದಾಯ ನಿರೀಕ್ಷಕರಾದ ಪಿ.ಆರ್.ಮಠಪತಿ ಹಾಗೂ ಗ್ರಾಮ ಆಡಳಿತಾಧಿಕಾರಿ ಎ.ಎಸ್. ಬಿರಾದಾರ ಹಾಗೂ ಊರಿನ ಯುವಕರು, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.





