ಬಾಗಲಕೋಟೆ | ದಿ. ಗಡದನ್ನವರ ರೈತರ ಸ್ವಾಭಿಮಾನದ ಪ್ರತೀಕ: ಸಚಿವ ಆರ್‌ ಬಿ ತಿಮ್ಮಾಪೂರ

Date:

ರೈತರು ತೊಡುವ ಹಸಿರು ಶಾಲು ರಮೇಶ್ ಗಡನ್ನವರ ಅವರ ಹೋರಾಟ ಹಾಗೂ ರೈತರ ಸ್ವಾಭಿಮಾನದ ಪ್ರತೀಕವಾಗಿದೆ ಎಂದು ಅಬಕಾರಿ ಸಚಿವ ಆರ್‌ ಬಿ ತಿಮ್ಮಾಪೂರ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಎಪಿಎಂಸಿ ಎದುರಿಗಿರುವ ತಾಲೂಕು ಪಂಚಾಯತ್ ಜಾಗದಲ್ಲಿ‌ ಹಮ್ಮಿಕೊಂಡಿದ್ದ ದಿ. ರಮೇಶ್ ಗಡದನ್ನವರ ಅವರ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ಭೂಮಿಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

“ದಿ. ರಮೇಶ್ ಗಡದನ್ನವರ ಹೋರಾಟ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಅವರ ಪುತ್ಥಳಿ ನಿರ್ಮಿಸಲಿಕ್ಕೆ ಈ ಹಿಂದೆ ವಿಧಾನ ಪರಿಷತ್ ಸದಸ್ಯನಾಗಿ ಸಕ್ಕರೆ ಮಂತ್ರಿಯಾಗಿದ್ದಾಲೇ ರೈತ ನಾಯಕನ ಹೆಸರು ಅಜರಾಮರವಾಗಿ ಸೂರ್ಯ ಚಂದ್ರರಿರುವರೆಗೂ ಗಡದನ್ನವರ‌ ಹೋರಾಟದ ಜೀವನ ಎಲ್ಲರಿಗೂ ಪ್ರೇರಣೆಯಾಗಿರಲೆಂದು ತೀರ್ಮಾನಿಸಿದ್ದೆ. ಈ ಕಾರ್ಯಕ್ಕೆ ತಗುಲುವ ಎಲ್ಲ ಖರ್ಚು ವೆಚ್ಚಕ್ಕೆ ಸ್ವಂತ ಹಣ ನೀಡುವುದಾಗಿ ವಾಗ್ದಾನ ಮಾಡಿದ್ದೆ. ಇಂದು ಪುತ್ಥಳಿ ಪೂರ್ಣ ನಿರ್ಮಾಣ ಹಂತದಲ್ಲಿದೆ. ಅವರು ನಮ್ಮೊಂದಿಗಿಲ್ಲದಿದ್ದರೂ ರೈತರ ಹೋರಾಟಕ್ಕೆ ಚೇತನ, ಪ್ರೇರಕ ಶಕ್ತಿ. ರಾಜ್ಯದ ರೈತ ಚಳವಳಿಗೆ ರಮೇಶ ಗಡದನ್ನವರ ಅವರ ಕೊಡುಗೆಗಳು ಮಹತ್ವ ಸಾರುತ್ತಿವೆ” ಎಂದು ಅವರ ನಡೆ ನುಡಿಯ ಬಗ್ಗೆ ಸ್ವವಿವರವಾಗಿ ತಿಳಿಸಿದರು.

ಹಿರಿಯ ನ್ಯಾಯವಾದಿ, ಸಾಹಿತಿ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಕಾಶ ವಸ್ರ್ತದ ಮಾತನಾಡಿ, “ದಿ. ರಮೇಶ್ ಗಡದನ್ನವರ ಅವರು ಕರ್ನಾಟಕ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರದಲ್ಲೂ ರೈತರ ಹೋರಾಟದ ನೇತಾರರಾಗಿದ್ದರು. ಅವರ ಹೋರಾಟದ ಮಾದರಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತದೆ. ಅವರ ಹೆಸರು ರೈತರ ಹೋರಾಟಗಳ ಶಕ್ತಿಗೆ‌ ಸಮಾನಾರ್ಥವಾಗಿದೆ. ವಿವಿಧ ಜಿಲ್ಲೆಗಳಿಂದ ರೈತ ಮುಖಂಡರು ಜಮಾಯಿಸಿ ಅವರ ತತ್ವಾದರ್ಶ, ಮಾರ್ಗದರ್ಶನ, ನೆನಪುಗಳನ್ನು ಕಂಡಿದ್ದಾರೆ. ನಾನು ಅವರ ಒಡನಾಡಿಯಾಗಿ ಅತ್ಯಂತ ನಿಕಟವರ್ತಿಯಾಗಿ ಕಂಡಿದ್ದೇನೆ” ಎಂದು ಸ್ಮರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ವಿವಾದಾತ್ಮಕ ಹೇಳಿಕೆ ಹಿನ್ನೆಲೆ; ಸಂಘಪರಿವಾರದ ಮುಖಂಡ ಶರಣ್ ಪಂಪ್‌ವೆಲ್ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ

ಹಣಮಂತ ನಬಾಬ ಮಾತನಾಡಿ, “ರಮೇಶ್ ಗಡದ್ದನ್ನವರ ಅವರ ಪ್ರಭಾವವು ಅವರ‌ ಜೀವಿತಾವಧಿಯನ್ನು ಮೀರಿ ವಿಸ್ತರಿಸಿದೆ. ಇಂದು ನಡೆಯುತ್ತಿರುವ ರೈತರ ಹೋರಾಟದ ಹಿಂದಿನ ಶಕ್ತಿಯಾಗಿ ಅವರಿದ್ದಾರೆ. ಅವರ ಹೋರಾಟದ ಪರಂಪರೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕಾಗಿದೆ. ಅವರ ಕೊಡುಗೆಗಳನ್ನು ಸ್ಮರಿಸಲು, ಅವರ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ. ಅದರ ಎಲ್ಲ ವೆಚ್ಚಗಳನ್ನು ಸಚಿವ ಆರ್ ಬಿ ತಿಮ್ಮಾಪೂರ ಅವರು ವೈಯಕ್ತಿಕ ನಿಧಿಯಿಂದ ಭರಿಸುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಮೂರ್ತಿಯನ್ನು ನೋಡಲು ಸಚಿವರು ಖುದ್ದಾಗಿ ನಮ್ಮೊಂದಿಗೆ ಬಂದಿದ್ದರು. ಸಚಿವ ತಿಮ್ಮಾಪೂರ ಅವರು ರೈತರ ಮೇಲೆ ಕಾಳಜಿ ಮತ್ತು ಹೋರಾಟಗಾರರ ಮೇಲೆ ನಂಬಿಕೆ ವಿಶ್ವಾಸ ಇಟ್ಟುಕೊಂಡಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಮೈಬುಸಾಬ್ ಬಾಗವಾನ್, ಶಿರೋಳದ ಶಂಕರಾರೂಢ ಸ್ವಾಮೀಜಿ, ರತ್ನಕುಮಾರ್ ಅಡಾಲಟ್ಟಿ, ದುಂಡಪ್ಪ ಯರಗಟ್ಟಿ, ಮಹೇಶ್ ಪಾಟೀಲ್, ಕಲ್ಮೇಶ ಹನಗುಜಿ, ಸುಭಾಷ್ ಶಿರಬೂರ, ಚೆನ್ನಪ್ಪ ಪೂಜಾರಿ, ಈರಪ್ಪ ಹಂಚಿನಾಳ, ವೆಂಕಣ್ಣ  ಮಳಲಿ, ಎ ಜೆ ಪಾಟೀಲ ದುಂಡಪ್ಪ ಲಿಂಗರೆಡ್ಡಿ, ನಾಗೇಶ್ ಪೂಜಾರಿ ಸೇರಿದಂತೆ ರೈತ ಸಂಘದ ಪ್ರಮುಖರು ಇದ್ದರು.

ವರದಿ: ಗಣೇಶ ಮೈತ್ರಿ

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...