ದೇಶದ ಪ್ರತಿಯೊಂದು ಹಳ್ಳಿಯ ಬಡಜನರು ನಿರುದ್ಯೋಗಿಗಳಾಗದೆ ಆರ್ಥಿಕವಾಗಿ ಶಕ್ತರಾಗಿರಲು ಆಗಿನ ಸರ್ಕಾರದ ಪ್ರಧಾನಿ ಮನಮೋಹನ್ ಸಿಂಗ್ ಅವರು ಮನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದರು. ಆದರೆ ಕೇಂದ್ರದ ಮೋದಿ ಸರ್ಕಾರ ಮನರೇಗಾ ಕಾಯ್ದೆಯನ್ನು ತಿದ್ದುಪಡಿ ಮಾಡಿ ವಿಬಿ ಜಿ ರಾಮ್ ಜಿ ಎಂಬ ಹೊಸ ಯೋಜನೆ ಜಾರಿ ಮಾಡುವ ಮೂಲಕ ಮಹಾತ್ಮ ಗಾಂಧೀಜಿಯನ್ನು ಎರಡನೇ ಬಾರಿ ಹತ್ಯೆ ಮಾಡಿದೆ ಎಂದು ಬೀಳಗಿ ಶಾಸಕ ಜೆ ಟಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಸಮೀಪ ಹೊಲಗೇರಿ ಗ್ರಾಮದಲ್ಲಿ ನಡೆದ ಮನರೇಗಾ ಬಚಾವೋ ಸಂಗ್ರಾಮ ಪ್ರತಿಭಟನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
“ಕೇಂದ್ರದ ಬಿಜೆಪಿ ಸರ್ಕಾರ ಬಡವರ ಆರ್ಥಿಕ ಶಕ್ತಿಯನ್ನು ಕಸಿದುಕೊಳ್ಳುವ ಮೂಲಕ ದೇಶದಲ್ಲಿ ನಿರುದ್ಯೋಗ ಸಂಖ್ಯೆ ಹೆಚ್ಚಳ ಮಾಡಲು ಹೊರಟಿದೆ” ಎಂದು ಆರೋಪಿಸಿದರು.

“ಗ್ರಾಮೀಣ ಭಾಗದಲ್ಲಿ ದುಡಿಯುವ ಬಡ ವರ್ಗದ ಜನರ ಕೈಗಳನ್ನು ಕಸಿದುಕೊಳ್ಳುವ ಮೂಲಕ ಕೇಂದ್ರ ಸರ್ಕಾರ ಗಾಂಧೀಜಿಯವರ ಗ್ರಾಮಗಳ ಅಭಿವೃದ್ಧಿ ಹೊಂದಿದರೆ ದೇಶ ಅಭಿವೃದ್ಧಿಯಾಗುತ್ತದೆ ಎಂಬ ಕನಸನ್ನು ಕೇಂದ್ರ ಸರ್ಕಾರ ನಾಶ ಮಾಡಿದೆ. ತೆರಿಗೆ ವಂಚನೆ, ಐಟಿ ದಾಳಿ, ಇ.ಡಿ ದಾಳಿ ನಡೆಸುವ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಹತ್ತಿಕ್ಕುವ ಹುನ್ನಾರ ನಡೆಸಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕುಶಾಲನಗರ | ಸ್ವಾಮಿ ವಿವೇಕಾನಂದರ ಆದರ್ಶಗಳು ಯುವ ಜನಾಂಗಕ್ಕೆ ಸ್ಫೂರ್ತಿ: ಟಿ ಜಿ ಪ್ರೇಮ್ ಕುಮಾರ್
ಮನರೇಗಾ ಬಚಾವೋ ಸಂಗ್ರಾಮ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಭಾಗವಹಿಸಿ ದುಡಿಯುವ ಕೈಗಳಿಗೆ ಕೆಲಸ ಸಿಗುವವರೆಗೂ ಹೋರಾಟ ನಡೆಸೋಣ.
ಕುಮಾರ ಕಕರೆಡ್ಡಿ,ಅಶೋಕ ಕೊಪ್ಪದ, ಪರಶುರಾಮ ಎಂಡಿಗೇರಿ, ನಾರಾಯಣ ತಿಮ್ಮಾಪುರ, ರಮೇಶ ಯಡಹಳ್ಳಿ, ಲಚ್ಚಪ್ಪ ಅರೆಕೇರಿ, ಧರ್ಮಣ್ಣ ಭಗವತಿ, ಸವಿತಾ ನಾಗಪ್ಪನವರ, ಗೀತಾ ಅರಕೇರಿ, ರತ್ನವ್ವ ವಡ್ಡರ, ನಾಗವ್ವ ರೆಡ್ಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಪಕ್ಷದ ಕಾರ್ಯಕರ್ತರು ಇದ್ದರು.





