ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಶಾಲೆಯ ಮಕ್ಕಳ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಕಲ್ಲು ಎಸೆದು ಎಂದು ಆರೋಪಿಸಿ ಮೂವರು ಹಲ್ಲೆ ಮಾಡಿದ್ದರಿಂದ ಗಾಯಗೊಂಡಿದ್ದ ದಲಿತ ಸಮಾಜದ ಸುದೀಪ ಬಸವರಾಜ ಪಾಂಗೆ (19) ಎಂಬುವರು ಮೃತಪಟ್ಟಿದ್ದಾರೆ.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದದ ಗ್ರಾಮ ಪಂಚಾಯತಿ ಆವರಣದಲ್ಲಿ ಈಚೆಗೆ ಸರ್ಕಾರಿ ಕನ್ನಡ ಮಹಿಳಾ ಪ್ರಾಥಮಿಕ ಶಾಲೆಯ ಕಾರ್ಯಕ್ರಮ ಘಟನೆ ನಡೆದಿತ್ತು.
ಈ ಸಂಬಂಧ ವಿಜಯ ಸಾವಳಗಿ, ರಾಜು ಮಾಲಗಾರ, ಮಲ್ಲಿಕಾರ್ಜುನ ಮಾಳಿ ಅವರನ್ನು ಬಂಧಿಸಲಾಗಿದೆ. ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಿರುವುದು ಗೊತ್ತಾಗಿದೆ. ಘಟನಾ ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಹೊಸಪಡಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.





