ಬರುವ ಕೇಂದ್ರ ಬಜೆಟ್‌ನಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆರಿಗೆ ಗೌರವ ಧನ ಹೆಚ್ಚಳ ಮತ್ತು ಪಿಂಚಣಿ ಜಾರಿ ಮಾಡಲು ಒತ್ತಾಯಿಸಿ ಇಂದು ಬಾಗಲಕೋಟೆ ಲೋಕಸಭಾ ಸದಸ್ಯರಾದ ಪಿ ಸಿ ಗದ್ದಿಗೌಡರ್ ಅವರ ಮೂಲಕ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಂದಿನ ಬೆಲೆ ಏರಿಕೆ ದಿನಗಳಲ್ಲಿ ಸ್ಕೀಮ್ ಕಾರ್ಯಕರ್ತೆಯರಿಗೆ ಸಿಗುವ ಗೌರವಧನದಲ್ಲಿ ತಮ್ಮ ಕುಟುಂಬ ನಡೆಸುವುದು ಕಷ್ಟವಾಗಿದೆ. ಕಳೆದ ಅಧಿವೇಶನದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಜೆ ಪಿ ನಡ್ಡಾ ಅವರು ಆಶಾ ಕಾರ್ಯಕರ್ತೆಯರಿಗೆ ರೂ 1500 ಮತ್ತು ಕೆಲವು ಕಾಂಪೋನೇಟ್ ದರವನ್ನು ಹೆಚ್ಚಳ ಮಾಡಿ ಘೋಷಣೆ ಮಾಡಿದ್ದರು. ಆದರೆ ಈ ಹಣ ಇಲ್ಲಿಯವರಿಗೆ ಕಾರ್ಯಕರ್ತೆಯರ ಕೈ ಸೇರಿಲ್ಲ. ಇದನ್ನು ಆದಷ್ಟು ಬೇಗನೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು. ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದ ಶಿಪಾರಸಿನ ಪ್ರಕಾರ ರೂ 28000ಗಳ ಕನಿಷ್ಟ ವೇತನ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಪಿಂಚಣಿ ಜಾರಿಗೂಳಿಸಲು ಮಾನ್ಯ ಲೋಕಸಭಾ ಸದಸ್ಯರ ಮೂಲಕ ಮನವಿ ಪತ್ರ ಸಲ್ಲಿಸಿದರು.

ಇದನ್ನೂ ಓದಿ: ಬಾಗಲಕೋಟೆ | ರಾಷ್ಟ್ರ ನಿರ್ಮಾಣಕ್ಕೆ ಬಸವದಳ ಮಹತ್ವದ ಕೊಡುಗೆ ನೀಡಿದೆ: ಮಾತೆ ಗಂಗಾದೇವಿ
ಈ ನಿಯೋಗದಲ್ಲಿ ಎಐಯುಟಿಯುಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗೆ ಸಂಯೋಜನೆಗೂಂಡ, ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ ಸಿ ತೇಲಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಗೌರವಾಧ್ಯಕ್ಷೆ ಅಂಜನಾ ಕುಂಬಾರ ಮತ್ತು ಸೈನಾಜ ಜಂಗಿ, ಮೈತ್ರಾ ಹಿರೇಮಠ, ಕಾಶಿಬಾಯಿ ಯಾವಗಲ್, ಸುನಿತಾ ಜಂಬಗಿ, ಆರ್ ಹೆಚ್ ಮಿಸ್ಸಿ, ಸುರೇಖಾ ಕಾಳೆ, ವಿದ್ಯಾ ಸಪಡ್ಲಿ, ಕೆ ವೈ ಕಳಸನ್ನವರ, ಬಿ ಹೆಚ್ ಭಗವತಿ, ಆರ್ ಆರ್ ಗಿರಿಜಾ, ಎ ಕೆ ಗೌರಿ, ಎಸ್ ಆರ್ ನಾಟಕಕಾರ, ವೈ ಎಸ್ ಪುಜಾರಿ ಹಾಗೂ ಇನ್ನಿತರರು ಇದ್ದರು.





