ಮಹಾತ್ಮ ಗಾಂಧಿಜಿಯವರ ಅಹಿಂಸೆ, ಸತ್ಯ ಹಾಗೂ ತ್ಯಾಗದ ಮೌಲ್ಯಗಳು ಇಂದಿನ ಕಾಲಘಟ್ಟದಲ್ಲಿಯೂ ಪ್ರಸ್ತುತವಾಗಿವೆ. ಅವರ ತತ್ವಗಳು ಸಾಮಾಜಿಕ ನ್ಯಾಯವನ್ನು ಬಲಪಡಿಸುವಲ್ಲಿ ಮಾರ್ಗದರ್ಶಕವಾಗಿವೆ ಎಂದು ಬಾಗಲಕೋಟೆ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಹುಲ್ಲಪ್ಪ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಪುಣ್ಯ ಸ್ಮರಣಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಗಾಂಧಿಯವರ ಏಕತೆ, ಸಾಮರಸ್ಯದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಷ ಹದ್ಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಬಳ್ಳಾರಿ, ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ, ಭರತ ಈಟಿ, ರಮೇಶ ಬದ್ನೂರ, ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಾಜು ಮನ್ನಿಕೇರಿ, ಪ್ರಚಾರ ಸಮಿತಿಯ ಜಲ್ಲಾ ಸಂಯೋಜಕ ಶ್ರೀದರ ನೀಲನಾಯಕ, ರಮೇಶ ಸನದಿ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ನ್ಯಾಮಗೌಡ, ಮಂಜುಳಾ ಭುಸಾರೇ, ಗುಣವಂತಿ ನಿಡೋಣಿ, ಮುಮತಾಜ ಸುತಾರ, ಬಾಬು ಇಟಗಿ, ಫ್ರಭು ಹಳ್ಳೂರ, ಕಿಶೋರ ಸುರಪುರ, ಅಭಿಷೇಕ ತಳ್ಳಿಕೇರಿ, ಫಜಲ್ ಖಾಜಿ, ಶ್ರವಣ ಖಾತೆದಾರ, ಶೇಖಪ್ಪ ಜಗಲಿ, ಗಿರಿಮಲ್ಲಪ್ಪ ಪೂಜಾರಿ, ಫ್ರಭು ರುದ್ರಾಕ್ಷಿ ಹಾಗೂ ಇತರರು ಇದ್ದರು.
ಇದನ್ನೂ ಓದಿ: ಬಾಗಲಕೋಟೆ | ಭೀಮಾ ಕೋರೆಗಾಂವ್ 208ನೇ ವಿಜಯೋತ್ಸವ





