ಬಾಗೇಪಲ್ಲಿ : ಫೆ. 25\26 ರಂದು ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ 19 ನೇ ಜಿಲ್ಲಾ ಸಮ್ಮೇಳನ

Date:

ಬಾಗೇಪಲ್ಲಿ:-ಬಾಗೇಪಲ್ಲಿ ಪಟ್ಟಣದಲ್ಲಿ ಫೆಬ್ರವರಿ 25 ಮತ್ತು 26 ರಂದು ಕರ್ನಾಟಕ ರಾಜ್ಯ ಪ್ರಾಂತ್ಯ ರೈತ ಸಂಘದ 19 ನೇ ಚಿಕ್ಕಬಳ್ಳಾಪುರ ಜಿಲ್ಲಾ ಸಮ್ಮೇಳನ ನಡೆಯಲಿದೆ.

ರೈತರು ಕೃಷಿ ಕಾರ್ಮಿಕರು ಕೂಲಿ ಕಾರ್ಮಿಕರು ಮಹಿಳೆಯರು ಸಾರ್ವಜನಿಕರು ಹೆಚ್ಚಾಗಿ ಪಾಲ್ಗೊಂಡು ಯಶಸ್ವಿ ಮಾಡಬೇಕು ಎಂದು ರಾಜ್ಯ ಸಿಪಿಐಎಂ ರಾಜ್ಯ ಸದಸ್ಯರಾದ ಎಂ.ಪಿ.ಮುನಿ ವೆಂಕಟಪ್ಪ ಮನವಿ ಮಾಡಿದರು.

ಸಮ್ಮೇಳನವು ಪಕ್ಷದ ಆಂತರಿಕ ಸಂಘಟನೆ ಜಿಲ್ಲೆಯ ಪ್ರಮುಖ ಸಮಸ್ಯೆಗಳಾದ ಕೃಷಿ ನೀರಾವರಿ ಮತ್ತು ಕಾರ್ಮಿಕರ ಹಕ್ಕುಗಳು ಆಂದ್ರಪ್ರದೇಶದ ಕೃಷ್ಣಾ ನದಿ ನೀರು ಹಂಚಿಕೆ ಚಿಕ್ಕಬಳ್ಳಾಪುರ ಜಿಲ್ಲೆ ಗೆ ಶಾಶ್ವತ ನೀರಾವರಿ ಹೋರಾಟದ ಕುರಿತು ಚರ್ಚಿಸಿ ಮುಂದಿನ ಕಾರ್ಯಯೋಜನೆಗಳನ್ನು ರೂಪಿಸಲಿದೆ ಈ ಸಮ್ಮೇಳನದಲ್ಲಿ ಜಿಲ್ಲಾ ನಾಯಕರ ಆಯ್ಕೆ ಮತ್ತು ಜನಪರ ಹೋರಾಟಗಳ ತೀವ್ರತೆ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗುವುದು.

ಕಳೆದ ಮೂರು ವರ್ಷಗಳ ಸಂಘಟನಾ ವರದಿ ಮಂಡನೆ ಚರ್ಚೆ ಮತ್ತು ನೂತನ ಜಿಲ್ಲಾ ಸಮಿತಿಯ ಆಯ್ಕೆ ಜಿಲ್ಲೆಯಲ್ಲಿನ ಕೃಷಿ ಬಿಕ್ಕಟ್ಟು ವಿದ್ಯುತ್ ಖಾಸಗೀಕರಣದ ಬಗೆಗಿನ ಪ್ರತಿಭಟನೆ ಸ್ಲಂ ನಿವಾಸಿಗಳ ಸಮಸ್ಯೆಗಳು ಮತ್ತು ಅಸಂಘಟಿತ ಕಾರ್ಮಿಕರ ಸಂಘಟನೆ ಸಮ್ಮೇಳನದ ಭಾಗವಾಗಿ ಬೃಹತ್ ರ್ಯಾಲಿ ಅಥವಾ ಸಾರ್ವಜನಿಕ ಸಭೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದರು ಇದು ಪಕ್ಷದ ಶಕ್ತಿ ಪ್ರದರ್ಶನವಾಗಿರಲಿದೆ.

ಈ ಸಮ್ಮೇಳನವು ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಸಿಪಿಐ(ಎಂ) ನೇತೃತ್ವದ ಜನಪರ ಚಳುವಳಿಗಳಿಗೆ ಮಾರ್ಗದರ್ಶನ ನೀಡಲಿದೆ.
ಸಿಪಿಐಎಂ ಪಕ್ಷದ ತಾಲ್ಲೂಕು ಕಾರ್ಯದರ್ಶಿ ರಘುರಾಮ ರೆಡ್ಡಿ ಮಾತನಾಡಿ ಎಪಿಎಂಸಿ ಮಾರುಕಟ್ಟೆ ರಕ್ಷಣೆ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನಿಗದಿ ಮತ್ತು ಸಾಲ ಮನ್ನಾ ಕಾರ್ಪೊರೇಟ್ ವಿರೋಧಿ ನಿಲುವು ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳ ಹೂಡಿಕೆ ಮತ್ತು ಹಸ್ತಕ್ಷೇಪವನ್ನು ತಡೆಯುವುದು. ಭೂಮಿ ಉಳಿವಿಗಾಗಿ ಹೋರಾಟ ಕೈಗಾರಿಕೆಗಳು ಅಥವಾ ಇತರೆ ಉದ್ದೇಶಗಳಿಗಾಗಿ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವುದರ ವಿರುದ್ಧ ನಿರಂತರ ಹೋರಾಟ ರೈತ ಸಂಘಟನೆಗಳು ಬೆಳೆ ನಾಶ ನೀರಿನ ಕೊರತೆ ಮತ್ತು ಅಸಮರ್ಪಕ ಬೆಲೆಯ ವಿರುದ್ಧ ರಾಜ್ಯ ಮಟ್ಟದಲ್ಲೂ ಹೋರಾಟಗಳನ್ನು ತೀವ್ರಗೊಳಿಸಿವೆ ಈ ಹೋರಾಟಗಳು ಕೇವಲ ಬೆಳೆಯ ಉಳಿವಲ್ಲ ಆಹಾರ ಭದ್ರತೆ ಮತ್ತು ರೈತರ ಗೌರವಯುತ ಬದುಕಿಗಾಗಿ ನಡೆಯುತ್ತಿವೆ ಎಂದು ಹೇಳಿದರು.

ಸಂಘಟನಾ ಕಾರ್ಯದರ್ಶಿ ಚನ್ನರಾಯಪ್ಪ ಮಾತನಾಡಿ ಈ ಸಮ್ಮೇಳನದ ಮೊದಲ ದಿನ 25-02-2026 ರಂದು ತಾಲ್ಲೂಕು ಪಂಚಾಯತಿ ಮುಂಭಾಗದಲ್ಲಿ ಬೃಹತ್ ಬಹಿರಂಗ ಸಭೆ ಇದ್ದು ಬಹಿರಂಗ ಸಭೆಗೆ ಕರ್ನಾಟಕ ಪ್ರಾಂತ್ಯ ರೈತರ ಸಂಘದ ರಾಜ್ಯ ಮುಖಂಡರು ಹಾಗೂ ನಾಯಕರು ಆಗಮಿಸಲಿದ್ದಾರೆ ಎಂದು ಹೇಳಿದರು.

ಇದನ್ನು ಓದಿದ್ದೀರಾ..? ಕಾರ್ಮಿಕರ ವಿರೋಧಿ ನೀತಿಗಳ ವಿರುದ್ಧ ಬೃಹತ್ ಪ್ರತಿಭಟನೆ

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಟಿ.ಲಕ್ಷ್ಮಣ ರೆಡ್ಡಿ,ಪ್ರಧಾನ ಕಾರ್ಯದರ್ಶಿ ಡಿ.ಟಿ.ಮುನಿ ಸ್ವಾಮಿ,ಖಜಾಂಚಿ ದೇವಿಕುಂಟೆ ಶ್ರೀನಿವಾಸ್, ವಾಲ್ಮೀಕಿ ಅಶ್ವತ್ಥಪ್ಪ, ಜಿ.ಕೃಷ್ಣಪ್ಪ, ನಾಗರಾಜು, ಮುನಿಯಪ್ಪ,ಹಾಗೂ ಇತರೆ ಮುಖಂಡರು ಹಾಜರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...

ಯುಪಿಎಸ್ಸಿ ರ‍್ಯಾಂಕ್‌ ವಿಜೇತ ವರುಣ್ ಗೌಡಗೆ ಸನ್ಮಾನ

ಕೋಲಾರ: ಯುಪಿಎಸ್ಸಿ ಪರೀಕ್ಷೆಯಲ್ಲಿ 462 ನೇ ರ‍್ಯಾಂಕ್‌ ಪಡದ ತಾಲೂಕಿನ ತ್ಯಾವನಹಳ್ಳಿ...