ಜನಪ್ರತಿನಿಧಿಯಾದವರಿಗೆ ಜನಪರ ಕಾಳಜಿ,ಸಾಮಾಜಿಕ ಜವಾಬ್ದಾರಿ ಇದ್ದರೆ ಕಲ್ಲು-ಮುಳ್ಳುಗಳ ದಾರಿಯೂ ಹೂವಿನ ಹಾದಿಯಾಗುತ್ತದೆ. ಯೋಜನೆಯ ಗುರಿಸಾಧನೆಯಾಗಬೇಕೆದ್ದರೆ ಅದರ ಮುಂದಿರುವ ಸವಾಲುಗಳು ಗೌಣ ಎಂಬುದನ್ನು ಸಾಭೀತುಪಡಿಸುವಂತೆ ದಾರಿಯೇ ಇಲ್ಲದ ಗುಡ್ಡಗಾಡು ಪ್ರದೇಶದಲ್ಲಿ ಅಧಿಕಾರಿಗಳು ಮತ್ತು ಮುಖಂಡರೊಂದಿಗೆ ಸುಮಾರು 4-5 ಕಿಮೀ ದೂರ ಕಲ್ಲು-ಮುಳ್ಳುಗಳ ಹಾದಿಯಲ್ಲಿ ಸಾಗಿ ಸ್ಥಳ ಪರಿಶೀಲನೆ ನಡೆಸಿದ ಆಸಕ್ತಿಕರ ಸನ್ನಿವೇಶ ಕಂಡುಬಂದಿತು.
ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಮುದ್ದಲಪಲ್ಲಿ-ಮಾಕಿರೆಡ್ಡಿಪಲ್ಲಿ ಸಮೀಪದಲ್ಲಿರುವ ಬೆಟ್ಟ-
ಗುಡ್ಡದ ಪ್ರದೇಶದಲ್ಲಿ ಸುಮಾರು 5 ಕೋಟಿ ವೆಚ್ಚದ ಕೋಮಟೋಳ್ಳ ಕುಂಟ ಪ್ರದೇಶದಲ್ಲಿ ಡ್ಯಾಂ ನಿರ್ಮಾಣದ
ಮಹತ್ವಾಕಾಂಕ್ಷಿ ಯೋಜನೆಯನ್ನು ಅನುಷ್ಠಾನಗೊಳಿಸಲು ಶಾಸಕ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಅಧಿಕಾರಿಗಳ ತಂಡದೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.
ಈ ಸುತ್ತಾಟದ ಉದ್ದೇಶ, ಯೋಜಿತ ಡ್ಯಾಂ ನಿರ್ಮಾಣಕ್ಕೆ ಆಯ್ಕೆಯಾಗಿರುವ ಸ್ಥಳದ ಭೌಗೋಳಿಕ ಸ್ಥಿತಿ, ಭೂಸಂರಚನೆ ಹಾಗೂ ಪರಿಸರದ ಮೇಲೆ ಬೀರುವ ಪರಿಣಾಮಗಳನ್ನು ನೇರವಾಗಿ ಅವಲೋಕಿಸುವುದು ಆಗಿತ್ತು. ಬೆಟ್ಟಗುಡ್ಡಗಳಿಂದ ಸುತ್ತುವರಿದ ಪ್ರದೇಶದಲ್ಲಿ ಕಲ್ಲಿನ ಗುಡ್ಡಗಳು, ಆಳವಾದ ಕಂದಕಗಳು, ಮುಳ್ಳಿನ ಗಿಡ–ಜುಂಗಲುಗಳಿAದ ಕೂಡಿದ ಕಠಿಣ ನೆಲವಿತ್ತು. ಈ
ಪ್ರದೇಶದಲ್ಲಿ ಭದ್ರವಾದ ಅಡಿಪಾಯಕ್ಕೆ ಸೂಕ್ತವಾದ ಕಲ್ಲಿನ ಮಿಶ್ರಣ, ಮಣ್ಣು, ಜಲಧಾರೆಯ ದಿಕ್ಕು, ಮಳೆಯ
ನೀರಿನ ಸಂಗ್ರಹಣ ಸಾಮರ್ಥ್ಯ ಹಾಗೂ ಡ್ಯಾಂ ಗೋಡೆಯ ಎತ್ತರ–ಅಗಲ ನಿಗದಿಗೆ ಬೇಕಾದ ಪ್ರಾಥಮಿಕ ತಾಂತ್ರಿಕ
ಅಂಕಿಅಂಶಗಳನ್ನು ಸಣ್ಣ ನೀರಾವರಿ ಇಲಾಖೆ ಎಇಇ ಸುನಿಲ್ ಶಾಸಕರಿಗೆ ವಿವರಿಸಿದರು.
ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಅವರು ಅಧಿಕಾರಿಗಳೊಂದಿಗೆ ತಾಂತ್ರಿಕತೆ ಎಂಬ
ಧೋರಣಿಯಲ್ಲಿ ಯೋಜನೆಯನ್ನು ರೂಪಿಸಬೇಕೆಂದು ಸೂಚಿಸಿದರು. ಡ್ಯಾಂ ನಿರ್ಮಾಣದಿಂದ ಸಮೀಪದ ಗ್ರಾಮಗಳಿಗೆ
ಸಿಗುವ ಕುಡಿಯುವ ನೀರಿನ ಭದ್ರತೆ, ಸಮಗ್ರ ಪ್ರಗತಿ ನಕ್ಷೆ ಸಿದ್ಧಪಡಿಸುವ ಜೊತೆಗೆ ಅರಣ್ಯ ಪ್ರದೇಶ, ವನ್ಯಜೀವಿ ಸಂರಕ್ಷಿತ ವಲಯಗಳಿಗೆ ಹಾನಿಯಾಗದಂತೆ ಪರಿಸರ ಅಧ್ಯಯನ ವರದಿ ಸಿದ್ಧಪಡಿಸಿ ಮುಂದಿನ ಹಂತದ ಅನುಮೋದನೆ ಪಡೆಯಬೇಕೆಂದು ಡ್ಯಾಂ ನಿರ್ಮಾಣಕ್ಕೆ ಸ್ಥಳೀಯರ ಭೂಮಿ ಅಗತ್ಯಬಿದ್ದರೆ ಅವರ ಮನವೊಲಿಸುವುದರ ಜೊತೆಗೆ ಪರ್ಯಾಯವಾಗಿ ಭೂಮಿ
ನೀಡುವುದಾಗಿ ತಿಳಿಸಿದರು.
ಪ್ರಾಥಮಿಕ ಅಂದಾಜಿನಲ್ಲಿ ಡ್ಯಾಂ ಅಡಿಪಾಯ, ಮುಖ್ಯ ಗೋಡೆ, ನೀರಿನ ಒಳಹೊಕ್ಕು ನಿರ್ಗಮನ ಕಾಲುವೆಗಳು, ರಸ್ತೆ ಸಂಪರ್ಕ ಮತ್ತಿತರ ಕಾಮಗಾರಿಗಳು ಒಳಗೊಂಡಂತೆ 5 ಕೋಟಿ ರೂಪಾಯಿಗಳ ವೆಚ್ಚದ ಪ್ರಾಥಮಿಕ ಯೋಜನೆ ರೂಪಿಸಲಾಗಿದೆ. ಗುಡ್ಡ ಗಾಡು ಪ್ರದೇಶವಾಗಿರುವುದರಿಂದ ಕಲ್ಲು ತೆಗೆಯುವುದು, ಸಮೀಕರಣ, ತಾಂತ್ರಿಕ ಯಂತ್ರೋಪಕರಣಗಳ ಸಾಗಣೆ ಮುಂತಾದ ಕಾಮಗಾರಿಗಳಿಂದ ನಿರ್ಮಾಣ ವೆಚ್ಚ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯನ್ನು ಅಧಿಕಾರಿಗಳು ಪ್ರಸ್ತಾಪಿಸಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನ ಪಡೆಯುವ ಹಾಗು ಯೋಜನೆಯಿಂದ ಯಾರಾದರೂ ಭೂಮಿ ಕಳೆದುಕೊಳ್ಳಬೇಕಾದ ಪರಿಸ್ಥಿತಿ ಬಂದರೆ, ಕಾನೂನುಬದ್ಧ ಪರಿಹಾರ ಒದಗಿಸುವ ಮತ್ತು ಸದರಿ ಯೋಜನೆಯ ಮೂಲಕ ದೇವರಗುಡಿಪಲ್ಲಿ ಗ್ರಾಪಂ
ವ್ಯಾಪ್ತಿಯ ಜನತೆಗೆ ಕುಡಿಯುವ ನೀರು ಕೊಡುವ ಮತ್ತು 3 ತಿಂಗಳಲ್ಲಿ ಡ್ಯಾಂ ನಿರ್ಮಾಣದ ಕಾಮಗಾರಿಯನ್ನು ಪ್ರಾರಂಭಿಸುವ ವಿಶ್ವಾಸವನ್ನು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸುದ್ದಿಗಾರರೊಂದಿಗೆ ವ್ಯಕ್ತಪಡಿಸಿದರು.
ಇದನ್ನು ಓದಿದ್ದೀರಾ..?ಗಂಗಾ ಕಲ್ಯಾಣ ಯೋಜನೆಯಲ್ಲಿ ರೈತರಿಗೆ ಪಂಪ್ ಮೋಟಾರಗಳ ವಿತರಣೆ
ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಪಿ. ಮಂಜುನಾಥರೆಡ್ಡಿ, ಮಲ್ಲಿಕಾರ್ಜುನರೆಡ್ಡಿ, ವಿಷ್ಣುವರ್ಧನರೆಡ್ಡಿ, ಸಣ್ಣ ನೀರಾವರಿಇಲಾಖೆ ಎಇಇ ಸುನಿಲ್. ರವೆನ್ಯೂ ಇನ್ಸ್ಪೆಕ್ಟರ್ ಪ್ರಶಾಂತ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಂಕರಪ್ಪ, ಈಶ್ವರಪ್ಪ, ತಿಪ್ಪನ್ನ, ವೆಂಕಟೇಶ್, ವೆಂಕಟರಾಮಪ್ಪ, ನಾಗಿರೆಡ್ಡಿ, ಆದಿ, ಮೋಪೀರಪ್ಪ, ಈಶ್ವರ ಮತ್ತಿತರರು ಉಪಸ್ಥಿತರಿದ್ದರು.
ಬಾಗೇಪಲ್ಲಿ | ಡ್ಯಾಂ ನಿರ್ಮಾಣಕ್ಕಾಗಿ ಸ್ಥಳಪರಿಶೀಲನೆ; ಬೆಟ್ಟ-ಗುಡ್ಡಗಳಲ್ಲಿ ಶಾಸಕ ಸುಬ್ಬಾರೆಡ್ಡಿ ಸುತ್ತಾಟ
ಪೋಸ್ಟ್ ಹಂಚಿಕೊಳ್ಳಿ:




