ಕೋಲಾರ: ಕಳೆದ ಕೆಡಿಪಿ ಸಭೆಯ ತೀರ್ಮಾನದಂತೆ ಜಂಟಿ ಸರ್ವೆ ಮುಗಿದು ವರದಿ ಬರುವ ತನಕ ಅರಣ್ಯ ಇಲಾಖೆಯು ಯಾವುದೇ ಕಾರಣಕ್ಕೂ ರೈತರಿಗೆ ತೊಂದರೆ ಕೊಡಬಾರದು ಎಂಬ ಆದೇಶವಿದೆ ತೊಂದರೆ ಕೊಟ್ಟವರ ವಿರುದ್ದ ಹಾಗೂ ಮುಳಬಾಗಿಲಿನಲ್ಲಿ ಮನೆಯನ್ನು ಕೆಡವಿ ಹಾಕಿದ ಅರಣ್ಯ ಅಧಿಕಾರಿಗಳ ವಿರುದ್ಧ ಕೂಡಲೇ ಎಫ್ ಐ ಆರ್ ದಾಖಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಸೂಚನೆ ನೀಡಿದರು.
ನಗರದ ಹೊರವಲಯದ ಜಿಲ್ಲಾಧಿಕಾರಿ ಕಛೇರಿ ಬಳಿ ಶುಕ್ರವಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ರೈತ ಸಂಘಟನೆಗಳು ಹಾಗೂ ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಅವರು ರೈತರಿಗೆ ವಿನಾಕಾರಣ ತೊಂದರೆ ಕೊಟ್ಟಿದ್ದಾರೆ ಜಿಲ್ಲಾಧಿಕಾರಿ ಆದೇಶಕ್ಕೂ ಬೆಲೆ ಇಲ್ಲವಾಗಿದೆ ಎಂದು ರೈತರು ವರದಿ ಮಾಡಿದರು ಕೂಡಲೇ ಜಿಲ್ಲೆಯ ರೈತರ ಮೇಲೆ ದಾಖಲಾಗಿರುವ ಎಫ್ಐಆರ್ ಅನ್ನು ಬಿ ರಿಪೋರ್ಟ ಹಾಕಿ ಮುಕ್ತಾಯ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರೈತರ ಸರ್ಕಾರಿ ಗೋಮಾಳ ಜಮೀನುಗಳಲ್ಲಿ ಅರಣ್ಯ ಇಲಾಖೆಯವರ ಕೆಲಸ ಏನು ಎಂದು ಉಸ್ತುವಾರಿ ಸಚಿವರನ್ನು ರೈತರು ಪ್ರಶ್ನೆ ಮಾಡಿದರು ಜಂಟಿ ಸರ್ವೆ ಸಮೀಕ್ಷೆ ಮುಗಿದು ವರದಿಯನ್ನು ಕೂಡಲೇ ಬಿಡುಗಡೆ ಮಾಡಬೇಕು ಅರಣ್ಯ ಇಲಾಖೆಯ ಒಂದು ಇಂಚು ಅರಣ್ಯ ಜಮೀನು ಬೇಡ ಆದರೆ ರೈತರ ಸರ್ಕಾರಿ ಗೋಮಾಳ ಜಮೀನು ಏಕೆ ಬೇಕು ಅನ್ನದಾತರ ಜಮೀನುಗಳನ್ನು ದೌರ್ಜನ್ಯದಿಂದ ಅವರ ಬೆಳೆಗಳನ್ನು ಏಕೆ ನಾಶಪಡಿಸುತ್ತಿದ್ದಾರೆ ಇವರ ಮೇಲೆ ಕಾನೂನು ಕ್ರಮ ಆಗಬೇಕು, ಇವರು ಯಾವುದೇ ಸರ್ಕಾರ ಆದೇಶಗಳನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳ ಆದೇಶಗಳನ್ನು ಧಿಕ್ಕರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನು ಓದಿದ್ದೀರಾ..? ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟಕ್ಕೆ ಬೈರತಿ ಸುರೇಶ್ ಚಾಲನೆ
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಸಿಪಿಎಂ ಗೋಪಾಲ್, ಆರ್.ಶ್ರೀನಿವಾಸನ್, ಗಾಂಧಿನಗರ ನಾರಾಯಣಸ್ವಾಮಿ, ಟಿ.ಎಂ ವೆಂಕಟೇಶ್, ಪಾತಕೋಟೆ ನವೀನ್ ಕುಮಾರ್, ಹರಟಿ ಪ್ರಕಾಶ್, ಡಾ.ಗೋವಿಂದಪ್ಪ, ವೆಂಕಟರವಣಪ್ಪ, ಭಟ್ರಹಳ್ಳಿ ಮಂಜುನಾಥ್, ಚಲಪತಿ, ದರ್ಶನ್, ಹಾಗೂ ರೈತರು ಉಪಸ್ಥಿತರಿದ್ದರು.





