ಬೆಂಗಳೂರು | ಎಪಿಸಿಆರ್ ಕರ್ನಾಟಕ ಚಾಪ್ಟರ್; ರಾಜ್ಯಾಧ್ಯಕ್ಷರಾಗಿ ಖ್ಯಾತ ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಆಯ್ಕೆ

Date:

ಎಪಿಸಿಆರ್ ಕರ್ನಾಟಕ ಚಾಪ್ಟರ್ ನೂತನ ಅಧ್ಯಕ್ಷರಾಗಿ ವಕೀಲರು, ಖ್ಯಾತ ಸಾಮಾಜಿಕ ಕಾರ್ಯಕರ್ತ ಎಂ ಎಚ್ ಸುಧೀರ್ ಕುಮಾರ್ ಮುರೊಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ.

ಬೆಂಗಳೂರು ನಗರದ ಬ್ಯಾರೀಸ್ ಅಸೋಸಿಯೇಷನ್‌ನ ಭವನದಲ್ಲಿ ಭಾನುವಾರ ನಡೆದ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಫಾರ್ ಸಿವಿಲ್ ರೈಟ್ಸ್ ರಾಜ್ಯ ಕಾರ್ಯಕಾರಿ ಸಭೆಯಲ್ಲಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಹೈಕೋರ್ಟ್ ವಕೀಲೆ ಅಖಿಲಾ ಹಾಗೂ ಮಾಜಿ ಐಜಿಪಿ ಸೈಯದ್ ಉಲ್ಫತ್ ಹುಸೇನ್ ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಕರ್ನಾಟಕ ಹೈಕೋರ್ಟ್ ವಕೀಲ ಮೊಹಮ್ಮದ್ ನಿಯಾಜ್ ಎಸ್ ಪ್ರಧಾನ ಕಾರ್ಯದರ್ಶಿಯಾಗಿ, ಸಾಮಾಜಿಕ ಕಾರ್ಯಕರ್ತ ಹುಸೇನ್ ಕೋಡಿಬೆಂಗ್ರೆ ಕಾರ್ಯದರ್ಶಿಯಾಗಿ ಆಯ್ಕೆಗೊಂಡರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...
ಖ್ಯಾತ ವಕೀಲ ಸುಧೀರ್ ಕುಮಾರ್ ಮುರೊಳ್ಳಿ

ಸಾಮಾಜಿಕ ಕಾರ್ಯಕರ್ತ ಜೀಶನ್ ಆಕಿಲ್ ಸಿದ್ದಿಕಿ, ವಕೀಲರಾದ ಶಜೀಹಾ ಪಿ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಹೈಕೋರ್ಟ್‌ ವಕೀಲ ಅಬ್ದುಲ್ ಸಲಾಂ ಎನ್ ಕೆ ಖಜಾಂಚಿಯಾಗಿ ಆಯ್ಕೆಗೊಂಡರು.

ಹದಿನಾರು ಮಂದಿಯನ್ನು ರಾಜ್ಯ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಗಿದ್ದು, ಅವರ ಹೆಸರುಗಳು ಇಂತಿವೆ.

  1. ಮೊಹಮ್ಮದ್ ಖಾನ್ ಪಠಾಣ್ – ನಿವೃತ್ತ ಜಿಲ್ಲಾ ನ್ಯಾಯಾಧೀಶರು
  2. ಶ್ರೀ ಬಿ ಟಿ ವೆಂಕಟೇಶ್ – ಹಿರಿಯ ವಕೀಲರು, ಮಾಜಿ ರಾಜ್ಯ ಸಾರ್ವಜನಿಕ ಅಭಿಯೋಜಕರು, ರೀಚ್ ಲಾ, ಬೆಂಗಳೂರು
  3. ಜೆರಾಲ್ಡ್ ಡಿ ಸೋಜಾ – ನಿರ್ದೇಶಕರು, ಸೇಂಟ್ ಜೋಸೆಫ್ ಕಾನೂನು ಕಾಲೇಜು, ಬೆಂಗಳೂರು
  4. ಮಾವಳ್ಳಿ ಶಂಕರ್ – ರಾಜ್ಯ ಸಂಚಾಲಕರು, ದಲಿತ ಸಂಘರ್ಷ ಸಮಿತಿ
  5. ಉಸ್ಮಾನ್ ಪಿ – ವಕೀಲರು, ಕರ್ನಾಟಕ ಹೈಕೋರ್ಟ್, ಉಸ್ಮಾನ್ ಕಾನೂನು ಕೊಠಡಿಗಳು, ಬೆಂಗಳೂರು
  6. ಅಕ್ಮಲ್ ರಜ್ವಿ – ವಕೀಲರು, ಹೈಕೋರ್ಟ್ ಬೆಂಗಳೂರು
  7. ಮೊಹಮ್ಮದ್ ಕುಂಞಿ – ನಿರ್ದೇಶಕರು, ಶಾಂತಿ ಪ್ರಕಾಶನ, ಮಂಗಳೂರು
  8. ಮೆಹಾದಿ ಕಲೀಂ – ಕಾರ್ಯಕರ್ತ, ಬೆಂಗಳೂರು
  9. ಮೊಹಮ್ಮದ್ ಎ.ಜಿ.ಕೈಸರ್ – ನಿವೃತ್ತ ಡಿಎಸ್ಪಿ, ಎನ್ಐಎ, ಗುಲ್ಬರ್ಗಾ
  10. ಹರ್ಷಕುಮಾರ್ ಕುಗ್ವೆ – ಪ್ರಧಾನ ಸಂಪಾದಕರು, ಕನ್ನಡ ಪ್ಲಾನೆಟ್
  11. ಮಲ್ಲಿಗೆ – ಸಾಮಾಜಿಕ ಕಾರ್ಯಕರ್ತ, ಬೆಂಗಳೂರು
  12. ಶೇಖ್ ಶಫಿ ಅಹಮದ್ – RTI ಕಾರ್ಯಕರ್ತ, ಕಲ್ಬುರ್ಗಿ
  13. ಅಫ್ವಾನ್ ಬಿ – ವಕೀಲರು, ಉಡುಪಿ
  14. ಮುಷ್ತಾಕ್ ಅಹಮದ್ – ವಕೀಲರು, ಧಾರವಾಡ
  15. ಜಸ್ಬೀರ್ ಸಿಂಗ್ ಧೋಬಿ – ಅಧ್ಯಕ್ಷರು, ಶ್ರೀ ಗುರು ಸಿಂಗ್ ಸಭಾ, ಬೆಂಗಳೂರು
  16. ಸರ್ದಾರ್ ಜರ್ನೈಲ್ ಸಿಂಗ್ – ಕಾರ್ಯದರ್ಶಿ, ಶ್ರೀ ಗುರು ಸಿಂಗ್ ಸಭಾ, ಬೆಂಗಳೂರು

ರಾಷ್ಟ್ರೀಯ ಉಪಾಧ್ಯಕ್ಷ ಪಿ ಉಸ್ಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಾರ್ಯದರ್ಶಿ ನದೀಮ್ ಖಾನ್ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...