ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2025-26ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ನೋಂದಣಿಗೆ ಡಿಸೆಂಬರ್ 15 ಕೊನೆಯ ದಿನ. ಇನ್ನೂ ನೋಂದಣಿಯಾಗದಿರುವ ರೈತರು ಆದಷ್ಟು ಬೇಗ ಹತ್ತಿರದ ಖರೀದಿ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
ಈಗಾಗಲೇ ರಾಗಿ ಬೆಳೆದಿರುವ ರೈತರಿಂದ ನಿಯಮಾನುಸಾರ ಅಗತ್ಯ ದಾಖಲೆ ಪಡೆದುಕೊಂಡು ನೋಂದಣಿ ಆರಂಭಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಕೇಂದ್ರೀಯ ವಿವಿ ಸಾಹಿತ್ಯಿಕವಾಗಿ ಅದೆಷ್ಟು ದಿವಾಳಿಯಾಗಿದೆ: ಸಾಹಿತಿಗಳ ಆಕ್ರೋಶ
ಖರೀದಿ ಕೇಂದ್ರಗಳ ಪಟ್ಟಿ
ದೊಡ್ಡಬಳ್ಳಾಪುರ ತಾಲೂಕು: ಎಪಿಎಂಸಿ ಯಾರ್ಡ್ ರೈತ ಭವನ ಕೇಂದ್ರ, ಸಾಸಲು ಹೋಬಳಿಯ ರೈತ ಸಂಪರ್ಕ ಕೇಂದ್ರ, ದೇವನಹಳ್ಳಿ ತಾಲೂಕು: ಕುರುಬರ ದೊಡ್ಡಿ ರಸ್ತೆಯಲ್ಲಿರುವ ಕೆಎಫ್‌ಸಿಎಸ್‌ಸಿ, ಎಂಡಿಎಂ ಗೋದಾಮು, ನೆಲಮಂಗಲ ತಾಲೂಕು: ಕೆಂಪಲಿಂಗನಹಳ್ಳಿ ಕ್ರಾಸ್(ಕುಣಿಗಲ್ ರಸ್ತೆ)ನಲ್ಲಿರುವ ಕೆಎಫ್‌ಸಿಎಸ್‌ಸಿ ಎಂಡಿಎಂ ಗೋದಾಮು, ತ್ಯಾಮಗೊಂಡ್ಲು ಹೋಬಳಿ ವಿಎಸ್‌ಎಸ್‌ಎನ್ ಕಳಲುಘಟ್ಟ ರೈತ ಕೇಂದ್ರ, ಸೋಂಪುರ ಹೋಬಳಿಯ ವಿಎಸ್‌ಎಸ್‌ಎನ್ ರೈತ ಕೇಂದ್ರ ಹಾಗೂ ಹೊಸಕೋಟೆ ತಾಲೂಕು: ವೀರಭದ್ರೇಶ್ವರ ರೈಸ್ ಮಿಲ್ ಕಾಂಪೌಂಡ್ ಬಳಿಯ ಕೆಎಫ್‌ಸಿಎಸ್‌ಸಿ ಎಂಡಿಎಂ ಗೋದಾಮು





