ಶಿವಮೊಗ್ಗದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣಕ್ಕೆ ಮಲೆನಾಡ ಭಾಗದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕ ಅಭಿವೃದ್ದಿಗೆ ನಾಂದಿ ಹಾಡಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ಬೆಂಗಳೂರು- ಶಿವಮೊಗ್ಗ ನಡುವೆ ವಿಮಾನಯಾನ ಸಂಚಾರ ಆರಂಭದ ಮೊದಲ ವಿಮಾನದಲ್ಲಿ ಪ್ರಯಾಣಿಸಲು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮದವರ ಜತೆ ಮಾತನಾಡಿದರು.
“ರಾಷ್ಟ್ರಕವಿ ಕುವೆಂಪು ಅವರ ನಾಮಕರಣ ಮಾಡಿರುವ ಶಿವಮೊಗ್ಗ ನಿಲ್ದಾಣವನ್ನು ಅಂದಾಜು ₹450 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ವಿಮಾನ ನಿಲ್ದಾಣಕ್ಕೆ ಗುರುವಾರ ಬೆಳಗ್ಗೆ ಪ್ರಥಮ ವಿಮಾನ ಹಾರಾಟ ನಡೆಯಲಿದೆ” ಎಂದು ಹೇಳಿದರು.
ಬೆಂಗಳೂರು- ಶಿವಮೊಗ್ಗ ನಡುವೆ ವಿಮಾನಯಾನ ಸಂಚಾರ ಆರಂಭದ ಮೊದಲ ವಿಮಾನದಲ್ಲಿ ಪ್ರಯಾಣಿಸಲು ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಇಂದು ಆಗಮಿಸಿದ ವೇಳೆ ಎದುರಾದ ಮಾಧ್ಯಮದವರ ಜತೆ ಮಾತನಾಡಿದೆ.
— M B Patil (@MBPatil) August 31, 2023
"ಶಿವಮೊಗ್ಗದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣಕ್ಕೆ ಮಲೆನಾಡ ಭಾಗದಲ್ಲಿ ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕ ಅಭಿವೃದ್ದಿಗೆ ನಾಂದಿ… pic.twitter.com/0yuSmfbnce
ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...
ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...
ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಎಲ್ಲದರಲ್ಲೂ ಗುಣಾತ್ಮಕತೆ ಕಾಣುವ ಮನೋಭಾವ ಬೆಳೆಯಬೇಕು: ಪ್ರೊ. ವಿಕ್ರಮ ವಿಸಾಜಿ
“ಮುಂಬರುವ ದಿನಗಳಲ್ಲಿ ತಿರುಪತಿ, ಗೋವಾ, ಚೆನ್ನೈ ಸೇರಿದಂತೆ ಅನೇಕ ಭಾಗಗಳಿಗೆ ವಿಮಾನ ಹಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು” ಎಂದು ತಿಳಿಸಿದರು.





