ಬೆಂಗಳೂರು | ಹೆಜ್ಜೆ ಥಿಯೇಟರ್‌ ತಂಡದಿಂದ ಮಾ.6ರಂದು ʼಸುಣ್ಣದ ಸುತ್ತುʼ ನಾಟಕ ಪ್ರದರ್ಶನ

Date:

ಹೆಜ್ಜೆ ಥಿಯೇಟರ್‌ ತಂಡವು ಸದ್ಯಕ್ಕೆ ʼಸುಣ್ಣದ ಸುತ್ತುʼ ಎಂಬ ನಾಟಕದ ತಾಲೀಮು ನಡೆಸುತ್ತಿದ್ದು, ಈ ನಾಟಕವು ಮಾರ್ಚ್‌ 06ರಂದು ಬೆಂಗಳೂರಿನ ಕಲಾಗ್ರಾಮ ಮಲ್ಲತಹಳ್ಳಿಯಲ್ಲಿ ಸಂಜೆ 07ಕ್ಕೆ ಪ್ರದರ್ಶನಗೊಳ್ಳಲಿದೆ.

ಒಂದು ಸಾಮ್ರಾಜ್ಯ, ಆ ಸಾಮ್ರಾಜ್ಯದಲ್ಲಿ ರಕ್ತ ಸಂಬಂಧಗಳ ಬೆಲೆ ಗೊತ್ತಿಲ್ಲದೆ, ಕೇವಲ ಹಣ ಬಂಗಾರದ ಬಗ್ಗೆ ಯೋಚಿಸುವ ರಾಣಿ. ಯಾವಗ ರಾಜನ ಬೆನ್ನಿಗೆ ಕತ್ತಿ ಚುಚ್ಚುತ್ತೀನೆಂದು ಸಂಚು ಹೂಡೋ ಮರಿದೊರೆ. ಇವರುಗಳ ಮಧ್ಯೆ ಇವರ ಮಸಲತ್ತಿನ ಯೋಜನೆಗಳಿಗೆ ಬಲಿಯಾಗಿ ದೂರ ಉಳಿಯುವ ಪ್ರೇಮಿಗಳು. ಮರಿದೊರೆ ಸಂಚಿನಿಂದ ಸುಳ್ಳು ಪ್ರೀತಿ ತೋರುವ ತಾಯಿಂದ ದೂರಾಗಿ, ನಿಜ ಪ್ರೀತಿ ಪಡೆದುಕೊಳ್ಳುವ ಎಳೆಗೂಸಿನ ಸುತ್ತ ಈ ನಾಟಕವನ್ನು ಕಟ್ಟಿಕೊಟ್ಟಿದ್ದಾರೆ.

ಒಂದು ಕಡೆ ಮರಿದೊರೆಗೆ ಮಗು ಕಂಡರೆ ಕೊಂದು ಬಿಡುವನಲ್ಲ ಎನ್ನುವ ಭಯವಿದ್ದರೆ, ಇತ್ತ ಯುದ್ದಕ್ಕೆ ಹೋದ ಪೇಮಿ ಬರುವ ದಾರಿ ಕಾಯುತ್ತ, ಸೊರಗಿ ಕೂತು, ಜತೆಗೆ ತನ್ನದಲ್ಲದ ಮಗುವನ್ನು ನನ್ನದೆಂದು ಭಾವಿಸಿ, ಆ ಮುಗುವಿಗೆ ಲಾಲನೆ, ಪಾಲನೆ, ಪ್ರೀತಿ, ಕಾಳಜಿ ತೋರುವ ಹೆಣ್ಣಿಗೆ, ಕೊನೆಗೊಂದು ಅಗ್ನಿ ಪರೀಕ್ಷೆ ಕಾದಿರುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಹಾಸನ ಮಣ್ಣಿನ ಹೆಣ್ಣು ದನಿಗಳು | ಮಾಧ್ಯಮ ಕ್ಷೇತ್ರದಲ್ಲಿ...

ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಇದು, ಅವರ ಕುರಿತು ವಿವಿಧ ಲೇಖಕ/ಲೇಖಕಿಯರಿಂದ ಒಂದು ಪುಟ್ಟ ದಾಖಲೀಕರಣ… ಸೃಜನಶೀಲತೆ,...

ಬೀದರ್ | ನಮ್ಮೂರಾಗ ಕುಡಿಲಾಕ್ ನೀರಿಲ್ಲ, ಎಲ್ರೂ ವರ್ಷಕ್ಕೆ...

ಸರ್ಕಾರಿ ನಲ್ಲಿಗಳಲ್ಲಿ ಹನಿ ನೀರಿಲ್ಲ, ಮನೆ-ಮನೆಯಲ್ಲಿ ಜೋತಾಡುತ್ತಿವೆ ಖರೀದಿ ನೀರಿನ ಪೈಪ್‌ಗಳು! ಹೋಕ್ರಾಣಾ ಗ್ರಾಮದಲ್ಲಿ ಜನರ ನೀರಿನ ದಾಹವನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬೋರ್‌ವೆಲ್‌ಗಳು ದರ್ಬಾರ್‌ ನಡೆಸುತ್ತೆವೆಯೇ? ಖುದ್ದು ಗ್ರಾಮಸ್ಥರ ಜೊತೆಗೆ ನಿಂತು...

ತಮಿಳುನಾಡು ಚುನಾವಣೆ | ಪ್ರಾದೇಶಿಕ ಸಿದ್ಧಾಂತವನ್ನು ಮೀರಿ ಬೆಳೆಯುತ್ತಾ...

ತಮಿಳುನಾಡಿನ ಪಾರಂಪರಿಕ ಮಧುರೈನ ಸುಬ್ರಮಣ್ಯಸ್ವಾಮಿ ದೇವಸ್ಥಾನ, ಅರಿಯಲೂರ್ ಜಿಲ್ಲೆಯ ಗಂಗೈಕೊಂಡ ಚೋಳಪುರಂ ಬೃಹದೀಶ್ವರ ದೇವಸ್ಥಾನ, ಮತ್ತು ತಿರುಚಿರಾಪಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿದರೂ, ತಮಿಳುನಾಡಿನ ಚೋಳ ಸಾಮ್ರಾಜ್ಯದ ಸಂಪ್ರದಾಯದ ಹಿನ್ನೆಲೆಯಿರುವ ಸೆಂಗೋಲ್...

ಈ ಸುದ್ದಿ ಓದಿದ್ದೀರಾ? ಶಿಕಾರಿಪುರ | ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ; ಆರೋಪಿ ನಾಪತ್ತೆ

ಆ ಮಗು, ಕೊನೆಗೆ ಹಣ ಮತ್ತು ಸಂಪತ್ತು ಹೊಂದಿರುವ ಹಾಗೂ ಸುಳ್ಳು ಪ್ರೀತಿ ಉಳ್ಳವರ ಪಾಲಾಗುತ್ತ ಅಥವಾ ಬಡತನದಲ್ಲಿದ್ದು, ನಿಜ ಪ್ರೀತಿ, ಕಾಳಜಿ ತೋರಿದ ಆ ಬಡ ಹೆಣ್ಣಿನ ಪಾಲಾಗುತ್ತ ಎನ್ನವಂತಹ ಕಥೆಯನ್ನು ರಚಿಸಿದ ಜರ್ಮನ್‌ನ ಚಿತ್ರಕಥೆಗಾರ ಬರ್ಟೋಲ್ಟ್ ಬ್ರೆಕ್ಟ್ ಅವರ ಕಥೆಯನ್ನು ಎಚ್‌ ಎಸ್‌ ವೆಂಕಟೇಶ್‌ ಅವರು ಕನ್ನಡಕ್ಕೆ ಅನುವಾದ ಮಾಡಿದ್ದು, ರಂಗ ನಿರ್ದೇಶಕ ಹೇಮಂತ್‌ ಕುಮಾರ್‌ ನಿರ್ದೇಶನ ಮಾಡಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಂಧನೂರು | ರೀಲ್ಸ್ ಮಾಡಲು ಹೋದ ಯುವಕ ನೀರು ಪಾಲು

ರೀಲ್ಸ್ ಮಾಡುವ ಉದ್ದೇಶದಿಂದ ಸ್ನೇಹಿತರಿಗೆ ವಿಡಿಯೋ ಮಾಡಲು ಹೇಳಿ ಈಜಲು ನದಿಗೆ...

ಗದಗ | ಆದ್ಯ ವಚನಕಾರ ದೇವರ ದಾಸಿಮಯ್ಯ: ರಾಘವೇಂದ್ರ ಕೊಪ್ಪಳ

"ಆದ್ಯ ವಚನಕಾರ ನೇಕಾರ ಸಂತ ದೇವರ ದಾಸಿಮಯ್ಯನವರು 10 ನೇ ಶತಮಾನದಲ್ಲಿ...

ಮಾರ್ಚ್ 25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ

ಬಾಗೇಪಲ್ಲಿ:-ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಮಹಾ ಒಕ್ಕೂಟದ ವತಿಯಿಂದ ಒಳ ಮೀಸಲಾತಿ...